ಮನೆ Latest News ಬಿಜೆಪಿ ಜನಾಕ್ರೋಶ ಯಾತ್ರೆಗೆ ಗೃಹ ಸಚಿವ ಪರಮೇಶ್ವರ್ ಲೇವಡಿ

ಬಿಜೆಪಿ ಜನಾಕ್ರೋಶ ಯಾತ್ರೆಗೆ ಗೃಹ ಸಚಿವ ಪರಮೇಶ್ವರ್ ಲೇವಡಿ

0

ಬೆಂಗಳೂರು; ಬಿಜೆಪಿ ಜನಾಕ್ರೋಶ ಯಾತ್ರೆಗೆ ಗೃಹ ಸಚಿವ ಪರಮೇಶ್ವರ್ ಲೇವಡಿ ಮಾಡಿದ್ದಾರೆ. ಬಿಜೆಪಿ ಜನಾಕ್ರೋಶ ಯಾತ್ರೆ ಬಗ್ಗೆ ಮಾತನಾಡಿದ ಅವರು ಬಿಜೆಪಿ ಅವರಿಗೆ ನಮ್ಮ ಸರ್ಕಾರದ ಯಶಸ್ಸು ತಡೆಯೋಕೆ ಆಗ್ತಿಲ್ಲ. ಎರಡು ವರ್ಷಗಳಿಂದ ಒಳ್ಳೆ ಆಡಳಿತ ಕೊಡ್ತಿದ್ದೇವೆ. ಅದನ್ನ ತಡೆಯೋಕೆ ಆಗ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನ ನಾವು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ನಮ್ಮ ಆಡಳಿತ, ಗ್ಯಾರಂಟಿ ಅನುಷ್ಠಾನ ಜನರಿಗೆ ಸಮಾಧಾನ ತಂದಿದೆ. ನಮ್ಮ ಯೋಜನೆ ಅನುಷ್ಠಾನ ಆಗ್ತಿದೆ. ಸಿಎಂ ಅವ್ರು ಬ್ಯಾಲೆನ್ಸ್ ಬಜೆಟ್ ಕೊಟ್ಟಿದ್ದಾರೆ. ಇದಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿ ಅವರಿಗೆ ಸಹಿಸೋಕೆ ಆಗ್ತಿಲ್ಲ.ಹೀಗಾಗಿ ತಾವು ಕಳೆದು ಹೋಗ್ತೀವಿ ಅಂತ ಪ್ರತಿಭಟನೆ ಮಾಡ್ತಿದ್ದಾರೆ ಎಂದಿದ್ದಾರೆ.

ಯಾವ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷದವರೇ ಆಕ್ರೋಶ ಮಾಡ್ತಿದ್ದಾರೆ ಅಷ್ಟೆ. ಆಕ್ರೋಶ ಅಂದರೆ ಜನ ಬೀದಿ ಬೀದಿಯಲ್ಲಿ ಮಾಡಬೇಕು. ಅದು ಎಲ್ಲಿ ಆಗಿದೆ. ಬಿಜೆಪಿ‌ ಅವರು ಮಾತ್ರ ಆಕ್ರೋಶ ಮಾಡ್ತಿದ್ದಾರೆ ಅಷ್ಟೆ ಮಾಡಲಿ.ಜನಾಕ್ರೋಶ ಯಾತ್ರೆಗೆ ಪರಮೇಶ್ವರ್ ಕಿಡಿ ಕಾರಿದ್ದಾರೆ. ಇದೇ ವೇಳೆ ಬಿಟಿಎಂ ಲೇಔಟ್ ನಲ್ಲಿ ಯುವತಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪರಮೇಶ್ವರ್ ಇಷ್ಟು ದೊಡ್ಡ ಸಿಟಿಯಲ್ಲಿ ಅಲ್ಲಿ ಇಲ್ಲಿ ಇಂತಹ ಒಂದು ಘಟನೆಗಳು ಆಗುತ್ತದೆ. ನಿತ್ಯವೂ ಪೊಲೀಸ್ ಕಮೀಷನರ್ ಗೆ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು ಅಂತ ಹೇಳುತ್ತೇನೆ.ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ಏನ್ ಆಗ್ತಿದೆ ಅದನ್ನು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಮಾಡಬೇಕು ಅಂತ ನಿತ್ಯ ಸೂಚನೆ ಕೊಡ್ತೀನಿ. ಅಲ್ಲೊಂದು ಇಲ್ಲೊಂದು ಘಟನೆ ಆದಾಗ ಸ್ವಾಭಾವಿಕವಾಗಿ ಜನರ ಮನಸಿನಲ್ಲಿ ಗಮನ ಸೆಳೆಯುತ್ತದೆ. ಅಷ್ಟಕ್ಕೇ ನಾವು ಬಿಡೋದಿಲ್ಲ. ನಿರಂತರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡ್ತಿದೆ. 24×7 ಮಳೆ, ಚಳಿ ಅನ್ನದೇ ಪೊಲೀಸರು ಕೆಲಸ ಮಾಡ್ತಿದ್ದಾರೆ. ಹೀಗಾಗಿ ಬೆಂಗಳೂರು ಶಾಂತವಾಗಿ ಇದೆ. ಇಷ್ಟು ದೊಡ್ಡ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತೆ. ಅದಕ್ಕೆ ನಾವು ಕಾನೂ‌ನು ಕ್ರಮ ತೆಗೆದುಕೊಳ್ಳುತ್ತೇವೆ. ಬೀಟ್ ವ್ಯವಸ್ಥೆ ಮತ್ತಷ್ಟು ಪರಿಣಾಮವಾಗಿ ಮಾಡಿ ಅಂತ ಇವತ್ತು ಕೂಡಾ ಕಮೀಷನರ್ ಗೆ ಸೂಚನೆ ನೀಡಿದ್ದೇನೆ ಎಂದರು.

ಮುಸ್ಲಿಂಮರಿಗೆ 4% ಮೀಸಲಾತಿಗೆ ಬಿಜೆಪಿ‌ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಇದನ್ನ ನಮ್ಮ ಸರ್ಕಾರ ಮತ್ತು ಪಕ್ಷ ಇದನ್ನ ಮಾಡಿದೆ. ಯಾರು ಸಮುದಾಯ ದಲ್ಲಿ ಹಿಂದೆ ಉಳಿದಿದ್ದಾರೆ. ಅವರನ್ನ ಮೇಲೆ ತರುವಂತಹ, ಸಮಾದ ಮುಖ್ಯ ವಾಹಿನಿಗೆ ಬರೋ ಯೋಜನೆ, ಕಾನೂನುಗಳನ್ನ ಸರ್ಕಾರ ಆಗಾಗ ಮಾಡಬೇಕು. ಮೀಸಲಾತಿ ಯಾಕೆ ಬೇಕು ಅನ್ನೋದು‌ ದೊಡ್ಡ ಪ್ರಶ್ನೆ.SC-ST, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡೋವಾಗಲೂ ಇದೇ ಪ್ರಶ್ನೆ ಬರುತ್ತದೆ. ಯಾರು ಹಿಂದೆ ಉಳಿದಿದ್ದಾರೆ, ಸಾವಿರಾರು ವರ್ಷಗಳಿಂದ ಅವಕಾಶ ಸಿಕ್ಕಿಲ್ಲ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು. ಅದರ ಪ್ರಕಾರ 16-18% ರಾಜ್ಯದಲ್ಲಿ ಇರೋ ಅಲ್ಪಸಂಖ್ಯಾತರು ಹಿಂದೆ ಉಳಿಯಬೇಕಾ? ಕ್ರಿಶ್ಚಿಯನ್, ಜೈನ, ಮುಸ್ಲಿಂಮರು ಎಲ್ಲರು ನಮ್ಮ ಜೊತೆ ಮುಖ್ಯ ವಾಹಿನಿಗೆ ಬರಬೇಕು.ಇಷ್ಟೇ ನಮ್ಮ ಉದ್ದೇಶ ಎಂದ್ರು.

ಗ್ಯಾರಂಟಿ ಯೋಜನೆ ಯುಪಿಯಲ್ಲಿ ಜಾರಿ ಮಾಡಲು ರಾಜ್ಯದಲ್ಲಿ ತಂಡದಿಂದ ಅಧ್ಯಯನ ವಿಚಾರದ ಬಗ್ಗೆ ಮಾತನಾಡಿದ ಅವರು  ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿರೋದಕ್ಕೆ ಬೇರೆ ರಾಜ್ಯದವರು ಅಧ್ಯಯನ ‌ಮಾಡ್ತಿದ್ದಾರೆ. ನಮ್ಮದು ಫೇಲ್ ಆಗಿದ್ದರೆ ಯಾಕೆ ಬೇರೆ ರಾಜ್ಯದವರು ಅಧ್ಯಯನ ಮಾಡೋಕೆ ಬರೋರು?. ಬಿಜೆಪಿ ಅಧಿಕಾರದಲ್ಲಿ ಇರೋ ರಾಜ್ಯಗಳು ನಮ್ಮ ಕಾರ್ಯಕ್ರಮ ಅನುಕರಣೆ ಮಾಡ್ತಿದ್ದಾರೆ. ಇದರ ಅರ್ಥ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ ಅಂತ ಅರ್ಥ. ತೆಲಂಗಾಣ ಸಿಎಂ ಗ್ಯಾರಂಟಿ ವಿರೋಧ ವಿಚಾರದ ಬಗ್ಗೆ ಮಾತನಾಡಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಆಗುತ್ತದೆ.ನಮ್ಮ ಪಕ್ಷದ ಸರ್ಕಾರ ಅಲ್ಲಿ ಇರೋವಾಗ ನಮ್ಮ ಪಕ್ಷದ ವರಿಷ್ಠರು ಗಮನಿಸುತ್ತಾರೆ.ಏನಾದ್ರು ಲೋಪ ಇದ್ದರೆ ಅದನ್ನ ಸರಿ ಮಾಡೋಕೆ ಸಲಹೆಗಳನ್ನ ಕೊಡ್ತಾರೆ ಎಂದ್ರು.