ಬೆಳಗಾವಿ: ಶಾಸಕಾಂಗ ಸಭೆಯಲ್ಲಿ ಗ್ಯಾರಂಟಿ ಯೋಜನೆಗೆ ವಿರೋಧದ ವ್ಯಕ್ತವಾಗಿದೆ. ಈ ಬಗ್ಗೆ ಸುವರ್ಣ ಸೌಧದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಯಾರು ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಅನಾವಶ್ಯಕವಾಗಿ ಯಾರಿಗೂ ನೀಡಬಾರದು ಎಂಬ ಬಗ್ಗೆ ಚರ್ಚೆಯಾಗಿದೆ ಅಷ್ಟೇ. ಯಾರು ವಿರೋಧ ಮಾಡಿಲ್ಲ ನಾವು ಜನರಿಗೆ ಗ್ಯಾರಂಟಿಯ ಅನುಕೂಲದ ಬಗ್ಗೆ ತಿಳಿಸದಿದ್ರೆ ಅದರಿಂದ ಪ್ರಯೋಜ ಅಗಲ್ಲ. ಇನ್ನು ಜಿಲ್ಲೆಗಳಿಗೆ ನಾವು ಬೇಟಿ ಕೊಟ್ಟಾಗ ಗ್ಯಾರಂಟಿ ಬಗ್ಗೆ ಮಾತನಾಡಬೇಕೆಂದು ಕೆಲವರು ಸೂಚಿಸಿದ್ದಾರೆ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಅಬ್ರಾಡ್ ನಲ್ಲಿರೋರು ಗ್ಯಾರಂಟಿ ಯೋಜನೆ ಅನುಕೂಲ ಪಡೆಯುತ್ತಿದ್ದಾರೆಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವರು ಹೇಳಿದ್ರು. ಅನುದಾನ ವನ್ನು ಆನ್ ಟೈಮ್ ಗೆ ಬಿಡುಗಡೆ ಕೇಳಿದ್ದಾರೆ. ಜನರಲ್ ಆಗಿ ಕೆಲವು ಎಂಎಲ್ಸಿ ಗಳು ಕೂಡ ಮಾತಾಡಿದ್ದಾರೆ. ಅನುದಾನಕ್ಕಾಗಿ ಶಾಸಕರು ಕೇಳಿದ್ದಾರೆ. ಸಿಎಂ ಕೂಡ ಬೇಗನೇ ಫಂಡ್ ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಜನರಲ್ ಆಗಿ ಹೇಳಿದ್ದಾರೆ.ಬಹುಶಃ ಸಿಎಂ ರಿವ್ಯೂ ಮೀಟಿಂಗ್ ಮಾಡಿದಾಗ ಅಧಿಕಾರಿಗಳಿಗೆ ಸೂಚನೆ ಕೊಡುತ್ತಾರೆ ಎಂದು ತಿಳಿಸಿದರು.
ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ ಗ್ಯಾರಂಟಿಗಳು ಯಥಾವತ್ತಾಗಿ ನಡೆಯುತ್ತವೆ. ಅಭಿವೃದ್ಧಿ ಕೆಲಸಕ್ಕೂ ಹಣದ ತೊಂದರೆ ಇಲ್ಲ. ಹೊಸ ಬಿಪಿಎಲ್ ಕಾರ್ಡ್ ಕಳೆದ ತಿಂಗಳು 30ರಿಂದ ಕೊಡ್ತಾ ಅರ್ಜಿಹಾಕಲು ಅವಕಾಶ ಕೊಟ್ಟಿದ್ದೇವೆ. ಅರ್ಹರಿಗೆ ಹೊಸ ಕಾರ್ಡ್ ಕೊಡ್ತಿದ್ದೇವೆ. 10ಲಕ್ಷ ಅನರ್ಹರನ್ನ ಎಪಿಎಲ್ಗೆ ಶಿಪ್ಟ್ ಮಾಡ್ತಿದ್ದೇವೆ. ಎಪಿಎಲ್ ಕಾರ್ಡ್ಗೆ ಮೊದಲು 15ಕೆಜಿ ಅಕ್ಕಿ ಕೊಡ್ತಿದ್ದೆವು. ಅವರು ತೆಗೆದುಕೊಳ್ತಾ ಇರಲಿಲ್ಲ. ಹೀಗಾಗಿ ಅದನ್ನ ನಿಲ್ಲಿಸಿದ್ದೆವು.ಡಿಮ್ಯಾಂಡ್ ಬಂದರೆ ಕೊಡ್ತೇವೆ. ಒಂದು ವರ್ಷದಿಂದ ಅಕ್ಕಿ ತೆಗದುಕೊಳ್ಳದವರನ್ನ ಅಮಾನತು ಮಾಡಿದ್ದೇವೆ ಎಂದರು,
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ CLP ಸಭೆಯಲ್ಲಿ ಆ ತರಹ ಯಾವುದೇ ವಿಚಾರ ಪ್ರಸ್ತಾಪ ಆಗಿಲ್ಲ. ಛಲವಾದಿ ನಾರಯಾಣ ಸ್ವಾಮಿ ಅವರು ಸುಳ್ಳು ಆಪಾದನೆ ಮಾಡಿದ್ದಾರೆ . ಚುನಾವಣೆ ಪೂರ್ವದಲ್ಲಿ ಏನು ವಾಗ್ದಾನ ನೀಡಿದ್ದೇವೋ. ಅದರ ಪ್ರಕಾರವೇ ನಮ್ಮ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಪ್ರತಿ ತಿಂಗಳಿಗೆ ಮಹಿಳೆಯರ ಅಕೌಂಟಿಗೆ ಗೃಹ ಲಕ್ಷ್ಮಿ ಹಣ ಹೋಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಜನರ ಬದುಕು ಹಸಿರಾಗಿದೆ. ವಿರೋಧ ಪಕ್ಷದ ನಾಯಕರಿಗೆ ಬೇರೆ ವಿಚಾರ ಪ್ರಸ್ತಾಪ ಮಾಡಕ್ಕೆ ವಿಚಾರಗಳಿಲ್ಲ ಎಂದರು,











