ಬೆಂಗಳೂರು: ಕಡೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಹತ್ಯೆಗೇನು ಕಾರಣ ಅಂತ ತನಿಖೆಯಲ್ಲಿ ಗೊತ್ತಾಗುತ್ತೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಆ ಪ್ರಕರಣದ ತನಿಖಾ ವರದಿ ಬರಲಿ. ಹತ್ಯೆಗೇನು ಕಾರಣ ಅಂತ ತನಿಖೆಯಲ್ಲಿ ಗೊತ್ತಾಗುತ್ತೆ. ಸ್ಥಳೀಯವಾಗಿ ಪೊಲೀಸರು ಕ್ರಮ ತಗೋತಾರೆ. ಸರ್ಕಾರಕ್ಕೂ ವರದಿ ಕೊಡ್ತಾರೆ. ನಾವು ಪೊಲೀಸರಿಗೆ ಏನು ಸೂಚನೆ ಕೊಡಬೇಕೋ ಕೊಡ್ತೇವೆ ಎಂದ ಅವರು ಪೊಲೀಸರು ತನಿಖೆ ಮಾಡ್ತಾರೆ. ತನಿಖೆಯಲ್ಲಿ ಯಾರು ಅಂತ ಗೊತ್ತಾಗುತ್ತೆ. ಸದನದಲ್ಲಿ ಧರ್ಮಸ್ಥಳ ಪ್ರಕರಣಗಳ ಕುರಿತ ವರದಿ ಬಗ್ಗೆ ಅಪ್ಡೇಟ್ ಕೊಡ್ತೇವೆ. ಬಿಜೆಪಿಯವ್ರು ಪ್ರಶ್ನೆ ಮಾಡಿದ್ರೆ ಉತ್ತರ ಕೊಡ್ತೇವೆ. ಈಗಾಗಲೇ ಎಸ್ಐಟಿ ವರದಿ ಸಲ್ಲಿಕೆ ಆಗಿದೆ. ಕೋರ್ಟ್ ಗೂ ಸರ್ಕಾರಕ್ಕೂ ವರದಿ ಸಲ್ಲಿಕೆ ಆಗಿದೆ. ವಸ್ತುಸ್ಥಿತಿ ಬಗ್ಗೆ ಹೇಳ್ತೇವೆ, ಯಾವುದೇ ಮುಚ್ಚುಮರೆ ಇಲ್ಲ ಎಂದಿದ್ದಾರೆ.
ಪಠ್ಯದಲ್ಲಿ ಭಗವದ್ಗೀತೆ ವಿಷಯ ಸೇರಿಸಲು ಧರ್ಮೇಂದ್ರ ಪ್ರಧಾನ್ ಗೆ ಹೆಚ್ಡಿಕೆ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ಅವರಿಗೆ ಏನು ಅನಿಸಿದೆಯೋ ಅದನ್ನು ಅವರು ಕೇಂದ್ರಕ್ಕೆ ಬರೆದಿದ್ದಾರೆ. ಅದೆಲ್ಲ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ಸದನದಲ್ಲಿ ಬಿಜೆಪಿಯಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಬಿಜೆಪಿಯವರು ಸದನದಲ್ಲಿ ಚರ್ಚೆ ಮಾಡಲಿ.ನಾವು ಅದಕ್ಕೆ ಸೂಕ್ತ ಉತ್ತರ ಕೊಡ್ತೇವೆ. ಅಂಕಿ ಅಂಶ ಸಮೇತ ಸಮಂಜಸ ಉತ್ತರ ಕೊಡ್ತೇವೆ. ಅವರ ಅವಧಿಯಲ್ಲಿ ಏನೆಲ್ಲ ಆಗಿತ್ತು, ನಮ್ಮ ಅವಧಿಯಲ್ಲಿ ಏನಾಗಿದೆ. ನಾವು ಏನು ಕ್ರಮ ತಗೊಂಡಿದ್ದೀವಿ ಅಂತ ಉತ್ತರ ಕೊಡ್ತೇವೆ.ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಘಟನೆಗಳು ಯಾವಾಗ ಆದವು. ಬಹಳಷ್ಟು ಘಟನೆಗಳು ಯಾವಾಗ ಆದವು ಅಂತ ಹೇಳ್ತೇವೆ. ಯಾರ ಆಡಳಿತದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ ಅಂತ ಹೇಳ್ತೇವೆ. ನಮ್ಮ ಅವಧಿಯಲ್ಲಿ ಏನಾಗಿದೆ, ಅದಕ್ಕೇನು ಕ್ರಮ ವಹಿಸಲಾಗಿದೆ ಹೇಳ್ತೇವೆ. ಹಳೆಯ ವಿಡಿಯೋಗಳನ್ನು ಹಾಕಿ ಈಗ ನಡೆದವು ಬಿಂಬಿಸಲಾಗಿದೆ, ಇದರ ಬಗ್ಗೆಯೂ ಹೇಳ್ತೇವೆ. ಬಿಜೆಪಿ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಅಂತ ಹೇಳ್ತೇವೆ ಎಂದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆಶಿಗೆ ನೊಟೀಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನೋಟೀಸ್ ಕೊಟ್ಟಿದ್ರೆ ಅದಕ್ಕೆ ಅವರು ಉತ್ತರ ಕೊಡ್ತಾರೆ ಎಂದರು.ಸತೀಶ್ ಜಾರಕಿಹೊಳಿ ಜೊತೆ ಡಿಕೆಶಿ, ಪರಮೇಶ್ವರ್ ಪದೇಪದೆ ಭೇಟಿ ವಿಚಾರದ ಬಗ್ಗೆ ಮಾತನಾಡಿ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರು, ಬಹಳ ಮುಖ್ಯವಾದ ಖಾತೆ ಅದು. ಕೆಲವು ಸಂದರ್ಭಗಳಲ್ಲಿ ನಮ್ಮ ಜಿಲ್ಲೆಗಳ ಕೆಲಸಗಳಿರುತ್ತವೆ, ಅದಕ್ಕೆ ಹೋಗಿರ್ತೇವೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ಮಾತಾಡಲು ಸಹ ಹೋಗಿರ್ತೇವೆ.ಅದರಲ್ಲೇನು ಮುಚ್ಚುಮರೆ ಇದೆ? ಮುಚ್ಚಿಡುವಂಥದ್ದೇನೂ ಇಲ್ಲ. ನಾವು ನಾಲ್ಕೈದು ಜನ ಸೇರಿದ್ವಿ, ಊಟ ಮಾಡಿದ್ವಿ, ತಿಂಡಿ ತಿಂದ್ವಿ, ರಾಜಕೀಯ ಮಾತಾಡಿದ್ವಿ. ಅದರಲ್ಲಿ ಏನು ತಪ್ಪಿದೆ?ಚರ್ಚೆ ಮಾಡಬಾರದು ಅಂತ ನಿಯಮ ಇದೆಯಾ?. ನಿಮಗೇಕೆ ಇದರಲ್ಲಿ ಆಸಕ್ತಿ. ನಾವೆಲ್ಲ ಮಾಡೋದೇ, ಮಾಡ್ತಿರೋದೇ ರಾಜಕಾರಣ. ಸರ್ಕಾರದ ಪಾಲಿಸಿಗಳು, ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ಮಾಡಿದೀವಿ. ಎಲ್ಲವನ್ನೂ ಚರ್ಚೆ ಮಾಡಿದೀವಿ ಎಂದಿದ್ದಾರೆ.
ಕಾರ್ಟಿಯರ್ ವಾಚ್ ವಿವಾದದ ಬಗ್ಗೆ ಮಾತನಾಡಿದ ಅವರು ಡಿಕೆಶಿ ಅವರು ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ಡಿಕೆಶಿ ಸ್ಪಷ್ಟನೆ ಕೊಟ್ಟಿದ್ದಾರಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ನಲ್ಲಿ ಗೊಂದಲ ಇಲ್ಲ. ಗೊಂದಲಗಳಿಗೆ ಫುಲ್‌ಸ್ಟಾಪ್ ಬಿದ್ದಿದೆ. ಅಧಿವೇಶನದವರೆಗೆ ಯಾಕೆ ಹೋಗ್ತೀರಿ, ಈಗಲೇ ಫುಲ್‌ಸ್ಟಾಪ್ ಬಿದ್ದಿದೆ. ಗೊಂದಲ ಮಾಧ್ಯಮಗಳಲ್ಲಷ್ಟೇ ಜೀವಂತ ಇದೆ.ಸಿಎಲ್‌ಪಿ ಸಭೆಯಲ್ಲಿ ಅದಿವೇಶನದಲ್ಲಿ ಚರ್ಚೆ ನಡೆಸುವ ವಿಷಯ, ವಿಪಕ್ಷಗಳಿಗೆ ಉತ್ತರ ಕೊಡೋ ಬಗ್ಗೆ ಚರ್ಚೆ ಮಾಡ್ತೇವೆ.ಸಿಎಲ್‌ಪಿ ಸಭೆಯಲ್ಲಿ ರಾಜಕೀಯ ವಿಚಾರಗಳ ಚರ್ಚೆ ಆಗಲ್ಲ. ಅದನ್ನು ನೀವು ನಿರೀಕ್ಷೆ ಮಾಡಲೂ ಬೇಡಿ ಎಂದಿದ್ದಾರೆ.










