ಮನೆ Latest News ಕರ್ನಾಟಕದಲ್ಲಿ ಆಪರೇಷನ್ ಕಮಲ ಮೊದಲು ಆರಂಭ ಮಾಡಿದ್ದೇ ಬಿಜೆಪಿ; ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಕರ್ನಾಟಕದಲ್ಲಿ ಆಪರೇಷನ್ ಕಮಲ ಮೊದಲು ಆರಂಭ ಮಾಡಿದ್ದೇ ಬಿಜೆಪಿ; ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಕರ್ನಾಟಕದಲ್ಲಿ ಆಪರೇಷನ್ ಕಮಲ ಮೊದಲು ಆರಂಭ ಮಾಡಿದ್ದೇ ಬಿಜೆಪಿಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರ ಖರೀದಿ ಆರೋಪ ವಿಚಾರಕ್ಕೆ ಸಂಬಂಧಪ್ಟಂತೆ ಮಾತನಾಡಿದ ಅವರು ಕರ್ನಾಟಕದಲ್ಲಿ ಆಪರೇಷನ್ ಕಮಲ ಮೊದಲು ಆರಂಭ ಮಾಡಿದ್ದೇ ಬಿಜೆಪಿ. ನಂತರ ಇದನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋದರು. ಇದೇ ಬಿಜೆಪಿಯವರ ಮಾಡೆಲ್ ಎಂದಿದ್ದಾರೆ. ಬಿಜೆಪಿ ಸಂಘಟನಾತ್ಮಕವಾಗಿ ಕುಗ್ಗಿರುವ ರಾಜ್ಯಗಳಲ್ಲಿ ಇಡಿ, ಐಟಿ ಬಳಕೆಯಾಗ್ತಿದೆ. ಉಳಿದ ಕಡೆ ರಾಜ್ಯಪಾಲರ ದುರುಪಯೋಗ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್ ಕಮಲ ಮಾಡ್ತಿರುವುದಕ್ಕೆ ಸಾಕ್ಷಿ ಇದೆ. ಮಹಾರಾಷ್ಟ್ರದಲ್ಲಿ ಉದ್ಯಮಿ ಅದಾನಿ ಜೊತೆ ಸೇರಿ ಸರ್ಕಾರ ಬೀಳಿಸಿದರು. ಸರ್ಕಾರ ಬೀಳಿಸಿದ ಉದಾಹರಣೆಗಳು ಬಹಳ ಇದೆ. ನಮ್ಮ‌ ಪಕ್ಷದ ಶಾಸಕ ಸ್ನೇಹಿತರನ್ನು ಸಂಪರ್ಕ ಮಾಡಿದ್ದಾರೆ. ಅದನ್ನು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ. ಆದರೆ ಅದು ಕಾರ್ಯಗತ ಆಗೋದಿಲ್ಲ. ಬಿಜೆಪಿ ನಾಯಕರು ಸರ್ಕಾರ ಬಿಳಿಸಲು ಸಾವಿರ ಕೋಟಿ ರೆಡಿ ಇದೆ ಅಂತಾರೆ. ಹಾಗಾದರೆ ಈ ಹಣ ಎಲ್ಲಿಂದ ಬಂತು.ಸಾವಿರ ಕೋಟಿ ರೂ ಸಂಗ್ರಹ ಹೇಳಿಕೆ ಬಗ್ಗೆ ಎನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಆರೋಪಿತ ನಾಯಕರ ಮೇಲೆ‌ ಮನಿ ಲ್ಯಾಂಡ್ರಿಂಗ್ ಕೇಸಿಲ್ವಾ ? ಒಂದು ಸಾವಿರ ಕೋಟಿ ರೂ ಯಾವ ದುಡ್ಡು ಅದು ? ಅದಾನಿ ದುಡ್ಡಾ ಅಥವಾ ೪೦% ಕಮೀಷನ್ ದುಡ್ಡಾ ? ಎಂದು  ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬಿಪಿಎಲ್‌ ಮಾನದಂಡದ ಪ್ರಕಾರ ಕ್ರಮ ಆಗಿದೆ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಂಗಳೂರು; ಬಿಪಿಎಲ್ ಕಾರ್ಡನ್ನ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು, ಬಿಪಿಎಲ್‌ ಮಾನದಂಡದ ಪ್ರಕಾರ ಕ್ರಮ ಆಗಿದೆ ಎಂದಿದ್ದಾರೆ.

ಬಿಪಿಎಲ್ ಮಾನದಂಡ ಕೇಂದ್ರ ಸರ್ಕಾರದ ‌ಮಾನದಂಡವಾಗಿದೆ‌‌. ಅರ್ಹರಿಗೆ ನ್ಯಾಯ ಸಿಗಬೇಕಲ್ವಾ ?. ಅರ್ಹರಿಗೆ ಅವಕಾಶ ಕೊಡುವ ಕೆಲಸ ಮಾಡಲಾಗಿದೆ. ಬಡವರ ದುಡ್ಡು ಬಡವರಿಗೆ ಹೋಗಲಿದೆ. ಕೇಂದ್ರ ಸರ್ಕಾರ ಮಾನದಂಡ‌ ಬದಲಾವಣೆ ಮಾಡಿದರೆ ಮಾಡಲಿ.ಅದನ್ನು ಅನುಸರಿಸುತ್ತೇವೆ ಎಂದಿದ್ದಾರೆ.