ಮನೆ Latest News ನಮ್ಮ ದೇಶದ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ; ಕೇಂದ್ರ ಸಚಿವ ಹೆಚ್...

ನಮ್ಮ ದೇಶದ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು: ನಮ್ಮ ದೇಶದ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಳೆದ ಒಂದು ವಾರದಿಂದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಕೃತ್ಯ ದೇಶಾದ್ಯಂತ ಚರ್ಚೆಯಾಯ್ತು. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವರು ಹಲವು ಸಭೆಗಳನ್ನು ಮಾಡಿದ್ದಾರೆ.ಉಗ್ರ ಚಟುವಟಿಕೆ ಅಂತಿಮ ಇತಿಶ್ರೀ ಹಾಡಬೇಕು ಅಂತಾ ಹೆಜ್ಜೆ ಇಟ್ಟರು. ನಮ್ಮ ದೇಶದ‌‌ ಇಮೇಜ್ ಹಾಳಾಗಬಾರದೆಂದು ಪಿಎಂ ಹಾಗೂ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡ್ರು. ಕೇವಲ ಉಗ್ರನೆಲಗಳ ಮೇಲೆ‌ ಮಾತ್ರ ದಾಳಿ ಮಾಡಿದ್ರು.  ನಮ್ಮ ದೇಶದ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಕೇವಲ ಎರಡೇ ದಿನದಲ್ಲಿ ಪಾಕ್ ಶರಣಾಗತಿಯಾಯ್ತು.  ನನ್ನ ವೈಯಕ್ತಿಕ ಅಭಿಪ್ರಾಯವೆಂದ್ರೇ ಪಾಕ್ ಗೆ ಮುಖಭಂಗವಾಗಿದೆ. ಭಾರತ ಸೈನಿಕರ ಹೋರಾಟದಿಂದ ಪಾಕ್ ಗೆ ನಡುಕ ಉಂಟಾಗಿದೆ. ನಮ್ಮ ಪ್ರಶ್ನೆ ಪಿಒಕೆ ವಿಷಯದಲ್ಲಿ ನಾವು ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ದೇಶದ ಥರ್ಡ್ ಪಾರ್ಟಿಯನ್ನು ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ.ನಮಗೆ ಆ ಶಕ್ತಿಯಿದೆ.  ಇವತ್ತು ಡಿಜಿಎಂಒಗಳ ಸಭೆ ಸಂಜೆಗೆ ಮುಂದೂಡಿಕೆಯಾಗಿದೆ.  ವಾರ್ ಬಗ್ಗೆ ಎರಡು ತರಹದ ಭಾವನೆಗಳಿವೆ.  ಯುದ್ದವಾಗಬೇಕು‌ ಅನ್ನೋದು ಒಂದು ವರ್ಗದ ಭಾವನೆಯಿದೆ . ಮತ್ತೊಂದೆಡೆ ನಮ್ಮಗಾಗುವ ಪ್ರಾಣ ಹಾನಿ ಬಗ್ಗೆಯೂ ಚಿಂತನೆ ಮಾಡಬೇಕು ನಮಗೆ ಶಕ್ತಿಯಿದೆ ಅಂತಾ ಇನ್ನೊಂದು ದೇಶದ  ಗದಾಪ್ರಹಾರ ಮಾಡಿದ್ರೇ ,ಇವತ್ತು ಉಕ್ರೇನ್, ರಷ್ಯಾದವರು ಒಂದು ವರ್ಷದಿಂದ ಯುದ್ಧ ಮಾಡಿ ಏನು‌ ಸಾಧನೆ ಮಾಡ್ತಾ ಇದ್ದಾರೆ? ಎಂದಿದ್ದಾರೆ

ಪಾಕ್ ನವರು ಏನೇ ಉಪಟಳ ಮಾಡಿದ್ರು, ಅಂತಿಮವಾಗಿ ದೊಡ್ಡ ಮಟ್ಟದ ಹೊಡೆತ ಬೀಳಲಿದೆ . ಇನ್ನೂ ಪಾಕ್ ಬುದ್ದಿ ಕಲಿಯದೇ ಇದ್ರೇ ಸರ್ವನಾಶವಾಗಲಿದೆ ಎಂದಿದ್ದಾರೆ. ಇನ್ನು ಅಮೆರಿಕದ ನೇತೃತ್ವದಲ್ಲಿ ಕದನ ವಿರಾಮ ಸಭೆ ನಡೆದರು ಪಾಕ್ ಮತ್ತೆ ಪುಂಡಾಟ ಮುಂದುವರಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಪಾಕಿಸ್ತಾನ ಏನೇ ಉಪಟಳ ಕೊಟ್ರು.ಅಂತಿಮವಾಗಿ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಪೆಟ್ಟು ಬೀಳುತ್ತದೆ. ಎರಡು ದಿನ ನಡೆದ ಯುದ್ಧದಲ್ಲಿ ಭಾರತದ ಶಕ್ತಿಯನ್ನು ನಮ್ಮ ಸೈನಿಕರು ತೋರಿಸಿದ್ದಾರೆ.ಪಾಕಿಸ್ತಾನ ಈಗ ಎಚ್ಚೆತ್ತುಕೊಳ್ಳದಿದ್ದರೆ ಪಾಕಿಸ್ತಾನ ಸಂಪೂರ್ಣ ಸರ್ವನಾಶ ಆಗಲಿದೆ. ಹೀಗಾಗಿ ಪಾಕಿಸ್ತಾನ ಎಚ್ಚರಿಕೆಯಿಂದ ತೀರ್ಮಾನ ಮಾಡಬೇಕು ಎಂದಿದ್ದಾರೆ.