ಮನೆ Latest News ಪವಿತ್ರ ಗೌಡಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ ಮಾಡಿಕೊಟ್ಟ ಮಹಿಳಾ ಪಿಎಸ್‌ ಐಗೆ ಸಂಕಷ್ಟ; ನೋಟಿಸ್...

ಪವಿತ್ರ ಗೌಡಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ ಮಾಡಿಕೊಟ್ಟ ಮಹಿಳಾ ಪಿಎಸ್‌ ಐಗೆ ಸಂಕಷ್ಟ; ನೋಟಿಸ್ ಜಾರಿ ಮಾಡಿದ ಡಿಸಿಪಿ

0

ಬೆಂಗಳೂರು;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 13 ಆರೋಪಿಗಳು ಪರಪ್ಪನ ಅಗ್ರಹಾಲ ಜೈಲು ಸೇರಿದ್ದಾರೆ. ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ಪ್ರಕರಣದ  ಎ1 ಆರೋಪಿ ಪವಿತ್ರ ಗೌಡ ಇದೀಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪವಿತ್ರ ಗೌಡ ಪರದಾಡುತ್ತಿದ್ದರೆ ಇತ್ತ ಪವಿತ್ರ ಗೌಡಗೆ ಲಿಪ್ ಸ್ಟಿಕ್ ಹಚ್ಚಿಕೊಳ್ಳಲು ಅವಕಾಶ ನೀಡಿದ ಪಿಎಸ್ ಐ ಗೆ ಎಸಿಪಿ ಗಿರೀಶ್ ನೋಟಿಸ್ ನೀಡಿದ್ದಾರೆ.

ಜೂನ್‌ 15 ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳ ಮಹಜರಿಗಾಗಿ ಪವಿತ್ರ ಗೌಡಳನ್ನು ರಾಜ ರಾಜೇಶ್ವರಿ ನಗರದ ಆಕೆಯ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮನೆಯಿಂದ ಹೊರ ಬರುತ್ತಿದ್ದಂತೆ ಪವಿತ್ರ ಗೌಡ ಲಿಪ್ ಸ್ಟಿಕ್ ಹಚ್ಚಿಕೊಂಡು ಬಂದಿದ್ದರು. ಅಲ್ಲದೇ ಮ್ಯಾಧ್ಯಮದವರನ್ನು ನೋಡುತ್ತಲೇ ಮೂತಿ ತಿರುಗಿಸಿ ಸ್ಮೈಲ್ ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಪವಿತ್ರ ಗೌಡ ಒಂದು ಕೊಲೆ ಪ್ರಕರಣದ ಎ1 ಆರೋಪಿ ಅನ್ನೋ ಪರಿಜ್ಞಾನವೇ ಇಲ್ಲದಂತೆ ಆಕೆಗೆ ಲಿಪ್ ಸ್ಟಿಕ್ ಹಚ್ಚಲು ಅವಕಾಶ ಮಾಡಿಕೊಟ್ಟ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ನೋಟಿಸ್ ನೀಡಿದ್ದಾರೆ. ಜಸ್ಟ್ ಲಿಪ್ ಸ್ಟಿಕ್ ತಾನೇ ಹಚ್ಕೊಳ್ಳಿ ಅಂತಾ ಬಿಟ್ಟ ಪಿಎಸ್ ಐ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಪವಿತ್ರ ಲಿಪ್ ಸ್ಟಿಕ್ ಹಚ್ಚಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಟ್ರೋಲ್ ಮಾಡಿದ್ರು. ಅಲ್ಲದೇ ಇದೆಲ್ಲಾ ಹೇಗೆ ಸಾಧ್ಯ ಅಂತಾ ಪ್ರಶ್ನಿಸಿದ್ದರು. ಇದೆಲ್ಲಾ ಆದ ಬೆನ್ನಲ್ಲೇ ಪಿಎಸ್ ಐಗೆ ನೋಟಿಸ್ ಜಾರಿಯಾಗಿದೆ.

ಇನ್ನು ಇಷ್ಟು ದಿನ ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ಪವಿತ್ರ ಗೌಡ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಎರಡು ಮೂರು ಬಾರಿ ಪವಿತ್ರ ಗೌಡ ಅವರ ತಂದೆ, ತಾಯಿ, ಮಗಳು, ಸಹೋದರ ಅವರನ್ನು ಆಕೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕುಟುಂಬಸ್ಥರನ್ನು ಭೇಟಿಯಾದ ವೇಳೆ ಪವಿತ್ರ ತುಂಬಾ ಭಾವುಕರಾಗಿದ್ದರು ಎನ್ನಲಾಗಿದೆ. ಮತ್ತೊಂದು ಕಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ತಂದ್ರು ಅನ್ನೋ ಹಾಗೇ ಏನೋ ಮಾಡಲು ಪವಿತ್ರ ಅದೆಷ್ಟೋ ಜನರ ಬದುಕನ್ನು ಬೀದಿಗೆ ತಂದಿದ್ದಾಳೆ ಅನ್ನೋದಂತು ಸತ್ಯ.