ಮನೆ Latest News ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ನಿರಾಶೆ ತಂದಿದೆ: ಗೃಹ ಸಚಿವ ಡಾ ಜಿ ಪರಮೇಶ್ವರ್...

ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ನಿರಾಶೆ ತಂದಿದೆ: ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು:ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ನಿರಾಶೆ ತಂದಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಕೇಂದ್ರದಿಂದ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಬಗ್ಗೆ ಮಾತನಾಡಿದ ಅವರು ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ನಿರಾಶೆ ತಂದಿದೆ.ಯಾವುದೇ ಪ್ರಾಮುಖ್ಯವಾದ ಯೋಜನೆ ಕೇಂದ್ರ ಸರ್ಕಾರ ಕೊಟ್ಟಿಲ್ಲ.ನಾವು ಅನೇಕ ಬೇಡಿಕೆಯಬ್ನ ಕೇಂದ್ರದ ಮುಂದೆ ಇಟ್ಟಿದ್ದೆವು.ಬಡವರಿಗೆ ಕೊಡುವ ಮನೆಯಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಕೇಳಿದ್ವಿ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಹಣ ಕೊಡಬೇಕು. ಕೇಂದ್ರದ ಅನೇಕ ಯೋಜನೆ ಸ್ಥಗಿತ ಮಾಡಿದ್ದಾರೆ.ಅದನ್ನ ಮತ್ತೆ ಮಂಜೂರಾತು ಮಾಡಬೇಕು.ಐಐಟಿ ಮತ್ತು ಐಐಎಂ ಬೇಡಿಕೆ, ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಇರುವ ರಾಜ್ಯ ಹೀಗಾಗಿ ಇದನ್ನೆಲ್ಲ ಕೊಡಬೇಕು.ಇದರ ಜೊತೆಗೆ ನೀರಾವರಿ ಯೋಜನೆಯಲ್ಲಿ ಅಪ್ಪರ್ ಭದ್ರಾಗೆ ಘೋಷಣೆ ಮಾಡಿದ್ದರು, ಅದನ್ನೂ ಕೂಡ ಮೆನ್ಷನ್ ಮಾಡಿಲ್ಲ.ಅದರ ಜೊತೆಗೆ ಆ ಯೋಜನೆ ಮಾಡೋದಕ್ಕೆ ಅನುವು ಮಾಡಿ ಕೊಟ್ಟಿಲ್ಲ. ಅದು ಕೂಡ ನಿರಾಶೆ ಮಾಡಿದ್ದಾರೆ ಎಂದಿದ್ದಾರೆ.

ಮೇಕೆ ದಾಟು ಯೋಜನೆಗೆ ಹಣ ಕೇಳಿದ್ವಿ, ಅದನ್ನೂ ಮೆನ್ಷನ್ ಕೂಡ ಮಾಡಿಲ್ಲ. ಬೆಂಗಳೂರು ವೇಗ ಬೆಳೆಯುತ್ತಿದೆ, ಜನ ಬರ್ತಿದ್ದಾರೆ.ಹೀಗಾಗಿ ಬೆಂಗಳೂರು ಹೆಚ್ಚು ಬೆಳೆಸೋದಕ್ಕೆ‌ ಪೆರಿಪರೋಲ್ ಗೆ ಹಣ ನೀಡಿಲ್ಲ. ಕೇಂದ್ರ ದ ಬಜೆಟ್ ರಾಜ್ಯ ಕ್ಕೆ ನಿರಾಶೆ ತಂದಿದೆ.ಅವರ ಭಾಷೆಯಲ್ಲಿ ಚೆಂಬು ಕೊಟ್ಟಿದ್ದಾರೆ.ಯಾವುದೇ ರೀತಿಯ ಸಹಾಯ ಕೇಂದ್ರ ಬಜೆಟ್ ನಿಂದ ಅಗಿಲ್ಲ.ಕೃಷಿ ಉತ್ಪಾದನೆ ಹೆಚ್ಚಾಗೋದಕ್ಕೆ ಆಗಲಿ, ಅಥವಾ ಸಾಲ ಕೊಡೋದಾಗಿ ಒಇ ಕ್ಷೇತ್ರಕ್ಕೆ ತಿರಸ್ಕಾರ ಮಾಡಿದ್ದಾರೆ.ಕೃಷಿ ಕ್ಷೇತ್ರಕ್ಕೆ ಸಹಾಯ ದಿಂದ ಉತ್ತೇಜನ ದಿಂದ ವಂಚನೆ ಆಗಿದೆ.೫೦ ಲಕ್ಷಕೋಟಿ ಬಜೆಟ್ ಕೊಟ್ಟಿದ್ದಾರೆ, ಅದರಲ್ಲಿ ೧೫ ಲಕ್ಷ ಕೋಟಿ ಸಾಲ ಆಗಿರೋದು.ಆ ಸಾಲವನ್ನು ತೀರಿಸೋದಕ್ಕೆ ಪ್ರಾವೀಜನ್ ಮಾಡಿಕೊಂಡಂತಿದೆ.ಇಡೀ ಬಜೆಟ್ ನಲ್ಲಿ ೩೫% ಸಾಲಕ್ಕೆ ಹೋಗುತ್ತದೆ.ಈ ಬಜೆಟ್ ಇಡೀ ದೇಶಕ್ಕೆ ಉತ್ತೇಜನಕಾರಿಯಾಗಿಲ್ಲ ಎಂದಿದ್ದಾರೆ.

ಇನ್ನು ದೆಹಲಿಗೆ ಹೋಗುವ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಹೋಗುಬೇಕು ಅಂದುಕೊಂಡಿದ್ದೇನೆ. ಯಾವಾಗ ಅಂತ ಇನ್ನೂ ಡಿಸೈಡ್ ಆಗಿಲ್ಲ.ರಾಜಕೀಯ ಕ್ಕಾಗಿ ಅಲ್ಲಿಗೆ ಹೋಗಬೇಕಾಗಿಲ್ಲ.ಬೇರೆ ಇಲಾಖೆ ಕೆಲಸ ಇರೋದ್ರಿಂದ ನಾವು ಅಲ್ಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಬಿ ಆರ್ ಪಾಟೀಲ್ ರಾಜೀನಾಮೆ ಯಾಕೆ ಕೊಟ್ರು ಅಂತ ಗೊತ್ತಿಲ್ಲ.ಅವರು ಯಾಕೆ ರಾಜೀನಾಮೆ ಕೊಟ್ರು ಅಂತ ಸಿಎಂಗೆ ಹೇಳಿರ್ತಾರಲ್ಲ.ಅವರಿಗೆ ಏನು ಅಸಮಧಾನ ಅಂತ ಗೊತ್ತಿಲ್ಲ, ರಾಜೀನಾಮೆ ಕೊಟ್ಟ ಬಗ್ಗೆಯೂ ಗೊತ್ತಿಲ್ಲ ಎಂದ ಅವರು ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮಸೂದೆ ವಿಚಾರದ ಬಗ್ಗೆ ಮಾತನಾಡಿ ಮಸೂದೆ ಮಾಡಿದ ಮೇಲೆ ಕೋರ್ಟಿನಲ್ಲಿ ಸ್ಟೇ ಆಗಬಾರದು.ಈಗ ಇರುವ ಬೇರೆ ಬೇರೆ‌ಕಾನೂನುಗಳನ್ನು ಲಿಂಕ್ ಮಾಡಿ ಹೊಸ ಮಸೂದೆ ಮಾಡಲು ಅಧಿಕಾರಿಗಳಿಗೆ ಸಿಎಂ ಹೇಳಿದ್ದಾರೆ.ಮಸೂದೆ ಕರಡು ಆದಷ್ಟು ಬೇಗ ಮುಗಿದರೆ ರಾಜ್ಯಪಾಲರ ಒಪ್ಪಿಗೆಗೆ ಕಳಿಸಲಾಗುತ್ತೆ ಎಂದರು.

ನವೆಂಬರ್ ನಲ್ಲಿ ಸಿದ್ದರಾಮಯ್ಯ ಸಿಎಂ ಅವಧಿ ಮುಕ್ತಾಯ ಎಂಬ ಅಶೋಕ್ ಹೇಳಿಕೆ ಬಗ್ಗೆ ಮಾತನಾಡಿ ಆರ್ ಅಶೋಕ್ ಅವರು ಯಾವಾಗ ಭವಿಷ್ಯ ಹೇಳೋದನ್ನು ಕಲಿತ್ರು ಅಂತ ಗೊತ್ತಿಲ್ಲ ನಮಗೆ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ನಾವೆಲ್ಲ ಐದೂ ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಅಂತ ಅನ್ಕೊಂಡಿದೀವಿ.ಸಿಎಲ್‌ಪಿ ಸಭೆಯಲ್ಲಿ ಸಿಎಂ ಆಯ್ಕೆ ಆಯ್ತು.ಆ ಸಂದರ್ಭದಲ್ಲಿ ಅವ್ರು ಎರಡೂವರೆ ವರ್ಷ ಮಾತ್ರ ಇರ್ತಾರೆ ಅಂತ ನಮಗೇನೂ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರ್ತಾರೆ ಅನ್ಕೊಂಡಿದ್ದೀವಿ. ಈ‌ ಮಧ್ಯೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದರು.