ಬೆಳಗಾವಿ; 2A ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಹೋರಾಟ ನಡೆಯಿತು. 2A ಮೀಸಲಾತಿ ಒಬಿಸಿಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ರು. ಕೇಸರಿ ಶಾಲು, ತಲೆ ಮೇಲೆ ಗಾಂಧಿ ಟೋಪಿ ಧರಿಸಿ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾದ್ರು. ಬೀದರ್, ಬಾಗಲಕೋಟೆ, ವಿಜಯಪುರ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಆಗಮಿಸಿರುವ ಸಮಾಜದ ಜನರು ಆಗಮಿಸಿದ್ರು.
ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯಾನಂದ ಕಾಶಪ್ಪನವರ್ ಸಮುದಾಯದ ವಿರುದ್ಧವಾಗಿ ಮಾತನಾಡ್ತಾರೆ. ಹಾಗಾಗಿ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಪಂಚಮಸಾಲಿ ವಕೀಲರು ಆಗ್ರಹಿಸಿದ್ರು. ಕಾಂಗ್ರೆಸ್ ಪಕ್ಷ ಅವರನ್ನ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದ್ರು. ವೇದಿಕೆ ಮೇಲೆಯೇ ಪಂಚಮಸಾಲಿ ವಕೀಲರು ಆಕ್ರೋಶ ಹೊರ ಹಾಕಿದ್ರು.
ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಮುದಾಯದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ನಮ್ಮ ಸಹೋದರ ಸಮುದಾಯ ಕಷ್ಟದಲ್ಲಿದೆ ಅಂತ ಹೇಳಿದೆ.ಸಮಾಜ ಇದ್ರೆ ನಾವೆಲ್ಲ ಮುಖಂಡರು ಇರ್ತೇವೆ. ಸರ್ಕಾರ ಯಾವುದೇ ಇರಲಿ, ಪಂಚಮಸಾಲಿ ಜನ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ಸಮಾಜಕ್ಕೆ ನ್ಯಾಯ ಸಿಗಲೇಬೇಕು, ಸಿಎಂ ಗಮನಕ್ಕೂ ತಂದಿದ್ದೇವೆ. ಸಮಾಜ ಏನು ಹೇಳುತ್ತೋ ಆ ದಿಕ್ಕಿನಲ್ಲಿ ನಾನು ಸಾಗುತ್ತೇನೆ . ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಸಿಗಲಿದೆ ಎಂದರು.
ಇನ್ನು ಪಂಚಮಸಾಲಿ ಹೋರಾಟದ ಹಿನ್ನೆಲೆ ಸುವರ್ಣಸೌಧದ ಮುಖ್ಯದ್ವಾರದ ಬಳಿ ಭಾರಿ ಬಿಗಿ ಬಂದೋಬಸ್ತ್ ಮಾಡಾಲಾಗಿತ್ತು. ಮುಖ್ಯ ಗೇಟ್ ಬಳಿ 200ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿತ್ತು. ಇನ್ನು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಅಕಾಶ ನೀಡದ ಹಿನ್ನೆಲೆ ರಸ್ತೆಯಲ್ಲೇ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಜಯಮೃತ್ಯುಂಜಯ ಸ್ವಾಮೀಜಿ ಧರಣಿಗೆ ಕುಳಿತರು. ಈ ವೇಳೆ : ಶಾಸಕ ಯತ್ನಾಳ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅರವಿಂದ್ ಬೆಲ್ಲದ್ ಅವರನ್ನು ವಶಕ್ಕೆ ಪಡೆದ್ರು. ಇನ್ನು ಯತ್ನಾಳ್ ಅವರನ್ನು ಕರೆದೊಯ್ಯುತ್ತಿದ್ದ ಬಸ್ ಗೆ ವ್ಯಕ್ತಿಯೊಬ್ಬ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ. ಕೂಡಲೇ ವ್ಯಕ್ತಿಯನ್ನ ಪೊಲೀಸರು ಎಬ್ಬಿಸಿದರು. ಕೊನೆಗೆ ಪೊಲೀಸರು ಲಾಠಿ ಚಾರ್ಚ್ ಮಾಡಬೇಕಾಯಿತು.
ಇನ್ನು ಪಂಚಮ ಸಾಲಿ ಹೋರಾಟದ ಬಗ್ಗೆ ಸಂಸದ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು ಜನವಿರೋಧಿ ಸರಕಾರ ಎಂದು ಮತ್ತೆ ಗೊತ್ತಾಗುತ್ತಿದೆ. ರೈತ ವಿರೋಧಿ ಸರಕಾರ ಇದಾಗಿದೆ. ನಾವು ಕೊಟ್ಟ ಕಾರ್ಯಕ್ರಮಗಳಿಗೆ ತಿಲಾಂಜಲಿ ಹಾಕಿದೆ. ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಭಾಷಣ ವನ್ನು ಸಿಎಂ ಮಾಡುತ್ತಾರೆ. ಮೀಸಲಾತಿ ಕೇಳುವವರಿಗೆ ನ್ಯಾಯ ತೀರ್ಮಾನ ಮಾಡಬೇಕು.ಅವರ ಮೇಲಿನ ಲಾಠಿ ಪ್ರಹಾರ ಮಾಡಿ ರಕ್ತ ಸುರಿಸಿದ್ದಾರೆ. ಲಾಠಿ ಪ್ರಹಾರ ಮಾಡಿರುವುದು ಅಕ್ಷ್ಯಮ್ಯ.ಸರಕಾರ ದಬ್ಬಾಳಿಕೆ ಬಹಳ ದಿನ ಮುಂದುವರೆಯುವುದಿಲ್ಲ ಎಂದರು.
ಸಿದ್ದರಾಮಯ್ಯನವರ ಬೆಂಬಲಿಗರೇ ಕೋರ್ಟ್ ಹೋಗಿದ್ದಾರೆ. ಮುಂದಿನ ವಿಚಾರಣೆ ವರೆಗೆ ಮಾತ್ರ ಅನುಷ್ಠಾನ ಮಾಡಲ್ಲ ಎಂದಿದ್ದೆವು.ವೋಟ್ ಬ್ಯಾಂಕ್ ರಾಜಕಾರಣವನ್ನು ಸಿಎಂ ಮಾಡುತ್ತಿದ್ದಾರೆ.ಮುಂದಿನ ವಿಚಾರಣೆ ನಡೆಸಬೇಕಲ್ಲ, ಅದನ್ನು ಮಾಡುತ್ತಿಲ್ಲ.ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ವಿಜಯನಂದ ಕಾಶಪ್ಪನವರ ಮಾತನಾಡಿ ಇವತ್ತು ಅಖಿಲ ಭಾರತ ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಈಗಾಗಲೇ ಸಿಎಂ ಅವರ ಗಮನಕ್ಕೆ ತಂದ್ವಿ. ಅವರ ನಮ್ಮ ಮನವಿ ಸ್ಪಂದಿಸಿದ್ದಾರೆ. ನಮ್ಮ ಜೊತೆ ಮಾತುಕತೆ ಮಾಡಿದ್ದಾರೆ. ಇವತ್ತು ನಿಯೋಗವನ್ನು ತೆಗದುಕೊಂಡು ಬನ್ನಿ ಎಂದು ಹೇಳಿದ್ರು . ಅವರು ವಿನಂತಿಗೂ ಸ್ಪಂದಿಸಿದೆ ಪ್ರತಿಭಟನೆ ಗೆ ಹೋಗಿದ್ದಾರೆ. ನಾನು ಇದನ್ನ ಸಿಎಂ ಅವರ ಗಮನಕ್ಕೆ ತಂದಿದ್ದೇವೆ .ಸಿಎಂ ಅವರು ಈ ಪ್ರತಿಭಟನೆಯನ್ನ ತಿರಸ್ಕಾರ ಮಾಡಿದ್ದಾರೆ. ಬಿಜೆಪಿ ಪಕ್ಷದ ಸೀಮಿತ ಹೋರಾಟ ನಡೆಯುತ್ತಿದೆ. ಪಕ್ಷಕ್ಕೆ ಸಿಮಿತವಾಗಿರುವಂತಹ ಹೋರಾಟ ಆಗಿದೆ. ವಿರೋಧ ಪಕ್ಷದ ಪ್ರಾಯೋಜಿತ ಪ್ರತಿಭಟನೆ ಆಗಿದೆ. ಯತ್ನಾಳ್ ಅವರ ಬೆಂಬಲಿಸುವುದಕ್ಕೆ ಇದನ್ನ ಮಾಡುತ್ತಿದ್ದಾರೆ ಎಂದಿದ್ದಾರೆ.