ಮನೆ Latest News ಎಲ್ಲರೂ ಮಂತ್ರಿ,ಶಾಸಕರು ಆಗೋಕೆ ಆಗಲ್ಲ, ಆದರೆ ಅದು ನನಗೆ ಜನತೆ ಕೊಟ್ಟ ಅಧಿಕಾರ; ಭಾವುಕರಾದ ಮಾಜಿ...

ಎಲ್ಲರೂ ಮಂತ್ರಿ,ಶಾಸಕರು ಆಗೋಕೆ ಆಗಲ್ಲ, ಆದರೆ ಅದು ನನಗೆ ಜನತೆ ಕೊಟ್ಟ ಅಧಿಕಾರ; ಭಾವುಕರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

0

ಬೆಂಗಳೂರು: ಎಲ್ಲರೂ ಮಂತ್ರಿ,ಶಾಸಕರು ಆಗೋಕೆ ಆಗಲ್ಲ, ಆದರೆ ಅದು ನನಗೆ ಜನತೆ ಕೊಟ್ಟ ಅಧಿಕಾರ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭಾವುಕರಾದ್ರು.

ಹೆಚ್ ಡಿ ದೇವೇಗೌಡ ಭಾವುಕರಾದ್ರು.

ಮಾಲೂರು ಪರಾಜಿತ ಅಭ್ಯರ್ಥಿ ಹೂಡಿ‌ ವಿಜಯ್ ಕುಮಾರ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ತುಂಬಾ ನೋವಿನಿಂದ ಹೇಳ್ತೀನಿ. ಈ ರಾಜ್ಯದಲ್ಲಿ ಹಲವಾರು ಸಮಾಜಗಳ ಇವೆ. ಎಲ್ಲರೂ ಮಂತ್ರಿ,ಶಾಸಕರು ಆಗೋಕೆ ಆಗಲ್ಲ. ಆದರೆ ಒಂದು ಜೀವನದಲ್ಲಿ ಜನತೆ ಕೊಟ್ಟ ಅಧಿಕಾರ. ನಾನು ಒಬ್ಬ ಸಾಮಾನ್ಯ ರೈತನ ಮಗ.ಯಾರು ಅಧಿಕಾರ ನಡೆಸ್ತಾ ಇದ್ದಾರೆ. ಅವರು ನನ್ನ ಜೊತೆ ನಾನು ಕೈಹಿಡಿದು ಮೇಲೆ ಎತ್ತಿದೆ ಅಂತ ಹೇಳಲ್ಲ ಅವ್ರು ಬೆಳೆದಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡಲ್ಲ. ನಾನು ಸಿಎಂ ಆಗಿ ಎರಡು ಸಾವಿರ ಕೊಟ್ಟಿಲ್ಲ. 33 ಜನ ಹೆಣ್ಣು ಮಕ್ಕಳು. ಬಿಬಿಎಂಪಿಯಲ್ಲಿ ಮುಸ್ಲಿಂ ಸಮುದಾಯ ಹೆಣ್ಣು ಕಾರ್ಪೋರೆಟರ್. ಪಟ್ಟಿ ಮಾಡಬಹುದು. ಸುಮಾರು 26 ಮುಖಂಡರಿಗೆ ಬೇರೆ ‌ಬೇರೆ ಜಾತಿಗಳಿಗೆ ಅಧಿಕಾರ ಹಂಚಿಕೆಯಾಗಿದೆ. ಹೆಣ್ಣು ಮಕ್ಕಳು ಚೇರ್ ಮೆನ್ ಅದರೆ ಆ ಎರಡು ಸಾವಿರ ಏನು ಆಗಲ್ಲ. ಅಯ್ಯೋ ಎರಡು ಸಾವಿರ ಕೊಟ್ಟುಬಿಟ್ರು ಅಂತಾರೆ.ಆದರೆ ಹೆಣ್ಣು ಮಕ್ಕಳು ಅಧಿಕಾರ ಬರೋ ಅಧಿಕಾರ ಕೊಟ್ಟಿದ್ದು ದೇವೇಗೌಡ ಎಂದಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಇರಲಿಲ್ಲ. ಇವತ್ತು ಎಷ್ಟು ಜನ ಎಸ್ಪಿ,ಡಿವೈಎಸ್ಪಿ,ಇನ್ಸ್ಪೆಕ್ಟರ್ ಇದ್ದಾರೆ. ಯಾವ ಯಾವ ಜಾತಿ ಇದ್ದಾರೆ. ನಾನು ಎರಡು ಸಾವಿರ ಗ್ಯಾರಂಟಿ ಹಣ ಕೊಟ್ಟಿಲ್ಲ. ನಾನು ನಿಮ್ಮ ಕೈಗೆ ಅಧಿಕಾರ ಕೊಟ್ಟಿದ್ದೀ‌ನಿ. ಒಂದು ಬೋರ್ಡ್ ಚೇರ್ ಮೆನ್ ಮಾಡಿಲ್ಲ.ನನಗೆ ನೀರಾವರಿಗೆ ದುಡ್ಡು ಬೇಕು ಅಂತ ಹೇಳಿ. ಇವತ್ತು ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಬ್ಬ ನಾಯಕರು ಹೇಳಿದ್ದಾರೆ ಸಂಸದರು ಕೆಲಸ ಮಾಡ್ತಾ ಇಲ್ಲ ಅಂತಾ.ಈ ರಾಜ್ಯದಲ್ಲಿ ಹಲವಾರು ಜಾತಿಗಳಿವೆ. ತಿಗಳಿಗರಿಗೆ ಏನು ಕೊಟ್ಟಿದ್ದಾರೆ. ಡೋಬಿ ಗೊಲ್ಲ ಸಮುದಾಯಕ್ಕೆ ಎಷ್ಟು ಜನರು ಬೋರ್ಡ್ ಮೆಂಬರ್ ಮಾಡಿದ್ದಾರೆ. ಹೂಡಿ ವಿಜಯ್ ಕುಮಾರ್ ಪಕ್ಷದ ಸದಸ್ಯರು ಆಗಬೇಕು.ಇದು ಒಕ್ಕಲಿಗ ಪಕ್ಷ ಅಂತೆ. ಸಾಮಾಜಿಕ ನ್ಯಾಯದ ಮಾತನಾಡಿದ್ದ ದೇವೇಗೌಡ ಬದುಕಿದ್ದಾನೆ. ರೇವಣ್ಣ,ವಿಶ್ವನಾಥ್ ಗೆದ್ದಿದ್ರು ಅವ್ರು ಕುರುಬರೇ. ಸಿದ್ದರಾಮಯ್ಯ ಸಹ ಗೆದ್ದಿದ್ರು ಅವರನ್ನ ಹಣಕಾಸು ಮಂತ್ರಿ ಮಾಡಿದ್ದೆ. 16 ಬಜೆಟ್ ಮಂಡಿಸಿದ್ದೀನಿ ಅಂತಾರೆ. ಅದರೆ ಏನು ಮಾಡಿದ್ದೀರಾ ಅಂದ್ರೆ ಗ್ಯಾರಂಟಿ ಕೊಟ್ಟಿದ್ದೇನೆ ಅಂತಾರೆ ಎಂದು ಹೇಳಿದ್ದಾರೆ.

ಬೆಂಗಳೂರು ಕೊಳಚೆ ನೀರನ್ನ ಕೋಲಾರ,ಚಿಕ್ಕಬಳ್ಳಾಪುರ ಕೊಟ್ಟಿದ್ದಾರೆ. ಆ ನೀರಿನಿಂದ ಬೆಳೆದ ತರಕಾರಿ ಯೋಗ್ಯ ಅಲ್ಲ ಅಂತ ವಿಜ್ಞಾನಿಗಳು ವರದಿ ಕೊಟ್ಟಿದ್ದಾರೆ. ನೀರಾವರಿ ಯೋಜನೆಗಳಿಗೆ ಏನು ಮಾಡಿದ್ದಾರಾ?.ನಾವು ಆ ಕೆಲಸ ಮಾಡಿಲ್ಲ.ದುಡಿಯುವ ಕೈಗೆ ಕೆಲಸ ಕೋಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನಾವು ಎನ್ ಡಿಎ ನಲ್ಲಿ ಇದ್ದೇವೆ. ಈ ರಾಷ್ಟ್ರದ ೧೫೦ ಕೋಟಿ ಜನಸಂಖ್ಯೆ ದೇಶ ನಡೆಸುವ ಶಕ್ತಿ ನರೇಂದ್ರ ಮೋದಿಗೆ ಇದೆ.ಆ ಸಂಬಂಧವನ್ನು ಉಳಿಸಿಕೊಂಡು ಹೋಗ್ತೇವೆ.ನಮ್ಮ ಪಕ್ಷ ಉಳಿಸುತ್ತೇವೆ.ನೀವು ಬೆಳೆದರೆ ಪಕ್ಷ ಬೆಳೆಯುತ್ತೆ. ಚಿಕ್ಕಬಳ್ಳಾಪುರಕ್ಕೆ ಬಂದು ಭಾಷಣ ಮಾಡ್ತೆ ೬% ವೋಟ್ ಜಾಸ್ತಿ ಆಯ್ತು. ಮೈಸೂರಿಗೆ ಮೋದಿ ಬರಲೇ ಬೇಕು ಅಂದ್ರು ಹೋದೆ ಎಂದಿದ್ದಾರೆ.