ಬೆಂಗಳೂರು; ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳನ್ನು ಭೇಟಿಯಾದ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ನಾನೇನು ಸಭೆ ಮಾಡಿಲ್ಲ, ಯಾವ ಸಭೆ ಮಾಡೋ ಅವಶ್ಯಕತೆ ಇಲ್ಲ. ಹೊಸ ಪದಾಧಿಕಾರಿಗಳ ತಂಡ ರಾಜಿ ಮಾಡಿಕೊಂಡು ಬಂದಿದ್ದರು. ಮುಂದೆ ಕಿತ್ತಾಟ ಮಾಡಿದ್ರೆ ಬೋರ್ಡ್ ಮಾಡುತ್ತೇನೆ ಅಂದಿದ್ದೇನೆ. ಜೊತೆಗೆ ಜಾತಿ ಗಣತಿ ಕುರಿತು ಅಪರೇಟ್ ಸಭೆ ಮಾಡೋಕೆ ತೀರ್ಮಾನ ಮಾಡಿದ್ದೀನಿ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ತೀನಿ ಎಂದಿದ್ದೇನೆ ಎಂದರು. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಭಾಪತಿಗಳು ಪತ್ರ ಬರೆದ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹೋಮ್ ಮಿನಿಸ್ಟರ್ ಇದ್ದಾರೆ ಅದಕ್ಕೆ ಎಂದಿದ್ದಾರೆ.
ಇನ್ನು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಇವತ್ತು ಡಿಸಿಎಂ ಅವರನ್ನು ಭೇಟಿ ಮಾಡಿದ್ದೀನಿ. ಮುಖ್ಯವಾಗಿ ಮೂರು ವಿಚಾರ ಇದ್ದವು. ಜಾತಿಗಣತಿ ಸರಿಯಾಗಿಲ್ಲ, ಅದನ್ನ ಜಾರಿಗೆ ತರದಂತೆ ಮಾಡಿ ಎಂದು ಕೇಳಿದ್ದೇವೆ. ಹೊಸದಾಗಿ ಜಾತಿಗಣತಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಕೆಂಪೇಗೌಡ ಮೆಡಿಕಲ್ ಕಾಲೇಜಿನ ಜಾಗ ರಿನ್ಯೂವಲ್ ಮಾಡೋಕೆ ಹೇಳಿದ್ದೇವೆ. ಸಜ್ಜೇಪಾಳ್ಯದ ಜಮೀನಿನ ವಿಷ್ಯದಲ್ಲಿ ಚರ್ಚೆ ಮಾಡಿದ್ದೇವೆ. ಸಿಎಂ ಅವರು ಜಾತಿಗಣತಿ ಮಂಡಿಸಿದ್ರೆ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಉರುಳಿಸೋ ತಾಕತ್ತು ಹೊಂದಿರೋ ಜನಾಂಗ ನಮ್ಮದು. ಇದಕ್ಕೆ ಈ ಹಿಂದೆ ಅನೇಕ ಉದಾಹರಣೆ ಇದೆ. ಆ ವಿಷಯದಲ್ಲಿ ಕ್ಯಾಬಿನೆಟ್ ನಲ್ಲಿ ಮಾತಾಡುತ್ತೇನೆ ಎಂದು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಸಂಕ್ರಾಂತಿ ಇರೋ ಕಾರಣ ಸಭೆ ಮುಂದೂಡಿಕೆ ಯಾಗಿದೆ. ಇನ್ನೊಂದು ಸಭೆ ಕರೀತಿವೆ ಎಂದರು.
ಡಿಸಿಎಂ ಕುರಿತು ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜಣ್ಣನವರು ವೈಯಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಏರಲು ಹೋರಾಟ ಡಿಕೆ ಮಾಡಿದ್ದಾರೆ. ಡಿಸಿಎಂ ಡಿಕೆ ಅವರು ಸಿಎಂ ಆಗೋಕೆ ನಮ್ಮ ಹೋರಾಟ ಇದ್ದೇ ಇದೆ, ಅವರಿಗೆ ಅರ್ಹತೆ ಇದೆ ಎಂದರು. ಹೈಕಮಾಂಡ್ ಯಾರ ಪರ ವಹಿಸಿದೆ ನೋಡಬೇಕು. ಡಿಕೆ ಅವರಿಗೆ ಅರ್ಹತೆ ಇದೆ.ಅವರೇ ಈ ಸರ್ಕಾರ ತರೋಕೆ ಕಾರಣ. ಅವರೇ ಮುಖ್ಯಮಂತ್ರಿ ಆಗಬೇಕು. ಅವರಿಗೆ ಮೆರಿಟ್ ಇದೆ, ಅವರೇ ಮುಖ್ಯಮಂತ್ರಿ ಆಗಬೇಕು ಎಂದು ತಿಳಿಸಿದ್ರು.











