ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ನಲಪಾಡ್ ಗೆ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ಸಂಪೂರ್ಣವಾದ ಮೇಲೆ ಪ್ರತಿಕ್ರಿಯಿಸ್ತೀನಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇದು ತನಿಖೆಯ ಒಂದು ಭಾಗ ತನಿಖೆ ಆಗ್ತಾ ಇದೆ. ಪೊಲೀಸ್ ಅಧಿಕಾರಿಗಳಿಗೆ ಯಾರು ಯಾರನ್ನ ಕರೆದು ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ಆ ಪ್ರಕ್ರಿಯೆ ಮಾಡ್ತಾ ಇದ್ದಾರೆ ಅದರಲ್ಲಿ ಅವರು ಒಬ್ಬರು. ಯಾವ ರೀತಿ ವ್ಯವಹಾರ ಇದೆ ಪತ್ತೆ ಮಾಡ್ತಾರೆ. ಹಣಕಾಸಿನ ವ್ಯವಹಾರ ಇದೀಯಾ ಇಲ್ವ.ತನಿಖೆ ನಡೆಯುವಾಗ ಒಂದೊಂದು ಹಂತದಲ್ಲಿ ಇಬ್ಬರನ್ನ ಕರೆದಾಗ ನಾವು ಸರ್ಕಾರ ಹೇಳಿಕೆ ಕೋಡೋಕೆ ಆಗಲ್ಲ.ಸಂಪೂರ್ಣವಾದ ಮೇಲೆ ಹೇಳ್ತೀನಿ ಎಂದು ಪರಮೇಶ್ವರ್ ಹೇಳಿದ್ದಾರೆ.
ಎರಡನೇ ಏರ್ಪೋರ್ಟ್ ಬಿಡದಿ,ತುಮಕೂರಿನ ಮಾಡುವ ಕುರಿತು ತೀವ್ರ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಲ್ಲ ಅದರ ಬಗ್ಗೆ ಚರ್ಚೆ ಯಾಕೆ ಅಂತಾ ಮರು ಪ್ರಶ್ನೆ ಹಾಕಿದ್ದಾರೆ. ನೀವು ಕೂಡ ಅದರ ಬಗ್ಗೆ ಚರ್ಚೆ ಯಾಕೆ ಮಾಡ್ತೀರಾ.ಸರ್ಕಾರ ಅಂತಿಮವಾಗಿ ಒಂದು ನಿರ್ಧಾರ ತೆಗೆದುಕೊಳ್ಳುತ್ತೆ. ಇದು ತಾಂತ್ರಿಕ ವಿಚಾರ ಅದನ್ನು ಚರ್ಚೆ ಮಾಡಿ.ಅದರ ಸಾಧಕ ಬಾಧಕಗಳನ್ನ ಮಾಡಿ ಮಾಡ್ತಾರೆ.ಅದಕ್ಕೆ ಯಾಕೆ ಚರ್ಚೆ ಆಗತ್ಯವಿಲ್ಲ.Its a infrastructure project .ಜನ ಸಮುದಾಯಕ್ಕೆ ರಾಜ್ಯಕ್ಕೆ ಅನುಕೂಲ ಆಗಬೇಕು ಅಂತ ಹೇಳಿ ಮಾಡ್ತಾ ಇರೋದು.ಬಿಡಿದಿಯಲ್ಲಿ ಅದ್ರೆ ಎಷ್ಟು ಪ್ರಮಾಣದಲ್ಲಿ ಅನುಕೂಲ ಆಗುತ್ತೋ.ತುಮಕೂರಿನಲ್ಲಿ ಅದ್ರೆ ಅಷ್ಟೇ ಅನುಕೂಲ ಆಗುತ್ತೆ.ನಮ್ಮ ಬೇಡಿಕೆ ನಾವು ಇಟ್ಟಿದ್ದೇವೆ ಅಷ್ಟೇ.ಇದಕ್ಕೆ ಚರ್ಚೆ ಮಾಡಿ ಗೊಂದಲ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮೈಕ್ರೋ ಫೈನಾನ್ಸ್ ಬಿಲ್ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ನನಗೆ ಗೊತ್ತಿಲ್ಲ,.ಗೌರ್ನರ್ ಗೆ ಹೋಗಿದೆ ಅದು ರುಜು ಆಗಿ ಬರಬೇಕು ಅಷ್ಟೇ.ಅಥವಾ ಅವರು ಏನಾದರೂ ಆಬ್ಸರ್ವೇಷನ್ ಮಾಡಿದ್ರೆ.ನಾವು ಮತ್ತೆ ಸರಿಮಾಡಿ ಕಳಿಸ್ತೀವಿ.ಅಷ್ಟು ಬಿಟ್ರೆ ಬೇರೆ ಇನ್ನೇನು ಗೊತ್ತಿಲ್ಲ ಎಂದ್ರು.