ಮನೆ Latest News ನಾನು ಸಿದ್ದರಾಮಯ್ಯ ಏನು ಮಾತಾಡಿದ್ದೀವಿ ನಮಗೆ ಮಾತ್ರ ಗೊತ್ತು: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ನಾನು ಸಿದ್ದರಾಮಯ್ಯ ಏನು ಮಾತಾಡಿದ್ದೀವಿ ನಮಗೆ ಮಾತ್ರ ಗೊತ್ತು: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು: ನಾನು ಸಿದ್ದರಾಮಯ್ಯ ಏನು ಮಾತಾಡಿದ್ದೀವಿ ನಮಗೆ ಮಾತ್ರ ಗೊತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಮ್ಮಲ್ಲಿ ಗೊಂದಲ‌ ಏನೂ ಇಲ್ಲ, ಬೇರೆಯವರಿಗೆ ಗೊಂದಲ ಇರಬಹುದು. ನಾನು ಸಿದ್ದರಾಮಯ್ಯ ಏನು ಮಾತಾಡಿದ್ದೀವಿ ನಮಗೆ ಮಾತ್ರ ಗೊತ್ತು. ನಮ್ಮ ಪಕ್ಷದ ವರಿಷ್ಠರು ಏನು ಮಾತಾಡಿದ್ದಾರೆ ನಮಗೆ ಗೊತ್ತು. ಸ್ಟೇಟ್ಮೆಂಟ್ ಕೊಡುತ್ತಿದ್ದರೆ ಯಾರಿಗೂ ಉಪಯೋಗ ಇಲ್ಲ. ಪಾರ್ಟಿಗೆ ಡ್ಯಾಮೇಜ್ ಆಗುತ್ತೋ ಹೊರತು ಲಾಭ ಆಗಲ್ಲ ಎಂದಿದ್ದಾರೆ.ನಾನು ಸಿದ್ದರಾಮಯ್ಯ ಏನು ಮಾತಾಡಿಕೊಂಡಿದ್ದೀವಿ ಅಂತ ನನಗೆ ಗೊತ್ತು. ಕದ್ದು ಮುಚ್ಚಿ‌ ಮಾತಾಡಿಕೊಂಡಿಲ್ಲ.

ನಾವು, ನಮ್ಮ ವರಿಷ್ಠರು ಮಾತಾಡಿಕೊಂಡಿದ್ದೇವೆ. ಬೇರೆಯವರು ಟೆನ್ಶನ್ ತಗೊಳ್ಳೋದಾಗಲೀ ಹೇಳಿಕೆ ಕೊಡೋದರಿಂದಾಗಲೀ ಯಾರಿಗೂ ಇದರಿಂದ ಪ್ರಯೋಜನ ಇಲ್ಲ. ನನ್ನ ಪರ ಹೇಳಿಕೆ ಕೊಡಬಹುದು, ವಿರುದ್ಧ ಹೇಳಿಕೆ ಕೊಡಬಹುದು. ಸಚಿವರು, ಶಾಸಕರು ಯಾರೇ ಇರಬಹುದು, ಅವರ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ತರುತ್ವೆ, ಇದರಿಂದ ಪಾರ್ಟಿ ಗೆ ಒಳ್ಲೇ ಹೆಸರು ಬರಲ್ಲ. ಎಲ್ಲ ಬಾಯಿ ಮುಚ್ಕೊಂಡು ಇರಬೇಕು ಅಂತ ಖರ್ಗೆಯವರು ಹೇಳಿದ್ದಾರೆ.ಅದನ್ನು ನಾವು ಪಾಲಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದ್ದಾರೆ.

ಗೊಂದಲ ಇತ್ಯರ್ಥ ಮಾಡಬೇಕೆಂಬ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಅವರು ಗೊಂದಲ ಏನೂ ಇಲ್ಲ, ಬೇರೆಯವರಿಗೆ ಗೊಂದಲ ಇರಬಹುದು, ನನಗೆ ಇಲ್ಲ.ನಾನು ಸಿದ್ದರಾಮಯ್ಯ ಏನು ಮಾತಾಡಿದ್ದೇವೆ ನಮಗೆ ಮಾತ್ರ ಗೊತ್ತು. ಪಕ್ಷದ ವರಿಷ್ಠರು ಸೇರಿ ನಾವು ಮಾತಾಡಿದ್ದೇವೆ. ಆ  ಪ್ರಕಾರ ನಾವು ಮಾತಾಡಿಕೊಂಡಿದ್ದೇವೆ .ಹೀಗಾಗಿ ಬೇರೆಯವರು ಟೆನ್ಷನ್ ತೆಗೆದುಕೊಂಡು ಮಾತಾಡೋದರಿಂದ ಯಾರಿಗೂ ಏನೂ ಪ್ರಯೋಜನ ಆಗಲ್ಲ. ಅವರ್ಯಾರೋ ನನ್ನ ಪರ ಹೇಳಿಕೆ ಕೊಡ್ತಿರಬಹುದು, ಅಥವಾ ವಿರುದ್ದ ಕೊಡ್ತಿರಬಹುದು. ಮಂತ್ರಿಗಳು, ಶಾಸಕರು ಯಾರೇ ಇದ್ರೆ ಪಕ್ಷ ಕ್ಕೆ ಡ್ಯಾಮೇಜ್ ಆಗುತ್ತೋ ಹೊರತು ಒಳ್ಳೇಯದ್ ಆಗಲ್ಲ. ಎಲ್ಲರೂ ಬಾಯಿ ಮುಚ್ಕೊಂಡು ಇರಬೇಕು ಎಂದು ಖರ್ಗೆ ಯವರು ಹೇಳಿದ್ದಾರೆ. ಅದರ ಪ್ರಕಾರ ನಾವು ಪಾಲನೆ ಮಾಡಿಕೊಂಡು ಹೋಗ್ಬೇಕು ಎಂದಿದ್ದಾರೆ.