ಮನೆ Latest News ಹಾಸನದಲ್ಲಿ ಡಿ.5ರಂದು ಸಿದ್ದರಾಮಯ್ಯ ಪರ ಬೆಂಬಲಿಗರ ಸಮಾವೇಶಕ್ಕೆ ನಿನ್ನೆ ಸ್ವಪಕ್ಷದಲ್ಲೇ ಆಕ್ಷೇಪ ವ್ಯಕ್ತವಾಗಿದೆ; ಬೆಂಗಳೂರಿನಲ್ಲಿ ನಿಖಿಲ್...

ಹಾಸನದಲ್ಲಿ ಡಿ.5ರಂದು ಸಿದ್ದರಾಮಯ್ಯ ಪರ ಬೆಂಬಲಿಗರ ಸಮಾವೇಶಕ್ಕೆ ನಿನ್ನೆ ಸ್ವಪಕ್ಷದಲ್ಲೇ ಆಕ್ಷೇಪ ವ್ಯಕ್ತವಾಗಿದೆ; ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು: ಹಾಸನದಲ್ಲಿ ಡಿ.5ರಂದು ಸಿದ್ದರಾಮಯ್ಯ ಪರ ಬೆಂಬಲಿಗರ ಸಮಾವೇಶಕ್ಕೆ ನಿನ್ನೆ ಸ್ವಪಕ್ಷದಲ್ಲೇ ಆಕ್ಷೇಪ ವ್ಯಕ್ತವಾಗಿದೆ ಎಂದು  ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಪಕ್ಷದ ಚಿನ್ಹೆ ಬಿಟ್ಟು ವೈಯಕ್ತಿಕವಾಗಿ ಸಮಾವೇಶ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಕುರ್ಚಿ ಬಲ ಪಡಿಸಿಕೊಳ್ಳೋಕೆ ಶಕ್ತಿ ಪ್ರದರ್ಶನ ಇದು. ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯೋದಕ್ಕೆ ಮಾಡುತ್ತಿರುವ ಪ್ರಯತ್ನವಿದು ಎಂದಿದ್ದಾರೆ. ಇದರಿಂದ ಬಿಜೆಪಿ-ಜೆಡಿಎಸ್ ಗೆ ಸಂದೇಶ ಕೊಡುವುದಕ್ಕಿಂತ, ನೇರವಾಗಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಸಂದೇಶ ಕಳುಹಿಸುವ ಪ್ರಯತ್ನ ಇದಾಗಿದೆ ಎಂದಿದ್ದಾರೆ.

ಸಮಾವೇಶವನ್ನ ಯಾರು, ಎಲ್ಲಿಬೇಕಾದರು ಮಾಡಬಹುದು.ಇದರಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ. ವಿಧಾನಸಭೆ ಚುನಾವಣೆ ಇನ್ನೂ ಮೂರೂವರೆ ವರ್ಷ ಬಾಕಿ ಇದೆ. ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ.ಸರ್ಕಾರದ ಸಾಧನೆಗಳೇನು ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಹೊಸಪೇಟೆಯ ಕಾಂಗ್ರೆಸ್ ಶಾಸಕರೇ ಎರಡು ಗ್ಯಾರೆಂಟಿ ನಿಲ್ಲಿಸಬೇಕು. ಅಭಿವೃದ್ಧಿ ಹಣ ನೀಡುತ್ತಿಲ್ಲ, ಜನರ ಪ್ರಶ್ನೆಗೆ ಉತ್ತರ ನೀಡೋಕೆ ಆಗ್ತಿಲ್ಲ‌ ಅಂತಿದ್ದಾರೆ. ಅಭಿವೃದ್ದಿಗೆ 1 ರೂ. ಕೂಡ ಕೊಡ್ತಾ ಇಲ್ಲ ಅಂದ್ರು, ಪುನಃ ಸಂಜೆಗೆ ಯೂ ಟರ್ನ್ ಹೊಡೆಸಿದ್ರಿ. ಇದು ಕಾಂಗ್ರೆಸ್ ಶಾಸಕರ ಪರಿಸ್ಥಿತಿಗಳು.ಜೆಡಿಎಸ್-ಬಿಜೆಪಿ ಶಾಸಕರ ಕ್ಷೇತ್ರಗಳಿಗೂ 1 ರೂ. ಅನುದಾನ ಬಿಡುಗಡೆ ಆಗಿಲ್ಲ. ನಯಾ ಪೈಸೆ ಕ್ಷೇತ್ರದ ಅಭಿವೃದ್ಧಿ ಸರ್ಕಾರ ಸಹಕಾರ ಕೊಡ್ತಿಲ್ಲ ಎಂದಿದ್ದಾರೆ.

ಇನ್ನು  ಸ್ವಪಕ್ಷದವರೇ ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಸಿಎಂ ಆಪ್ತರು, ಸಚಿವ ಸಂಪುಟ ಬಿಟ್ಟರೆ ಬೇರೆ ಯಾರೂ ಉತ್ಸುಕತೆ ತೋರುತ್ತಿಲ್ಲ ಎಂದಿದ್ದಾರೆ. ಬಳ್ಳಾರಿಯಲ್ಲಿ ಬಾಣಂತಿಯರು ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ತಿಳಿದು ಮಾತನಾಡುತ್ತೇನೆ. ಇಂತಹ ಸೂಕ್ಷ ವಿಚಾರಗಳಲ್ಲಿ ಸರ್ಕಾರ, ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ ವಿರುದ್ಧ FIR ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಸಮುದಾಯದ ಓಲೈಕೆ ನಡೆಯುತ್ತಿದೆ. ಮತ್ತೊಂದು ಸಮುದಾಯವನ್ನ ಟಾರ್ಗೆಟ್ ಮಾಡಿಕೊಂಡು ಹೋಗಿದೆ. ಮುಂದಿನ‌ ದಿನಗಳಲ್ಲಿ‌ ಜನರೇ ಇದಕ್ಕೆ ಉತ್ತರ ಕೊಡ್ತಾರೆ ಎಂದಿದ್ದಾರೆ.