ಮನೆ Latest News ಮತ್ತೆ ಸಮೀಕ್ಷೆ ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತಗೋಬೇಕು : ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್...

ಮತ್ತೆ ಸಮೀಕ್ಷೆ ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತಗೋಬೇಕು : ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು : ಮತ್ತೆ ಸಮೀಕ್ಷೆ ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತಗೋಬೇಕು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಸಮೀಕ್ಷೆಗೆ ಅವಧಿ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಕೊಪ್ಪಳಕ್ಕೆ ಹೋಗಿದ್ದಾರೆ. ಕೊಪ್ಪಳದಿಂದ ಬಂದ ಮೇಲೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಮಾಡ್ತಾರೆ.

ಜಿಲ್ಲಾವಾರು‌ ಅಂಕಿ ಅಂಶ ಪಡೆದು ಚರ್ಚೆ ಮಾಡ್ತಾರೆ. ಕೆಲವು ಜಿಲ್ಲೆಗಳಲ್ಲಿ ಕಡಿಮೆ ಆಗಿದೆ. ಮತ್ತೆ ವಿಸ್ತರಣೆ ಮಾಡಲು ಸಿಎಂ ತೀರ್ಮಾನ ತಗೋಬೇಕು. ಗೊಂದಲಗಳು ಸಣ್ಣಪುಟ್ಟ ಆಗೋದು ಸಹಜ. ಎಲ್ಲರೂ ಸಹಕರಿಸಿದರೆ ಸರಿಯಾಗಿ ನಡೆಯುತ್ತೆ ಎಂದಿದ್ದಾರೆ.

ಬಿಜೆಪಿಯವ್ರು ಅವರ ಅಭಿಪ್ರಾಯ ಹೇಳ್ತಾರೆ, ನಾವು ಸರ್ಕಾರವಾಗಿ ಏನು ಮಾಡಬೇಕೋ ಅದನ್ನು ಜವಾಬ್ದಾರಿಯಿಂದ ಮಾಡ್ತೇವೆ. 80% ಸಮೀಕ್ಷೆ ಆಗಿದೆ, ಇನ್ನೂ 20% ಆದರೆ ಮುಗಿಯುತ್ತೆ. ಇನ್ನೊಂದೆರಡು ದಿನ ವಿಸ್ತರಣೆ ಮಾಡಿದರೆ ಮುಗಿಬೋದು ಎಂದು ತಿಳಿಸಿದ್ದಾರೆ.

ಸಿಎಂ ಹುದ್ದೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಅವರೇ ಹೇಳಿದ್ದಾರಲ್ಲ, ತಾವೇ ಐದು ವರ್ಷ ಸಿಎಂ ಆಗಿ ಇರ್ತೇನೆ ಅಂತ. ನಮ್ಮಲ್ಲಿ ಏನೂ ಗೊಂದಲಗಳಿಲ್ಲ.ಮಾತಾಡೋರು ಮಾತಾಡಿಕೊಳ್ತಾರೆ, ಸಿಎಂಗೇನು ಜವಾಬ್ದಾರಿ ಇಲ್ವಾ?ಎಂದಿದ್ದಾರೆ.

ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೇರೆ ರಾಜ್ಯಗಳಲ್ಲಿ ಎಷ್ಟೆಷ್ಟು ವಯೋಮಿತಿ ಇದೆ ಅಂತ ತರಿಸಿಕೊಂಡಿದ್ದೇವೆ. ಇನ್ನು ಕೆಲವು ದಿನಗಳಲ್ಲಿ ಪೊಲೀಸ್ ಹುದ್ದೆಗಳಿಗೆ ಶಾಶ್ವತ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಮಾಡ್ತೇವೆ ಎಂದ ಅವರು

ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಕೆ ಎನ್ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಹಾಗಂದ್ರು ಅಂತ ನಾನೇನು ಮಾಡಲಿ? ಅವರು ಹೀಗಂದ್ರು ಇವರು ಹಾಗಂದ್ರು ಅಂತ ನನ್ನೇಕೆ ಕೇಳ್ತೀರಿ ಎಂದು ಪ್ರಶ್ನಿಸಿದ್ದಾರೆ.