ಮನೆ Latest News ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ

ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ

0

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ  ಪವಿತ್ರ ಗೌಡ ಆರಂಭದಿಂದಲೇ ಜೈಲಿನಲ್ಲಿ ಒಂದಿಲ್ಲೊಂದು ಕಾರಣಕ್ಕೆ ಖ್ಯಾತೆ ತೆಗೆಯುತ್ತಲೇ ಇದ್ದಾರೆ ಎನ್ನಲಾಗಿತ್ತು. ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ  ಪವಿತ್ರ ಗೌಡ ಜೈಲಿನ ಊಟ, ಅಲ್ಲಿನ ವಾತಾವರಣ, ಸೊಳ್ಳೆ ಕಡಿತ ಇದೆಲ್ಲವನ್ನು ಸಂಭಾಳಿಸೋದಕ್ಕೆ ಆಗದೇ ಪರದಾಡುತ್ತಿದ್ದಾರೆ. ಮತ್ತೊಂದು ವಾರಕ್ಕೆರಡು ಬಾರಿ ಅವರ ಮನೆಯವರು ಪವಿತ್ರ ಗೌಡ ಭೇಟಿಗೆ ಬರುತ್ತಿದ್ದು ಅವರ ಮುಂದೆ ಪ್ರತಿ ಬಾರಿ ಕಣ್ಣೀರು ಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪವಿತ್ರ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರ ಗೌಡ ಅರೆಸ್ಟ್ ಆದ 72 ದಿನಗಳ ನಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಗೆ ಜಾಮೀನು ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ತಮ್ಮ  ವಕೀಲರ ಮೂಲಕ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಇನ್ನು ಪವಿತ್ರ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಆಗಸ್ಟ್ 22 ಕ್ಕೆ ಮುಂದೂಡಿದೆ.

ಮತ್ತೊಂದು ಕಡೆ ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಹುತೇಕ ಎಲ್ಲಾ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಎಲ್ಲಾ ಎಫ್ ಎಸ್ ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಹೀಗಾಗಿ ಶೀಘ್ರದಲ್ಲೇ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಎಫ್ ಐಆರ್ ದಾಖಲಾದ 90 ದಿನಗಳ ಒಳಗೆ ತನಿಖಾ ವರದಿಯನ್ನು ಪೋಲಿಸರು ಕೋರ್ಟ್ ಸಲ್ಲಿಸಬೇಕಾರಿರೋದರಿಂದ ಸೆಪ್ಟಂಬರ್ 8ರೊಳಗೆ ಚಾರ್ಜ್ ಶೀಟನ್ನು ಸಲ್ಲಿಸಬೇಕಿದೆ. ಆರೋಪಿಗಳು ಕೂಡ ಪೊಲೀಸರು ಯಾವಾಗ ಜಾರ್ಜ್ ಶೀಟ್ ಸಲ್ಲಿಸುತ್ತಾರೆ ಎಂದು ಕಾದು ಕುಳಿತಿದ್ದಾರೆ. ಚಾರ್ಜ್ ಶೀಟ್ ನೋಡಿ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ಆರೋಪಿಗಳ ಪರವಾದ ವಕೀಲರು ನಿರ್ಧರಿಸಿದ್ದಾರೆ. ಹಾಗಾಗಿ ಸದ್ಯ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುತ್ತಲೇ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.

ಬರೋಬ್ಬರಿ 5 ತಿಂಗಳಿಂದ ಪವಿತ್ರ ಗೌಡಗೆ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ; 200ಕ್ಕೂ ಹೆಚ್ಚು ಮೆಸೇಜ್ ಗಳ ಮೂಲಕ ಟಾರ್ಚರ್

ತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಜನ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇನ್ನೂ ಕೂಡ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಅನೇಕ ಅಚ್ಚರಿಯ ವಿಚಾರಗಳು ಬಯಲಾಗಿವೆ.

ಕಳೆದ ಫೆಬ್ರವರಿಯಿಂದ ರೇಣುಕಾಸ್ವಾಮಿ ಪವಿತ್ರ ಗೌಡ ಅವರಿಗೆ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.ಆದರೆ ಆತನ ಯಾವುದೇ ಮೆಸೇಜ್ ಗೂ ಕೂಡ ಪವಿತ್ರ ಗೌಡ ಉತ್ತರಿಸಿರಲಿಲ್ಲ.ಆದರೂ ಆತ ಅಶ್ಲೀಲ ಮೆಸೇಜ್ ಕಳುಹಿಸೋದನ್ನು ಬಿಟ್ಟಿರಲಿಲ್ಲ. ನಿರಂತರವಾಗಿ ಮೆಸೇಜ್ ಮಾಡುತ್ತಲೇ ಇದ್ದ. ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಗಳನ್ನು ಕಳುಹಿಸಿದ್ದಾನೆ. ಪವಿತ್ರ ಗೌಡ ಆತನನ್ನು ಬ್ಲಾಕ್ ಮಾಡಿದ್ರೆ ಆತ ಇನ್ನೊಂದು ಅಕೌಂಟ್ ಕ್ರಿಯೇಟ್ ಮಾಡಿ ಅದರಿಂದ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಕೊನೆಗೆ ಈತನ ಕಾಟ ತಾಳಲಾರದೇ ಪವಿತ್ರ ಗೌಡ ತಮ್ಮ ಮನೆಯ ಕೆಲಸದವನಾದ ಪವನ್ ಗೆ ಹೇಳಿದ್ದಾಳೆ. ಪವನ್ ಪವಿತ್ರ ಗೌಡ ಹೆಸರಲ್ಲಿ ನಕಲಿ ಖಾತೆ ತೆರೆದು ಆತನ ಜೊತೆ ಚಾಟ್ ಮಾಡುತ್ತಾ ಆತನ ಹೆಸರು, ಊರು ಎಲ್ಲಾ ತಿಳಿದುಕೊಂಡು ಆತನ ಫೋಟೋವನ್ನು ಕಳುಹಿಸುವಂತೆ ಹೇಳಿದ್ದಾನೆ. ಆ ಬಳಿಕ ಚಿತ್ರದುರ್ಗ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಬಳಿ ಎಲ್ಲಾ ವಿಚಾರವನ್ನು ತಿಳಿಸಿ ಆತನ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿರು ಶೆಡ್ ಕರೆಸಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.