ಮನೆ Latest News ಕುಮಾರಸ್ವಾಮಿ ಅವ್ರು 60% ಕಮೀಷನ್ ಆರೋಪಕ್ಕೆ ಟಕ್ಕರ್ ಕೊಟ್ಟ ಗೃಹ ಸಚಿವ ಡಾ ಜಿ ಪರಮೇಶ್ವರ್

ಕುಮಾರಸ್ವಾಮಿ ಅವ್ರು 60% ಕಮೀಷನ್ ಆರೋಪಕ್ಕೆ ಟಕ್ಕರ್ ಕೊಟ್ಟ ಗೃಹ ಸಚಿವ ಡಾ ಜಿ ಪರಮೇಶ್ವರ್

0

ಬೆಂಗಳೂರು; ಕುಮಾರಸ್ವಾಮಿ ಅವ್ರು 60% ಕಮೀಷನ್ ಆರೋಪಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಟಕ್ಕರ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು  ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದವರು, ಕೇಂದ್ರದ ಮಂತ್ರಿ ಅವರು ಆರೋಪ ಮಾಡಿದ್ದಾರೆ ಅಂದ್ರೆ ನಾವು ಗಂಭೀರವಾಗಿಯೇ ತಗೋತೇವೆ. ಈ ಆರೋಪವನ್ನು ಸಿಎಂ ನಿರಾಕರಿಸಿದ್ದಾರೆ, ದಾಖಲೆ ಕೊಡಿ ಅಂದಿದ್ದಾರೆ. ನಾನೂ ಕುಮಾರಸ್ವಾಮಿ ಅವರಿಗೆ ಕೇಳ್ತೀನಿ, ಯಾರು 60% ಕಮೀಷನ್ ತಗೊಂಡಿದ್ದಾರೆ ಅಂತ ದಾಖಲೆ ಕೊಡಿ.ನಿರ್ದಿಷ್ಟ ದಾಖಲೆ ಇದ್ರೆ ಕೊಡಿ, ನಾವು ಕ್ರಮ ತಗೋತೇವೆ. ನಾವು 40% ಆರೋಪ ಮಾಡಿದ್ದಲ್ಲ, ಮೊದಲು ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು ಎದಿದ್ದಾರೆ.

ಇದೇ ವೇಳೆ ಕುಮಾರಸ್ವಾಮಿ ಅವರಿಗೆ ಸಲಹೆ ಕೊಡ್ತೇನೆ ಎಂದ ಅವರು ರಾಜ್ಯಕ್ಕೆ ಸ್ಟೀಲ್ ಫ್ಯಾಕ್ಟರಿ ತನ್ನಿ. ನಿಮ್ಮ ಪ್ರಭಾವ ಕೇಂದ್ರದಲ್ಲಿ ಬಳಸಿ ದೊಡ್ಡ ಕೈಗಾರಿಕೆ ರಾಜ್ಯಕ್ಕೆ ತಂದರೆ ನಿಮ್ಮ ಹೆಸರು ರಾಜ್ಯದಲ್ಲಿ ಶಾಶ್ವತವಾಗಿ ಉಳಿಯುತ್ತೆ. ಭದ್ರಾವತಿ ಕೈಗಾರಿಕೆ ಸೊರಗುತ್ತಿದೆ, ಅದು ಮುಚ್ಚುವ ಸ್ಥಿತಿಯಲ್ಲಿದೆ. ಭದ್ರಾವತಿ ಕೈಗಾರಿಕೆ ಪುನರುಜ್ಜೀವನ ಮಾಡಿ. ಬೇಕಾದಷ್ಟು ಕೈಗಾರಿಕೆಗಳಿವೆ, ಅವಕ್ಕೆ ಶಕ್ತಿ ತುಂಬಿ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿಗೆ ರಾಜ್ಯಕ್ಕೆ ತಂದು ಬಂಡವಾಳ ಹೂಡುವಂತೆ ಮಾಡಿ. ಸುಮ್ಮನೆ ರಾಜಕೀಯಕ್ಕೆ ಆರೋಪ ಮಾಡೋದು ಸರಿಯಲ್ಲ. ಆರೋಪಕ್ಕೆ ದಾಖಲೆ ಇದ್ದರೆ ಕುಮಾರಸ್ವಾಮಿ ಕೊಡಲಿ. ಹೆಚ್ಡಿಕೆ ಗೆ ದಾಖಲೆ ಕೊಡಿ ಎಂದು ಪರಮೇಶ್ವರ್ ಹೇಳಿದ್ದಾರೆ.

ನಾಳೆ ನಾನು ಡಿನ್ನರ್ ಮಾತ್ರ ಕೊಡ್ತಿದ್ದೇನೆ, ಡಿನ್ನರ್ ಪಾರ್ಟಿ ಅಲ್ಲ. ಮುಂದೆ ನಾವು ಎಸ್‌ಸಿ ಎಸ್ಟಿ ಸಮಾವೇಶ ಮಾಡಬೇಕು ಅನ್ಕೊಂಡಿದ್ದೀವಿ. ಅದಕ್ಕಾಗಿ ಎಲ್ಲ ಎಸ್ಸಿ-ಎಸ್ಟಿ ಸಮುದಾಯದ ಸಚಿವರು, ಶಾಸಕರಿಗೆ ಕರೆದಿದ್ದೇವೆ. ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸ್ತೇವೆ. ಸಂಜೆ ಏಳು ಗಂಟೆಗೆ ಕರೆದಿದ್ದೇವೆ. ಎಸ್ಸಿ ಎಸ್ಟಿ ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ, ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್ಸಿ ಎಸ್ಟಿ ಸಮಾವೇಶ ಆಯ್ತು. ಆ ಸಮಾವೇಶದಲ್ಲಿ ಕೆಲವು ರೆಸೊಲ್ಯುಷನ್ಸ್ ತಗೊಂಡಿದ್ವಿ, ಅದರ ಬಗ್ಗೆಯೂ ನಾಳೆ ಚರ್ಚೆ ಮಾಡ್ತೇವೆ ಎಂದಿದ್ದಾರೆ

ಇನ್ನು ಡಿನ್ನರ್ ಆಯೋಜನೆ ಬಗ್ಗೆ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. 2028ಕ್ಕೆ ನಾನು ಸಿಎಂ ಸ್ಥಾನಕ್ಕೆ ಪೈಪೋಟಿ ಕೊಡ್ತೇನೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಮಾತಾಡಿದ ಅವರು ಆಯ್ತಲ್ಲ, ಅವರು ಹೇಳಿದ ಮೇಲೆ‌ ಆಯಿತು. ಇನ್ನು ನಾನೇನು ಹೇಳೋದು ಎಂದು ಪರಮೇಶ್ವರ್ ಹೇಳಿದ್ದಾರೆ. ಇನ್ನು  ಈಗ ನೀವು ಪೈಪೋಟಿ ಕೊಡ್ತೀರ ಸರ್ ಅಂದ ಪ್ರಶ್ನೆಗೆ ಉತ್ತರಿಸದೇ ಪರಮೇಶ್ವರ್ ಹೊರಟು ಹೋಗಿದ್ದಾರೆ.

ಹೆಚ್‌ಎಂಪಿವಿ ವೈರಸ್ ಬಗ್ಗೆ ಮಾತನಾಡಿದ ಅವರು ಈಗಾಗಲೇ ಆರೋಗ್ಯ ಸಚಿವರು ಸಭೆ ಮಾಡಿದ್ದಾರೆ, ಅದರ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಆತಂಕ ಪಡುವ ಅಗತ್ಯ ಇಲ್ಲ ಅಗತ್ಯ ಇಲ್ಲ ಎಂದು ತಜ್ಞರೂ ಹೇಳಿದ್ದಾರೆ. ಆದರೂ ಆರೋಗ್ಯ ಇಲಾಖೆ ಕೆಲ ಸೂಚನೆ ಕೊಟ್ಟಿದೆ, ಇದನ್ನು ಪಾಲಿಸಿದರೆ ಎಲ್ಲರಿಗೂ ಒಳ್ಳೆಯದು. ಎಲ್ಲ ಕ್ರಮ ತಗೋತಿದ್ದೇವೆ ಎಂದಿದ್ದಾರೆ.

ಐಶ್ವರ್ಯ ಪತಿ ಕಾರು ವಿನಯ್ ಕುಲಕರ್ಣಿ ಬಳಕೆ ಮಾಡ್ತಿರುವ ಆರೋಪದ ಬಗ್ಗೆ ಮಾತನಾಡಿ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ,  ಈ ಆಯಾಮದಲ್ಲಿ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. ಪ್ರಕರಣ ಸಿಬಿಐ ತನಿಖೆ ನಡೆಯುತ್ತಿರುವುದರಿಂದ ಯಾವ ರೀತಿ ಮುಂದುವರೀತಾರೋ ನೋಡಬೇಕು ಎಂದರು. ನಕ್ಸಲರ ಶರಣಾಗತಿ ವಿಚಾರಕ್ಕೆ ಪ್ರತಿಕ್ರಿಯಿಸಿ ವಿಕ್ರಮ್ ಗೌಡ ಎನ್‌ಕೌಂಟರ್ ನಂತರ ಉಳಿದ ನಕ್ಸಲರಿಗೆ ಶರಣಾಗಲು ಕರೆ ಕೊಟ್ಟಿದ್ದೀವಿ. ಈ ಪ್ರಕ್ರಿಯೆ ಬೇರೆ ಬೇರೆ ಹಂತಗಳಲ್ಲಿ ನಡೀತಿದೆ. ಶರಣಾಗತಿ ಬಳಿಕ ಅವರಿಗೆ ಕಲ್ಪಿಸಿಕೊಡಬೇಕಾದ ಅನುಕೂಲತೆಗಳ ಬಗ್ಗೆಯೂ ಪರಿಶೀಲಿಸ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಹೊರಗಿಂದ ಯಾರೂ ನಕ್ಸಲರು ಬರದಿದ್ರೆ ನಕ್ಸಲ್ ಮುಕ್ತ ರಾಜ್ಯ ಆಗುತ್ತೆ. ಈಗ ರಾಜ್ಯದಲ್ಲಿ ಇರೋದು ಶರಣಾದ್ರೆ ನಕ್ಸಲ್ ಮುಕ್ತ ಆಗಬಹುದು ಎಂದಿದ್ದಾರೆ.