ಮನೆ Latest News ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದ ಬಳಕೆ ಪ್ರಕರಣ: ಸಭಾಪತಿ ಹೊರಟ್ಟಿ ಬರೆದ ಪತ್ರ ನನಗೆ...

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದ ಬಳಕೆ ಪ್ರಕರಣ: ಸಭಾಪತಿ ಹೊರಟ್ಟಿ ಬರೆದ ಪತ್ರ ನನಗೆ ತಲುಪಿಲ್ಲ ಎಂದ ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು ; ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬರೆದ ಪತ್ರ ನನಗೆ ತಲುಪಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ  ಗೃಹ ಸಚಿವ ಪರಮೇಶ್ವರ್ ಪತ್ರ ಬರೆದ ಬಗ್ಗೆ ಮಾಧ್ಯಮದಲ್ಲಿ ನೋಡಿದೆ.ಆದರೆ ನನಗೆ ಪತ್ರ ತಲುಪಿಲ್ಲ.ನನ್ನ ಕಚೇರಿಗೆ ತಲುಪಿದೇಯಾ ನೋಡುತ್ತೇನೆ. ಪತ್ರದಲ್ಲಿ ಏನಿದೆ ಅಂತ ನೋಡುತ್ತೇನೆ. ಕಾನೂನು ಸಲಹೆಗಾರರ ಸಲಹೆ ಪಡೆದು ನಿರ್ಧಾರ ಮಾಡುತ್ತೇನೆ. ಕಾನೂನು ಎಲ್ಲರಿಗೂ ಒಂದೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.ಆ ಸಂದರ್ಭದಲ್ಲಿ ಏನು ತೀರ್ಮಾನ ಆಗಿದೆ. ಹೆಬ್ಬಾಳ್ಕರ್ ದೂರಿನ ಮೇಲೆ ಪೊಲೀಸ್ ಕ್ರಮ ಮಾಡುತ್ತೇವೆ.ಸಿಓಡಿಗೆ ಕೊಟ್ಟಿದ್ದು ಅನಾವಶ್ಯಕ ಗೊಂದಲ ಆಗಬಾರದು.ಸಭಾಪತಿ ಮತ್ತು ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಸಿ ಟಿ ರವಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಯಾರೆ ಪತ್ರ ಬರೆದಿದ್ರು‌ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ರು. ಇದೇ ವೇಳೆ ಪಕ್ಷ ಉಂಟು ನಾನುಂಟು ಎಂಬ ಡಿಕೆಶಿಯವರ ವೈರಾಗ್ಯದ ಮಾತಿಗೆ ಪ್ರತಿಕ್ರಿಯಿಸಿದ ಅವರು ಒಳ್ಳೆಯ ತೀರ್ಮಾನ ಅದು. ಯಾಕೆಂದರೆ ಪಕ್ಷ ಅಂತಿಮವಾಗಿ ಏನು ತೀರ್ಮಾನ ಮಾಡುತ್ತೋ ನಾವೆಲ್ಲ ಅದನ್ನು ಒಪ್ಕೋತೇವೆ. ಹಾಗಾಗಿ ನಾವೆಲ್ಲ ಅಂತಿಮವಾಗಿ ಹೈಕಮಾಂಡ್ ಅಂತಾನೇ ಹೇಳೋದು. ಪಕ್ಷದ ತೀರ್ಮಾನ ಏನಾಗುತ್ತೋ ಅಂತಿಮವಾಗಿ ಅದೇ ಆಗೋದು. ನಿನ್ನೆ ಕೂಡಾ ನಾನು ಅದನ್ನೇ ಹೇಳಿದ್ದೆ, ಪಕ್ಷ ಏನು ಹೇಳುತ್ತೋ ನಾವೆಲ್ಲ ಅಂತಿಮವಾಗಿ ಅದೇ ಒಪ್ಕೋತೇವೆ ಅಂದಿದ್ದೆ. ಶಿವಕುಮಾರ್ ಸಹ ಅದೇ ಮಾತಾಡಿದ್ದಾರೆ, ಬಹಳ ಸಂತೋಷ. ಪಕ್ಷದ ಚೌಕಟ್ಟಿನಲ್ಲಿ ಹೋಗೋದು ನಮ್ಮೆಲ್ಲರ ಕರ್ತವ್ಯ, ಅದನ್ನು ನಾವು ಮಾಡ್ತೇವೆ ಎಂದಿದ್ದಾರೆ.

ನಕ್ಸಲರ ಶರಣಾಗತಿ ಬಗ್ಗೆ ಬಿ ಟಿ ಲಲಿತಾ ನಾಯಕ್ ನೀಡಿರುವ ಪ್ರತಿಕ್ರಿಯಿ ಬಗ್ಗೆ ಮಾತನಾಡಿದ ಅವರು ಶರಣಾಗತಿ ಅಂದ್ರೆ ಶಸ್ತ್ರಾಸ್ತ್ರ ತ್ಯಜಿಸಿ ಬಂದರಲ್ಲ ಅದೇ ಶರಣಾಗತಿ. ಅವರ ಹೋರಾಟಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ, ಸಂವಿಧಾನ ಹೇಳಿದ ದಾರಿಯಲ್ಲಿ ಹೋರಾಟ ಮಾಡಲಿ. ಆದರೆ ಶಸ್ತ್ರ‌ಗಳ ಬಳಕೆ ಮಾಡುವ ಮಾರ್ಗ ಬೇಡ . ಶಸ್ತ್ರಗಳ ದಾರಿ ಹಿಡಿಯಲ್ಲ ಅಂತ ನಕ್ಸಲರು ಹೇಳಿದ್ದಾರೆ. ಮೂರು ವರ್ಷ ಸರ್ಕಾರ ಇರುತ್ತಲ್ಲ, ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಆಗುತ್ತೆ ಎಂದು ತಿಳಿಸಿ