ಮನೆ Latest News ಭಾರತ ಪಾಕ್ ಮಧ್ಯೆ ಕದನ ವಿರಾಮ ಘೋಷಣೆಯಾದ್ರೂ ನೀಚ ಬುದ್ಧಿ ಬಿಡದ ಪಾಪಿಸ್ತಾನ, ಅಪ್ರಚೋದಿತ ಗುಂಡಿನ...

ಭಾರತ ಪಾಕ್ ಮಧ್ಯೆ ಕದನ ವಿರಾಮ ಘೋಷಣೆಯಾದ್ರೂ ನೀಚ ಬುದ್ಧಿ ಬಿಡದ ಪಾಪಿಸ್ತಾನ, ಅಪ್ರಚೋದಿತ ಗುಂಡಿನ ದಾಳಿ; 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಹೊಡೆದುರುಳಿಸಿ ಭಾರತೀಯ ಸೇನೆ

0

ನವದೆಹಲಿ: ಹಂದಿಗೆ ಎಷ್ಟೇ ಆಹಾರ ನೀಡಿದ್ರೂ ಅದು ತಿನ್ನೋದು ಹೇಸಿಗೇನೆ ಅನ್ನೋದನ್ನು ಪಾಪಿ ಪಾಕಿಸ್ತಾನ ಮತ್ತೆ ನಿರೂಪಿಸಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಡ್ರಂಪ್ ಅವರ ಅಧ್ಯಕ್ಷತೆಯಲ್ಲಿ ಎರಡೂ ದೇಶಗಳು ಕದನ ವಿರಾಮ ಘೋಷಿಸಲು ಸಮ್ಮತಿದ ಬೆನ್ನಲ್ಲೇ ಡ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಎಲ್ಲವೂ ಬಗೆಹರಿಯಿತು ಎಂದಿದ್ದರು. ಆದರೆ ಈ ಬಗ್ಗೆ ಭಾರತೀಯರಿಗೆ ಇದು ನಿಜಾನೋ ಸುಳ್ಳೋ ಅನ್ನೋ ಅನುಮಾನ ಇತ್ತು. ಆದರೆ ಯಾವಾಗ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿರ್ಸಿ ಸುದ್ದಿಗೋಷ್ಟಿ ಮೂಲಕ ಮಾಹಿತಿ ನೀಡಿದ್ರೋ ಆಗ ಸತ್ಯಾಂಶ ಗೊತ್ತಾಯಿತು.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಯಾವಾಗ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿರ್ಸಿ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಕದನ ವಿರಾಮ ಘೋಷಿಸಲಾಗಿದೆ. ಇದು ಸಂಜೆ ಐದು ಗಂಟೆಯಿಂದಲೇ ಜಾರಿಯಾಗಿದೆ. ಅಲ್ಲದೇ ಮೇ 12 ರಂದು ಎರಡೂ ದೇಶಗಳು ಮಾತುಕತೆ ನಡೆಸಲಿವೆ ಎಂದು ತಿಳಿಸಿದ್ರು. ಇದರ ಬೆನ್ನಲ್ಲೇ ನೀಚ ಪಾಪಿಸ್ತಾನ ತನ್ನ ನರಿ ಬುದ್ಧಿಯನ್ನು  ತೋರಿಸಿದೆ. ಅತ್ತ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಇತ್ತ ಜಮ್ಮ ಕಾಶ್ಮೀರದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, 50 ಕ್ಕೂ ಹೆಚ್ಚು ಡ್ರೋಣ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಕದನ ವಿರಾಮ ಘೋಷಣೆಯಾದ ಮೂರು ಗಂಟೆಯಲ್ಲಿ ಶ್ರೀನಗರದಲ್ಲಿ 11 ಡ್ರೋಣ್ ಗಳಲ್ಲಿ ದಾಳಿ ನಡೆಸಿದೆ.ಗುಜರಾತ್, ಪಂಜಾಬ್, ಕಾಶ್ಮೀರ, ರಾಜಸ್ಥಾನ್ ಅನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದೆ. ಅಷ್ಟಾಗುತ್ತಲೇ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ 50ಕ್ಕೂ ಹೆಚ್ಚು ಪಾಕಿಸ್ತಾನದ ಡ್ರೋಣ್ ಗಳನ್ನು ಉಡೀಸ್ ಮಾಡಿದೆ. ಇನ್ನು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಅಖ್ನೂರ್,ರಜೌರಿ, ಆರ್ ಎಸ್ ಪುರ ಸೆಕ್ಟರ್ ನಲ್ಲೂ ಭಾರತೀಯ ಸೇನೆ ಅಟ್ಯಾಕ್ ಮಾಡಿದೆ.ಇದಕ್ಕೆ ಬಿಎಸ್ ಎಫ್ ಯೋಧರು ಸರಿಯಾದ ರೀತಿಯಲ್ಲೇ ಉತ್ತರವನ್ನು ನೀಡಿದ್ದಾರೆ.

ಇತ್ತ ಪಾಕ್ ನರಿ ಬುದ್ಧಿ ತೋರಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರು ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ಸಂಧಾನ ಮಾಡೋದು ಬೇಡ ಏನೇ ಮಾಡಿದ್ರು ಅದು ತನ್ನ ನೀಚ ಬುದ್ಧಿಯನ್ನು ತೋರಿಸುತ್ತೆ.  ಹಾಗಾಗಿ ಯುದ್ಧದ ಮೂಲಕವೇ ಪಾಕಿಸ್ತಾನಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಏನೇ ಇದ್ದರೂ ಮೇ 12 ರಂದು ನಡೆಯುವ ಭಾರತ ಹಾಗೂ ಪಾಕ್ ಮಾತುಕತೆಯಲ್ಲಿ ಏನಾಗುತ್ತೇ ಅನ್ನೋದರ ಮೇಲೆ ಎಲ್ಲವೂ ನಿಂತಿದೆ.