ಮನೆ Latest News ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ಕೊಟ್ಟ ಭಾರತ; ಕಾರ್ಯಾಚರಣೆ ಭಾರತವಿಟ್ಟ ಹೆಸರು...

ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ಕೊಟ್ಟ ಭಾರತ; ಕಾರ್ಯಾಚರಣೆ ಭಾರತವಿಟ್ಟ ಹೆಸರು ಅದೆಷ್ಟು ಅರ್ಥಪೂರ್ಣ ಗೊತ್ತಾ?

0

 

ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ 26 ಅಮಾಯಕ ಭಾರತೀಯರ ಬಲಿ ಪಡೆದಿದ್ದ ರಕ್ಕಸಿ ಉಗ್ರರಿಗೆ ಭಾರತೀಯ ಸೇನೆ 14 ದಿನಗಳ ಬಳಿಕ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದೆ. ಆಪರೇಷನ್ ಸಿಂಧೂರ್ ಮೂಲಕ ಉಗ್ರರ ನೆಲೆಗಳನ್ನು ಉಡೀಸ್ ಮಾಡಿದೆ. ಲಷ್ಕರೆ ತೊಯ್ಬಾ ಮತ್ತು ಜೈಶೆ ಮೊಹಮ್ಮದ್ ಸಂಘಟನೆಗಳ 9 ನೆಲೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದೆ. ನಿಜಕ್ಕೂ ಪಾಕಿಸ್ತಾನ ಇಂತಹದ್ದೊಂದು ದಾಳಿಯನ್ನು ಕನಸಿನಲ್ಲಿಯೂ ನಿರೀಕ್ಷೆ ಮಾಡಿರಲಿಲ್ಲ.

ಣೆಯಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ಸೇರಿ ನಡೆಸಿದ ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳು ಛಿದ್ರ ಛಿದ್ರವಾಗಿದೆ.70ಕ್ಕೂ ಹೆಚ್ಚು ಉಗ್ರರು ಇದರಲ್ಲಿ ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಭಾರತದ ತಂಟೆಗೆ ಬಂದ್ರೆ ಏನಾಗುತ್ತೆ ಅನ್ನೋದನ್ನು ಭಾರತ ಸಣ್ಣದೊಂದು ಟ್ರೇಲರ್ ಮೂಲಕ ಹೇಳಿದೆ. ಅಲ್ಲದೇ ಇನ್ನು ಎಗರಾಡಿದ್ರೆ ಪಿಚ್ಚರ್ ಬಾಕಿ ಇದೆ ಅನ್ನೋದನ್ನು ಸ್ಪಷ್ಟವಾಗಿ ಹೇಳಿದೆ.

ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಅನ್ನೋ ಹೆಸರು ಯಾಕೆ?

ಏಪ್ರಿಲ್ 22 ರಂದ ಪೆಹಲ್ಗಾಮ್ ನಲ್ಲಿ ಪಾಕಿಸ್ತಾನ ಪಾಪಿ ಉಗ್ರರು 26 ಮಂದಿ ಅಮಾಯಕ ಭಾರತೀಯರನ್ನು ಬಲಿ ಪಡೆದಿದ್ದರು. ತಮ್ಮ ಹೆಂಡತಿ ಮಕ್ಕಳ ಮುಂದೆಯೇ 26 ಮಂದಿ ಉಸಿರು ಚೆಲ್ಲಿದ್ದರು. ಅಂತಹ ಕ್ರೂರಿಗಳಿಗೆ ಭಾರತೀಯ ಸೇನೆ ಇವತ್ತು ಉತ್ತರ ಕೊಟ್ಟಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.

ಇನ್ನು ಈ ಕಾರ್ಯಾಚರಣೆಯ ಫೋಟೋದಲ್ಲೇ ಪೆಹಲ್ಗಾಮ್ ದುರಂತವನ್ನು ತೋರಿಸಲಾಗಿದೆ. ಪೆಹಲ್ಗಾಮ್ ನಲ್ಲಿ ನಡೆದ ದುರಂತದಲ್ಲಿ 25 ಮಂದಿ ಹೆಣ್ಮಕ್ಕಳು ಪತಿಯರನ್ನು ಕಳೆದುಕೊಂಡು ವಿಧವೆಯರಾದರು.  ಅದರ ಸಂಕೇತವಾಗಿಯೇ ಪಾಕ್ ವಿರುದ್ಧ ನಡೆದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಅಂತಾ ಹೆಸರಿಡಲಾಗಿದೆ. ಇನ್ನು ಹಿಂದಿಯಲ್ಲಿ ಸಿಂಧೂರ್ ಎಂದರೆ ಕುಂಕುಮ. ನಿಮಗೆಲ್ಲಾ ಗೊತ್ತೇ ಇದೆ ಸಿಂಧೂರ ಸುಮಂಗಲಿಯ ಸಂಕೇತ.  ಆದರೆ ಅವತ್ತಿನ ದಾಳಿಯಿಂದಾಗಿ 25 ಮಂದಿ ಮಹಿಳೆಯರು ತಮ್ಮ ಕುಂಕುಮವನ್ನೇ ಅಳಿಸುವಂತಾಯಿತು. ಇನ್ನು ಭಾರತೀಯ ಸೇನೆಯು ಬಿಡುಗಡೆ ಮಾಡಿದ ಚಿತ್ರದಲ್ಲಿ ಆಪರೇಷನ್ ಸಿಂಧೂರ್ ಅನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಸಿಂಧೂರ್‌ನಲ್ಲಿರುವ ಒಂದು ‘ಒ’ ನಲ್ಲಿ ಬಟ್ಟಲಿಂದ ಕುಂಕುವಚೆಲ್ಲಿರೋದನ್ನು ತೋರಿಸಲಾಗಿದೆ. ಇದು  25 ಮಹಿಳೆಯರ ಜೀವನ ಸಂಗಾತಿಗಳನ್ನು ಕಸಿದುಕೊಂಡ ಕ್ರೂರತೆಯನ್ನು ಸಂಕೇತಿಸುತ್ತದೆ. ಹಾಗಾಗಿ  ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.

ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟದ್ದು ಪ್ರಧಾನಿ ಮೋದಿ

ಅಂದ್ಹಾಗೆ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಅಂತಾ ಹೆಸರು ಇಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಸೇನಾಧಿಕಾರಿಗಳು ಒಂದಷ್ಟು ಹೆಸರುಗಳನ್ನು ಪಟ್ಟಿ ಮಾಡಿದ್ದರಂತೆ. ಅದರಲ್ಲಿ ಆಪರೇಷನ್ ಸಿಂಧೂರ್ ಎಂಬ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ್ದರಂತೆ.

ಇನ್ನು ಪೆಹಲ್ಗಾಮ್ ದಾಳಿಯ ವೇಳೆ ಅನೇಕರು ಇಂದು ಸುಳ್ಳು ಎಂದು ಹೇಳಿದ್ದರು. ಹಾಗಾಗಿ ಇಂದಿನ ದಾಳಿಯ ಬಗ್ಗೆ ಯಾವುದೇ ರೀತಿಯ ಆರೋಪಗಳು ಕೇಳಿ ಬರಬಾರದು ಎಂದು ಭಾರತೀಯ ಸೇನೆ ಅಧಿಕೃತವಾಗಿ ಪ್ರೆಸ್ ಮೀಟ್ ನಡೆಸಿ ಎಲ್ಲವನ್ನು ಸಾಕ್ಷಿ ಸಮೇತವಾಗಿ ವಿವರಿಸಿದೆ. ಅದರಲ್ಲೂ ಭಾರತೀಯ ಸಶಸ್ತ್ರ ಪಡೆಗಳ ಇಬ್ಬರು ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಸುದ್ದಿಗೋಷ್ಟಿ ನಡೆಸಿ “ಆಪರೇಷನ್ ಸಿಂಧೂರ್” ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಸೇನೆ ಮತ್ತು ವಾಯುಪಡೆಯ ಹಿರಿಯ ಅಧಿಕಾರಿಗಳಾದ ಈ ಇಬ್ಬರೂ , ಪಾಕಿಸ್ತಾನದ ಒಂಬತ್ತು ಪ್ರಮುಖ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯ ಬಗ್ಗೆ  ವೀಡಿಯೋ ಮೂಲಕ ವಿವರಿಸಿ ನಾರಿ ಶಕ್ತಿ ಅಂದ್ರೆ ಏನು ಅನ್ನೋದನ್ನು ನಿರೂಪಿಸಿದರು.