ಮನೆ Latest News ಸೋತಾಗಲೇ ಆರೋಪ ಮಾಡ್ತಿಲ್ಲ.. ಗೆದ್ದಾಗಲೂ ಆರೋಪ ಮಾಡ್ತಿದ್ದೇವೆ: ಸಿ ಟಿ ರವಿ ಹೇಳಿಕೆಗೆ ಗೃಹ ಸಚಿವ...

ಸೋತಾಗಲೇ ಆರೋಪ ಮಾಡ್ತಿಲ್ಲ.. ಗೆದ್ದಾಗಲೂ ಆರೋಪ ಮಾಡ್ತಿದ್ದೇವೆ: ಸಿ ಟಿ ರವಿ ಹೇಳಿಕೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿರುಗೇಟು

0

ಬೆಂಗಳೂರು: EVM ಹ್ಯಾಕ್ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿಕೆ ಸಿಟಿ ರವಿ ವಿರೋಧ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.

ನಾವು ಮೊದಲಿನಿಂದಲೂ ಆರೋಪ ಮಾಡ್ತಿದ್ದೇವೆ. ಸೋತಾಗಲೇ ಆರೋಪ ಮಾಡ್ತಿಲ್ಲ. ಗೆದ್ದಾಗಲೂ ಆರೋಪ ಮಾಡ್ತಿದ್ದೇವೆ. ನಾನು ಹೇಳಿದ್ದು ಏನೂ ಎಂದು ಮೊದಲು ಅರ್ಥ ಮಾಡಿಕೊಳ್ಳಲು ಹೇಳಿ. ನಾನು ಹೇಳಿದ್ದು ಸೆಲೆಕ್ಟ್ ವ್ಯೂ ಆಗಿ ಮಾಡ್ತಾರೆ.. ಸೆಲೆಕ್ಟ್ ವ್ಯೂ ಆಗಿ ರಾಜ್ಯ, ಕ್ಷೇತ್ರ ಆಯ್ಕೆ ಮಾಡಿಕೊಳ್ತಾರೆ ಅಂತ. EVM ಹ್ಯಾಕ್ ಮಾಡ್ತಾರೆ ಅಂತ ನಾವು ಏನೂ ಹೊಸದಾಗಿ ಹೇಳ್ತಿಲ್ಲ. ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. 2013ರ ಚುನಾವಣೆಯಿಂದಲೂ ಚುನಾವಣೆಯಲ್ಲಿ ಗೆಲುವಿಗಾಗಿ ಹ್ಯಾಕ್ ಮಾಡಿದ್ದಾರೆ ಅಂತ ಹೇಳಿದ್ದೇವೆ ಎಂದಿದ್ದಾರೆ.

ಬರೀ ನಾನು ಒಬ್ಬನೇ ಹೇಳಿದ್ರೆ ಹುಚ್ಚ ಅನ್ನಬಹುದು ನನ್ನ. ಆದ್ರೆ ದೇಶದ ಜನ ಹೇಳ್ತಾರೆ ಅಲ್ವಾ..? ಮಹಾರಾಷ್ಟ್ರ ಚುನಾವಣೆ ವಿಶ್ಲೇಷಣೆ ಮಾಡುವಾಗ ಆ ರೀತಿ ಒಂದು ಚರ್ಚೆ ಆಗಿದೆ ಅಂತ ಹೇಳಿದ್ದೇನೆ. ರವಿಗೆ ಅರ್ಥ ಮಾಡಿಕೊಳ್ಳಲು ಬಂದಿಲ್ಲ ಪಾಪ ಎಂದು ವ್ಯಂಗ್ಯ ಮಾಡಿದ್ದಾರೆ.