ಮನೆ Latest News ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ; ಬೆಂಗಳೂರಿನಲ್ಲಿ ಕೇಂದ್ರ ಸಚಿವ...

ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ; ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ

0

ಬೆಂಗಳೂರು;  ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ  ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಪಹಲ್ಗಾಮ್ ನಲ್ಲಿ  ಭಯೋತ್ಪಾದಕರ ದಾಳಿ ಬಗ್ಗೆ ಮಾತನಾಡಿದ ಅವರು ನಿನ್ನೆ ಮಧ್ಯಾಹ್ನ ನಡೆದ ಘಟನೆ ಹೇಯ ಘಟನೆ.ಇಂಥ ಪೈಶಾಚಿಕ ಕೃತ್ಯ ಮಾಡಿದ್ದರಿಂದ ಅವರು ಏನನ್ನು ಸಾಧಿಸಿದರು?.ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ತಡೆಯಲು ಕೇಂದ್ರ ಸಾಕಷ್ಟು ಕ್ರಮ ಕೈಗೊಂಡಿತ್ತು.ಇದು ಪಾಕಿಸ್ತಾನದ ಸಂಚಿನಿಂದ ನಡೆದ ಘಟನೆ. ಇಂಥ ಕೃತ್ಯಗಳನ್ನು ಮಾಡಿದವರ ಮಟ್ಟ ಹಾಕುವ ಕೆಲಸ ಭಾರತ ಸರ್ಕಾರ ಮಾಡುತ್ತದೆ.ಇವರು ಮನುಷ್ಯರಲ್ಲ, ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದಾರೆ.ಅವರು ಮನುಷ್ಯರು ಅಲ್ವೇ ಅಲ್ಲ.ಇನ್ನು ಎರಡು ಮೂರು ದಿನಗಳಲ್ಲಿ ಆ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ ನಮ್ಮ ಸರ್ಕಾರ ಎಂದಿದ್ದಾರೆ.

ಈ ಪಿಶಾಚಿಗಳಿಗೆ ಜಾತಿ, ಧರ್ಮ ಇಲ್ಲ. ಇಂಥ ಹೀನ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೇಬೇಕು.ಭಾರತೀಯರನ್ನು ಮುಟ್ಟಿದರೆ ಏನು ಮಾಡಬಹುದು ಅಂತ ಅನೇಕ ಉದಾಹರಣೆಗಳಿವೆ.ಇದಕ್ಕೆ ಅವರು ಬೆಲೆ ತೆರಲೇಬೇಕು.ಇದು ಭದ್ರತಾ ವೈಫಲ್ಯ ಅಲ್ಲ, ಇದೊಂದು ವ್ಯವಸ್ಥಿತ ಸಂಚು. ಏಪ್ರಿಲ್ 2ರಿಂದ 7 ರವರೆಗೆ ನನ್ನ ಅಳಿಯ ಅವಿನಾಶ್ ಹಾಗೂ ಮಗಳು ದಿವ್ಯಾ ಪಹಲ್ಗಾಮ್ ಪ್ರವಾಸ ಹೋಗಿದ್ದರು. ಇದು ಭದ್ರತಾ ವೈಫಲ್ಯ ಎಂಬ ಹಗುರ ಮಾತುಗಳನ್ನು ಕಾಂಗ್ರೆಸ್ ನಿಲ್ಲಿಸಲಿ. ಕೇಂದ್ರದ ಕ್ರಮಗಳನ್ನು ಸಹಿಸದೇ ಭಯೋತ್ಪಾದಕ ಶಕ್ತಿಗಳು ಈ ಕೃತ್ಯ ಎಸಗಿವೆ. ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ‌ ಕೆಲಸ ಮಾಡಬಾರದು. ನೀನು ಹಿಂದೂನಾ ಅಂತ ಕೇಳಿ ಗುಂಡು ಹೊಡೆಯುತ್ತಾರೆ ಅಂದರೆ ಇದನ್ನು ಎಲ್ಲರೂ ಖಂಡಿಸಲೇಬೇಕು.ಇನ್ನೂ ಕೇವಲ 24 ಗಂಟೆ ಕಾಯಿರಿ. ಕೇಂದ್ರ ಸರ್ಕಾರ ಏನು ಮಾಡುತ್ತದೆ ನೋಡಿ. ಇದನ್ನೆಲ್ಲಾ ಮೋದಿ, ಅಮಿತ್ ಷಾ ಸಹಿಸಲ್ಲ. ನೋಡುತ್ತಿರಿ ಅವರ ಹೆಡೆಮುರಿ ಹೇಗೆ ಕಟ್ಟುತ್ತಾರೆ ಅಂತ. ಭಯೋತ್ಪಾದಕರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ.ಅವರ ದುರ್ಬುದ್ಧಿಗೆ ತಕ್ಕ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಕರ್ನಾಟಕದ ಮೂವರು ಪ್ರವಾಸಿಗರು ಸೇರಿ 30 ಜನ ಬಲಿ

ಶ್ರೀನಗರ; ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ಅಟ್ಟಹಾಸಕ್ಕೆ ಕರ್ನಾಟಕದ ಮೂವರು ಪ್ರವಾಸಿಗರು ಸೇರಿ ಒಟ್ಟು 30 ಜನ ಪ್ರವಾಸಿಗರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಅಟ್ಯಾಕ್ ಮಾಡಿದ್ದಾರೆ.

ದಾಳಿಯ ಹೊಣೆಯನ್ನು ಪಾಕ್ ಬೆಂಬಲಿತ ಟಿಆರ್ ಎಫ್ ಉಗ್ರರು ಹೊತ್ತುಕೊಂಡಿದ್ದಾರೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಉದ್ಯಮಿ ಭರತ್ ಭೂಷಣ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಮಗನಿಗೆ ಪಿಯುಸಿಯಲ್ಲಿ 97 ಶೇಕಡಾ ಅಂಕ ಬಂದ ಖುಷಿಗೆ ಮಂಜುನಾಥ್ ರಾವ್ ಪತ್ನಿ ಮತ್ತು ಪುತ್ರನ ಜೊತೆ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಪತ್ನಿ ಹಾಗೂ ಮಗನ ಎದುರಲ್ಲೇ ಉಗ್ರರು ಮಂಜುನಾಥ್ ರಾವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಘಟನೆಯಲ್ಲಿ ಇಸ್ರೇಲ್ ಹಾಗೂ ಇಟಲಿ ಮೂಲದ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅತೀ ದೊಡ್ಡ ಉಗ್ರ ದಾಳಿ ಇದಾಗಿದ್ದು,  ಕೇಂದ್ರ ಗೃಹ ಸಚಿವ ಅಮಿತ್ ಷಾ ಶ್ರೀನಗರಕ್ಕೆ ಧಾವಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಾಳೆ ಅಮಿತ್ ಷಾ ಪಹಲ್ಗಾಂವ್ ಗೆ ಭೇಟಿ ನೀಡಲಿದ್ದಾರೆ.

ಇನ್ನು ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ  ಕಲೆ ಹಾಕಿದ್ದಾರೆ. ತಕ್ಷಣವೇ ಕಾರ್ಯಪ್ರವತ್ತರಾಗುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾಶ್ಮೀರಕ್ಕೆ ಅಧಿಕಾರಿಗಳ ತಂಡ ಪ್ರಯಾಣ ಬೆಳಿಸಿದೆ. ಪೊಲೀಸ್ ಅಧಿಕಾರಿಗಳು ಸಹ ಇರುವ ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ನಿವಾಸಿ ಆಯುಕ್ತರಿಗೆ ಸೂಚನೆ.ನೀಡಲಾಗಿದೆ. IPS ಅಧಿಕಾರಿ ಚೇತನ್ ಆರ್ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಘಟನೆ ದೇಶದಾದ್ಯಂತ ಭಾರೀ ಆಕ್ರೋಶ ಮೂಡುವಂತೆ ಮಾಡಿದೆ. ಉಗ್ಗರ ವಿರುದ್ಧ ಕಠಿಣ ಕ್ರಮಕ್ಕೆ ಭಾರತೀಯರು ಆಗ್ರಹಿಸಿದ್ದಾರೆ.