ಮನೆ Latest News ಎಐ ಕಂಪೆನಿ ಆಂಧ್ರಕ್ಕೆ‌ ಹೋಗಿರುವ ವಿಚಾರ: ಅವರು ಹೋದರೆ ನಾವು ಬೇಡ ಅನ್ನೋಕೆ ಆಗುತ್ತಾ.? ಎಂದ...

ಎಐ ಕಂಪೆನಿ ಆಂಧ್ರಕ್ಕೆ‌ ಹೋಗಿರುವ ವಿಚಾರ: ಅವರು ಹೋದರೆ ನಾವು ಬೇಡ ಅನ್ನೋಕೆ ಆಗುತ್ತಾ.? ಎಂದ ಡಿಕೆಶಿ

0

ಬೆಂಗಳೂರು; ಎಐ ಕಂಪೆನಿ ಆಂಧ್ರಕ್ಕೆ‌ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಅವರು ಹೋದರೆ ನಾವು ಬೇಡ ಅನ್ನೋಕೆ ಆಗುತ್ತಾ.? ಎಂದು ಡಿಕೆಶಿ ಹೇಳಿದ್ದಾರೆ. ಅವರಿಗೂ ಅನುಭವ ಆಗಲಿ. ನನ್ನ ಹತ್ರ ಬಿಸಿನೆಸ್ ಡೆಲಿಗೇನ್ ಬರುತ್ತಿದ್ದಾರೆ. ಅಮೇರಿಕಾ ಕಂಪೆನಿಗಳು ಬರುತ್ತಿವೆ. ಹೊಸ ಹೊಸ ವಿವಿಗಳು ಬೆಂಗಳೂರಿಗೆ ಬರುತ್ತಿವೆ ನಮ್ಮಲ್ಲಿರುವ ಸಂಸ್ಕೃತಿ, ವಾತಾವರಣ ಅಟ್ರಾಕ್ಟ್ ಮಾಡುತ್ತಿದೆ ಎಂದಿದ್ದಾರೆ.

ಇದೇ ವೇಳೆ ಮಜುಂದಾರ್ ಶಾ ಆರೋಪಕ್ಕೆ ತಿರುಗೇಟು ಕೊಟ್ಟ ಡಿಕೆಶಿ ಪಾಪ ಅವರೇನೋ ಟ್ವೀಟ್ ಮಾಡುತ್ತಿದ್ದಾರೆ. ಬೆಂಗಳೂರು ಕೋಟ್ಯಾಂತರ ಜನರಿಗೆ ಉದ್ಯೋಗ ಕೊಟ್ಟಿದೆ. ಉದ್ಯೋಗಿಗಳನ್ನು ದೊಡ್ಡವರನಾಗಿ ಮಾಡಿದೆ. ಸರಕಾರವೂ ಉದ್ಯೋಗಿಗಳಿಗೆ ಸರಕಾರ ಕೊಟ್ಟಿದೆ. ಟೀಕೆ ಮಾಡಿದ್ರೆ ನಮ್ಮ ರಾಜ್ಯಕ್ಕೆ ದ್ರೋಹ ಮಾಡಿಕೊಂಡ ಹಾಗೆ. ಬೆಂಗಳೂರು ನಗರಕ್ಕೆ ದ್ರೋಹ ಮಾಡಿದ ಹಾಗೆ. ಇದು ಕಮ್ಯುನಿಸ್ಟ್ ದೇಶ ಅಲ್ಲ,ಡೆಮಾಕ್ರಟಿಕ್ ದೇಶ ಎಂದಿದ್ದಾರೆ.ಇದೇ ವೇಳೆ ಪ್ರಿಯಾಂಕ್ ಖರ್ಗೆ ಮೇಲಿನ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೋರ್ ಸ್ಟ್ರಾಂಗ್ ಮೋರ್ ಎನೀಮಿಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮಿಸ್ ಎಂದು ಹೇಳಿದ್ದಾರೆ.

ಪದೇ ಪದೇ ಟ್ವೀಟ್ ಮಾಡೋ ಮೂಲಕ ಮಜುಂದಾರ್ ಷಾ ಬೆದರಿಕೆ ಹಾಕ್ತಿದ್ದಾರಾ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿ  ಬೆದರಿಕೆ ಅಂತ‌ ಏನಿಲ್ಲ. ಬೇರೆ ದೇಶಗಳಿಂದ ನಾವು ಕಲೀಬೇಕಾಗಿಲ್ಲ. ನಮ್ಮ ಪ್ರಜಾಪ್ರಭುತ್ವದ ದೇಶ, ಕಮ್ಯೂನಿಸ್ಟ್‌ ಸರ್ಕಾರ ಅಲ್ಲ. ಹಾಗಿದ್ರೆ ಯಾವುದೇ ರಸ್ತೆ ಇದ್ದರೂ ಹೊಡೆದು ಹಾಕಬಹುದು. ಆ ರೀತಿ ನಾವು ಮಾಡೋಕೆ ಆಗಲ್ಲ. ಐಟಿ ಕಂಪನಿಗಳು ದೇಶಕ್ಕೆ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಅವರಿಗೆ ಅನುಕೂಲ ಆಗಲಿ ಅಂತ ನಾವು ಮಹದೇವ ಪುರ ಮತ್ತು ಕೆಆರ್ ಪುರದಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಅದಕ್ಕಾಗಿ ಅವಕಾಶ ಮಾಡಿಕೊಟ್ಟಿದ್ದೇವೆ. ಟ್ರಾಫಿಕ್, ರಸ್ತೆ ಸುರಕ್ಷತೆಗಾಗಿ ಅಲ್ಲಿರೋ ೫ ವಾರ್ಡ್ ಗೆ ಹಣ ನೀಡಿದ್ದೇವೆ. ಐಟಿ ಕಾರಿಡಾರ್ ಗೆ ಅನುಕೂಲ ಆಗಲಿ ಎಂದು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಗೂಗಲ್ ಕಂಪನಿ ಆಂಧ್ರಕ್ಕೆ ಹೋಗಿರೋ ವಿಚಾರದ ಬಗ್ಗೆ ಮಾತನಾಡಿ ಅವರು ಕ್ಲೇಮ್ ಮಾಡಿಕೊಳ್ಳಲಿ, ಇದು ಹೊಸದೇನಲ್ಲ. ಯುಪಿ ಬಿಹಾರ ಎಲ್ಲರೂ ಕರೀತಾ ಇದ್ದಾರೆ, ಜಾಹೀರಾತು ನೀಡುತ್ತಿದ್ದಾರೆ.ನಾವೇನು ಕೊಡುತ್ತಿಲ್ಲ, ಆದರೂ ಎಲ್ಲರೂ ಬೆಂಗಳೂರಿಗೆ ಬರ್ತಿದ್ದಾರೆ. ನಾವು ಅವರಿಗೆಲ್ಲಾ ಕೋಪರೇಟ್ ಮಾಡುತ್ತಿದ್ದಾರೆ. ಐಟಿ ಸಮಿಟ್ ಇದೆ, ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದಿದ್ದಾರೆ. Dನುದಾನ ತಾರತಮ್ಯ ಜೆಡಿಎಸ್ ಶಾಸಕ ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅದಕ್ಕೆ ಸಿಎಂ ಉತ್ತರ ಕೊಡ್ತಾರೆ. ಯಾರು ಯಾರಿಗೆ ಏನ್ ಕೊಡ್ತಾರೆ ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರೇ ಬುದ್ದಿ ಕಲಿಸಿದ್ದಾರೆ. ನಮಗೆ ಹೃದಯ ಶ್ರೀಮಂತಿಕೆ ಇದೆ ಎಂದಿದ್ದಾರೆ.