ಮನೆ Latest News ಪ್ರತಾಪ್ ಸಿಂಹ್ ಮಾತ್ರವಲ್ಲ ಬಿಜೆಪಿಯ ಎಲ್ಲರನ್ನೂ ಗಡಿಪಾರು ಮಾಡಬೇಕು: ಬಿಜೆಪಿ ವಿರುದ್ಧ ಗುಡುಗಿದ ...

ಪ್ರತಾಪ್ ಸಿಂಹ್ ಮಾತ್ರವಲ್ಲ ಬಿಜೆಪಿಯ ಎಲ್ಲರನ್ನೂ ಗಡಿಪಾರು ಮಾಡಬೇಕು: ಬಿಜೆಪಿ ವಿರುದ್ಧ ಗುಡುಗಿದ ಸಚಿವ ಶಿವರಾಜ ತಂಗಡಗಿ

0

ಕೊಪ್ಪಳ: ಪ್ರತಾಪ್ ಸಿಂಹ್ ಮಾತ್ರವಲ್ಲ ಬಿಜೆಪಿಯ ಎಲ್ಲರನ್ನೂ ಗಡಿಪಾರು ಮಾಡಬೇಕು ಎಂದು  ಬಿಜೆಪಿ ವಿರುದ್ಧ ಗುಡುಗಿದ ಸಚಿವ ಶಿವರಾಜ ತಂಗಡಗಿ ಗುಡುಗಿದ್ದಾರೆ.

ಕಾರಟಗಿಯಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ ಮದ್ದೂರು ಗಣೇಶೋತ್ಸವದಲ್ಲಿ ಗಲಾಟೆ ಯಾಕೆ ಆಗಿದೆ..? ಮೊದಲು ಇಂತಹ ಕೆಲಸ ಮಾಡೋದನ್ನ ಬಿಡಲಿ. ನಿಜವಾದ‌ ಹಿಂದುಗಳ ಮಕ್ಕಳನ್ನ ಬಾವಿಗೆ ತಳ್ಳೊದು. ಯಾವ ಬಿಜೆಪಿ ಲೀಡರ್ ಗಳ ಮಕ್ಕಳು ಗಣೇಶೋತ್ಸವದಲ್ಲಿ ಕುಣಿತಾಯಿದ್ದಾರೆ. ಯಾರಾದ್ರೂ ಲೀಡರ್ ಮಕ್ಕಳು ರೋಡ್ ಗೆ ಬಂದು ಪ್ರತಿಭಟನೆ ಮಾಡೋ ಕೆಲಸ ಮಾಡ್ತರಾ…? ಬಡ ಮಕ್ಕಳನ್ನ ಪ್ರಚೋದನೆ ಮಾಡಿ ಜಗಳ ಮಾಡೋಕೆ ಹಚ್ಚೋದು, ಆ ಕೆಲಸ ಮಾಡೋಕೆ ಹಚ್ಚೊದು. ಅನಾಹುತಕ್ಕೆ ಈಡಾಗೋದು ಹಿಂದುಗಳ ಮಕ್ಕಳು. ಪ್ರವೀಣ ಅನ್ನೋರ ತಂದೆಯ ವಿಡಿಯೊ ನೋಡಿದ್ದಾರಾ.. ಏನ್ ಹೇಳಿದ್ದಾರೆ ಅಂತ‌‌.?ಎಂದು ಪ್ರಶ್ನಿಸಿದ್ದಾರೆ.

ತೋರಸ್ಲಾ ನಿಮಗೆ,‌ಬಾಳ ಚೆನ್ನಾಗಿ ಹೇಳಿದ್ದಾರೆ. ಗಣೇಶನ್ನ ನಾವು ಇಟ್ಕೋತಿವಿ, ಹಿಂದುಗಳನ್ನ ಏನೂ ಪೆಟೆಂಟ್ ತಗೊಂಡಿದ್ದಾರಾ ನಾವು ಹಿಂದುಗಳೆ‌‌ ಎಂದಿದ್ದಾರೆ ತಂಗಡಗಿ. ಪ್ರವೀಣ ನೆಟ್ಟಾರು ತಂದೆ ಹೆಳಿದ್ದಾರೆ, ಹಿಂದುಗಳ ಮಕ್ಕಳನ್ನ ರೋಡ್ ಗೆ ತಳ್ಳಿ ತಮ್ಮ ಮಕ್ಕಳನ್ನ ಫಾರಿನ್ ಒಳಗೆ ಓದಸ್ತಾಯಿದ್ದಾರೆ ಅಂತಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಪಾಕ್ ಘೋಷಣೆ ಕೂಗಿದ ವಿಚಾರದ ಬಗ್ಗೆ ಮಾತನಾಡಿ ಪಾಕ್ ಪರವಾಗಿ ಶಿವಮೊಗ್ಗದಲ್ಲಿ ಕೂಗಿದ್ರು ಅಷ್ಟೆ, ಬೇರೆ ಎಲ್ಲೇ ಕೂಗಿದ್ರು ಅಷ್ಟೆ ಒದ್ದು ಒಳಗೆ ಹಾಕ್ತೀವಿ. ಪಾಕ್ ಪರ ಇದ್ದವರ ಬಗ್ಗೆ ಸಮರ್ಥನೆ ಮಾಡ್ಕೊಳೊ ಪ್ರಶ್ನೆಯೇ ಇಲ್ಲ. ಹಿಂದೂಸ್ಥಾನದವರು, ಇಂಡಿಯಾದವರು ಈ ದೇಶದ ಭಕ್ತರು. ಈ ದೇಶದ ಬಗ್ಗೆ ಬಿಜೆಪಿಯವರ ಕಡೆ ಕೇಳೋವಂತದೆ ಇದೆಯಾ..?ಈ ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರು ನಾವು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ನಾವು, ಬಿಜೆಪಿಯವರು ಯಾರು ಹೋರಾಟ ಮಾಡಿದ್ರು..? ಒಬ್ಬರೆ ಒಬ್ಬರ ಹೆಸರು ಹೇಳಿ ನೋಡೋಣ ಎಂದಿದ್ದಾರೆ.

ಭಾರತ ದೇಶಕ್ಕೆ ರಾಷ್ಟ್ರ ಗೀತೆ ಹಾಡಿದವರು ನಾವು, ಜೈ ಜವಾನ್ ಜೈ ಕಿಸಾನ್ ಅಂದವರು ನಾವು. ರಾಷ್ಟ್ರ ದ್ವಜವನ್ನ ತಂದು ಕೊಟ್ಟವರು ನಾವು, ಬೋಲೊ ಭಾರತ್ ಮಾತಾಕಿ ಘೋಷಣೆ ಕೂಗಿದವರು ನಾವು ಎಂದ ಶಿವರಾಜ್ ತಂಗಡಗಿ ಹೇಳಿದ್ದಾರೆ.