ಮನೆ ಪ್ರಸ್ತುತ ವಿದ್ಯಮಾನ ಒಳ ಮೀಸಲಾತಿ ನೀಡಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಮಾಡಿತ್ತು;ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ...

ಒಳ ಮೀಸಲಾತಿ ನೀಡಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಮಾಡಿತ್ತು;ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿಕೆ

0

 

ಬೆಂಗಳೂರು;ಪಿ‌. ಒಳ ಮೀಸಲಾತಿ ನೀಡಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಮಾಡಿತ್ತು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದ್ದಾರೆ.

ಒಳ ಮೀಸಲಾತಿ ನೀಡಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಮಾಡಿತ್ತು.ಆದ್ರೆ ಕಾಂಗ್ರೆಸ್ ಸರ್ಕಾರ ಈ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ.ಹೀಗಾಗಿ ಇಡೀ ರಾಜ್ಯಾದ್ಯಂತ ಬಿಜೆಪಿ ಜಾಗೃತಿ ಮೂಡಿಸಲಿದೆ ಎಂದಿದ್ದಾರೆ.

ಬೊಮ್ಮಾಯಿ ಸರ್ಕಾರ ನೀಡಿದ ಒಳ ಮೀಸಲಾತಿ ನ್ಯಾಯಯುತವಾಗಿದೆ.ಕೊರಚ, ಕೊರಮ ಸಮುದಾಯದ ಮೀಸಲಾತಿಯನ್ನೂ 4.5% ಗೆ ಏರಿಸಲಾಗಿತ್ತು.ಈಗ 17% ಗೆ ಒಳ ಮೀಸಲಾತಿ ನೀಡಬೇಕು..ಕಾಂಗ್ರೆಸ್ ಸರ್ಕಾರ ಮೀಸಲಾತಿಯನ್ನು ಇಳಿಸುತ್ತಾ ?ಮಾಧುಸ್ವಾಮಿ ಸಮಿತಿ ನೀಡಿದ ವರದಿಯಂತೆ ಮೀಸಲಾತಿ ನೀಡಬೇಕು.ಎಂದಿದ್ದಾರೆ.

ಅರ್ಥಿಕವಾಗಿ ದುರ್ಬಲರಾದವರಿಗೆ ನ್ಯಾಯ ಕೊಡಿಸಬೇಕು,ಸಮಾಜ ಒಡೆಯುವ ಕೆಲಸ ಆಗಬಾರದು; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

ಬೆಂಗಳೂರು; ಜಾತಿ ಸಮೀಕ್ಷೆ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಡಿವೈಡ್ ಅಂಡ್ ರೂಲ್ ಪಾಲಿಸಿ ಮಾಡುವ ಕೆಲಸ ಮಾಡುತ್ತಿದೆ. ವಿಭಜಿಸಿ ಆಡಳಿತ ಮಾಡುವ ಕೆಲಸ ಮಾಡುತ್ತಿದೆ. ಹಾಗಾಗಿ ಕಾಂಗ್ರೆಸ್ ಅನ್ನು ಜನ  ಅಪನಂಬಿಕೆ ಮೇಲೆ ನೋಡುತ್ತಾರೆ. ಅವರ ಉದ್ದೇಶ ಸಮಾಜ ಒಡೆಯುವುದು. ನಮ್ಮದು ಬಹಳ ಸ್ಪಷ್ಟವಾಗಿದೆ.ಸದುದ್ದೇಶದಿಂದ ಜಾತಿ ಸಮೀಕ್ಷೆ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಜಾತಿಗಣತಿ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಎಂದರೆ ಅದು ಅವೈಜ್ಞಾನಿಕವಾಗಿ ಇದೆ. ಬಿಜೆಪಿ ನಿಲುವು  ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಅನ್ನೋದು.ಹಿಂದುಳಿದ ದಲಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು. ಆದರೆ ಸಿದ್ದರಾಮಯ್ಯ ಅವರ ಕುರ್ಚಿ ಅಲ್ಲಾಡುತ್ತಿದೆ‌.ಹಾಗಾಗಿ ಈಗ ಜಾತಿಗಣತಿ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದು ಅವೈಜ್ಞಾನಿಕ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡಾ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದಿದ್ದಾರೆ.ಖರ್ಗೆ ಹೇಳಿದ್ದನ್ನು ಎಲ್ಲರೂ ಗಮನಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅವಕಾಶ ಇಲ್ಲ. ಯಾಕೆ ಇಷ್ಟು ಆತುರ?. ಈ ಮೊದಲು ನೀವೇ ಅಧಿಕಾರದಲ್ಲಿ ಇದ್ದಾಗ ಯಾಕೆ ಬಿಡುಗಡೆ ಮಾಡಿಲ್ಲ?.ಕುರ್ಚಿಯಲ್ಲಿ ಜಾಸ್ತಿ ದಿನ ಇರುವುದಿಲ್ಲ, ಮೊಂಡುತನ ಜಾಸ್ತಿ ದಿನ ನಡೆಯಲ್ಲ.ಹೀಗಾಗಿ ಇದೊಂದು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.