ಬೆಂಗಳೂರು; ಕನಕಪುರ , ನೆಲಮಂಗಲದಲ್ಲಿ ಎರಡನೇ ಏರ್‌ಪೋರ್ಟ್ ಬೇಡವೇ ಬೇಡ ಎಂದು 30 ಕ್ಕೂ ಹೆಚ್ಚು ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಕನಕಪುರ , ನೆಲಮಂಗಲದಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಬಯಲುಸೀಮೆ, ಉತ್ತರಕರ್ನಾಟಕ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿರಾದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಿ ಎಂದು 30 ಕ್ಕೂ ಹೆಚ್ಚು ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ನವದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಶಾಸಕರು ಮನವಿ ಸಲ್ಲಿಸಿದ್ದಾರೆ. ಪಕ್ಷಾತೀತವಾಗಿ ಮೂವತ್ತಕ್ಕೂ ಹೆಚ್ಚು ಶಾಸಕರು ವಿರೋಧಿಸಿದ್ದಾರೆ. ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣ ಮಾಡುವುದರಿಂದ ಬಯಲುಸೀಮೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಅನುಕೂಲ ಆಗಲಿದೆ. ಸಿರಾದಲ್ಲಿ ಚೆನ್ನೈ-ಮುಂಬೈ ಹೆದ್ದಾರಿ ಹಾದು ಹೋಗಿದೆ. ಹೆಚ್‌ಎಎಲ್‌ನಂತಹ ರಕ್ಷಣಾ ಸಂಸ್ಥೆ ಇದೆ. ಅತಿದೊಡ್ಡ ವಸಂತನರಸಾಪುರ ಕೈಗಾರಿಕಾ ವಸಹಾತು. ಶೀಘ್ರದಲ್ಲೇ ಜಪಾನ್ ಟೌನ್‌ಶಿಪ್ ಕೂಡ ನಿರ್ಮಾಣ ಆಗ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಆಗುತ್ತಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಹೇಮಾವತಿ ನೀರಾವರಿ ಸೌಲಭ್ಯ ಇದೆ. ತುಮಕೂರು-ರಾಯದುರ್ಗ ರೈಲ್ವೇ ಮಾರ್ಗ ಕೂಡ ಹಾದು ಹೋಗಲಿದೆ. ಸಿರಾದಲ್ಲಿ ಏರ್‌ಪೋರ್ಟ್ ನಿರ್ಮಾಣವಾದ್ರೆ ಬೆಂಗಳೂರಿನಲ್ಲಿ ಅರ್ಧದಷ್ಟು ಟ್ರಾಫಿಕ್ ದಟ್ಟಣೆ ಕಡಿಮೆ ಆಗಲಿದೆ. ಹೀಗಾಗಿ ಶಿರಾದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಾಣ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಕನಕಪುರ, ನೆಲಮಂಗಲದಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಬಯಲುಸೀಮೆ, ಉತ್ತರ ಕರ್ನಾಟಕ ಭಾಗದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಟಿ ಬಿ ಜಯಚಂದ್ರ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಂಡಿಷನ್ಸ್ ಇದೆ. ೧೫೦ ಕಿಮೀ ಅಂತರದಲ್ಲಿ ಹೊಸ ವಿಮಾನ ನಿಲ್ದಾಣ ಬರಬೇಕು. ಶಾಸ್ತ್ರೋಕ್ತವಾಗಿ ವಿಧಿವತ್ತಾಗಿ ಕಾನೂನುಬದ್ದವಾಗಿ ಮಾಡೊದಾದರೆ ಶಿರಾದಲ್ಲಿಯೇ ಆಗಬೇಕು. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಶಿರಾದಲ್ಲಿಯೇ ಪಾಸ್ ಆಗುತ್ತದೆ. ಶಿರಾದಲ್ಲಿಯೇ ಯಾಕೆ ಆಗಬೇಕು ಎಂಬ ಬಗ್ಗೆ ಕೇಂದ್ರಕ್ಕೂ ನಾವು ಮನವಿ ನೀಡಿದ್ದೇವೆ. ಕೇಂದ್ರದ ಮಂತ್ರಿಗಳಿಗೂ ಕೂಡ ಮನವಿ ನೀಡಿದ್ದೇನೆ. ನಾಗರೀಕ ವಿಮಾನ ಯಾನ ಸಚಿವರನ್ನೂ ಕೂಡ ಭೇಟಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಶಿರಾ ಬೆಂಗಳೂರಿನ ಹೆಬ್ಬಾಗಿಲು ಆಗುತ್ತದೆ. ಬೆಟ್ಟ ಗುಡ್ಡ ಇರಬಾರದು ನೆಲ ಸಮತಟ್ಟಾಗಿರಬೇಕು ಎಂದಿದ್ದಾರೆ.
ಅವರೇನೋ ಆರಂಭ ಶೂರತ್ವ ಮಾಡಿದರು. ನಿನ್ನೆಯಿಂದ ಧ್ವನಿ ಕಡಿಮೆ ಆದಂಗಿದೆ. ಅವರದ್ದೇ ಸರ್ಕಾರ ಬೆಲೆ ಏರಿಕೆ ಮಾಡಿದೆ. ನ್ಯಾಚನಲ್ ಪಾರ್ಟಿಯಾಗಿ ಯಾವ ರೀತಿ ವರ್ತನೆ ಮಾಡಬೇಕಿತ್ತು. ಪ್ರತಿಭಟನೆ ಮಾಡಲು ಬಿಜೆಪಿ ಅವರಿಗೆ ನೈತಿಕತೆ ಇಲ್ಲ. ಟ್ರಂಪ್ ಹೊಡೆದ ಅಷ್ಟು ಸುಲಭವಾಗಿಲ್ಲ. ಪ್ರತಿಭಟನೆ ಬಿಟ್ಟು ವಾಪಸ್ ಬನ್ನಿ. ಟೊಮೊಟೋ, ಬೆಳ್ಳುಳ್ಳಿ ದರ ಒಂದು ಎರಡು ರೂಪಾಯಿ ಆಗಿದೆ. ಕೃಷಿಗೆ ಆದ್ಯತೆ ಕೊಡಬೇಕು ಅದಕ್ಕೆ ಕಾರ್ಗೋ ಎಕ್ಸಪರ್ಟ್ ಮುಖ್ಯ. ತಾವು ಸಚಿವ ಸ್ಥಾನ ಆಕಾಂಕ್ಷಿಯ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಒಂದೇ ಪಾರ್ಟಿ, ಒಂದೇ ಕ್ಷೇತ್ರ. ೧೦ ಬಾರಿ ಚುನಾವಣೆ ಎದುರಿಸಿದ್ದೇನೆ. ನಾನು ಪಕ್ಷಕ್ಕೆ ವಿಧೇಯನಾಗಿ ಇದ್ದೇನೆ. ನನ್ನೇನು ಸುಮ್ಮನೆ ಕೂರಿಸಿಲ್ಲ ದೆಹಲಿ ಪ್ರತಿನಿಧಿ ಮಾಡಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿ ಏನು ಬೇಕಾದ್ರೂ ಆಗಬಹುದು. ಸರ್ಕಾರಕ್ಕೆ ಎರಡು ವರ್ಷ ಹಾಗಾಗಿ ಊಹಾಪೋಹಾ ಬರಬಹುದು ಎಂದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ ಅವರು ಅದೆಲ್ಲ ಹೈ ಲೆವೆಲ್ ನಿರ್ಧಾರ. ನಾನು ಖರ್ಗೆ ಅವರ ಮೋಡಸ್ ಆಫ್ ಆಪರೆಂಡಿ ನೋಡಿದ್ದೇನೆ. ಬಹಳ ಗುಟ್ಟನ್ನ ಕಾಪಾಡಿಕೊಳ್ತಾರೆ. ಒಂದು ಸಣ್ಣ ಸುಳಿವೂ ಬಿಟ್ಟುಕೊಡಲ್ಲ. ಏನಾಗುತ್ತದೆ ಎಂಬುದೆಲ್ಲ ಊಹಾಪೋಹ ಎಂದಿದ್ದಾರೆ.