ಬೆಂಗಳೂರು; ಆರ್ ಎಸ್ ಎಸ್ ಬ್ಯಾನ್ ಮಾಡ್ತೀವಿ ಅಂತ ಯಾರೂ ಹೇಳಿಲ್ಲ,ಯಾರೂ ಬ್ಯಾನ್ ಮಾಡೋಕೆ ಆಗಲ್ಲ ವಿಧಾನಸೌಧದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಡಿಸಿಎಂ ಡಿಕೆಶಿ ದೆಹಲಿಯಲ್ಲೇ ಉಳಿದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಸಿಎಂ ಪರವಾಗಿ ನಾವಿದ್ದೇವೆ. ನಾವು ನೋಡಿಕೊಳ್ಳುತ್ತೇವೆ. ನಾಳೆನೇ ಬರಲಿ ತೊಂದರೆ ಇಲ್ಲ ಎಂದ ಅವರು ಆರ್ ಎಸ್ ಎಸ್ ಬಗ್ಗೆ ಅನಂತ ಕುಮಾರ್ ಹೆಗ್ಡೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಆರ್ ಎಸ್ ಎಸ್ ಬ್ಯಾನ್ ಮಾಡ್ತೀವಿ ಅಂತ ಯಾರೂ ಹೇಳಿಲ್ಲ. ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಚಟುವಟಿಕೆಗಳ ನಿಷೇಧ ಬೇರೆ, ಇದು ಬೇರೆ. ಈವರೆಗೆ ಯಾರೂ ಆರ್ ಎಸ್ ಎಸ್ ಬ್ಯಾನ್ ಮಾಡಿಲ್ಲ ಎಂದಿದ್ದಾರೆ.
ವಿಧಾನಸೌಧದ ಬಾಗಿಲು ಅಳವಡಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅದು ಸ್ಪೀಕರ್ ಅಧೀನದಲ್ಲಿ ಬರುತ್ತೆ. ಏನು ಮಾಡ್ತಾರೆ ಅನ್ನೋದು ಅವರಿಗೆ ಗೊತ್ತಿರುತ್ತೆ ಎಂದರು. ಖರ್ಚು ವೆಚ್ಚಗಳು ಹೆಚ್ಚಾಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದು ಗೊತ್ತಿಲ್ಲ ನಮಗೆ, ಚೆಕ್ ಮಾಡೋಣಾ ಎಂದು ಹೇಳಿದ್ದಾರೆ.
ಒಳ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿ ನಾಳೆ ಸಚಿವ ಸಂಪುಟದಲ್ಲಿ ಚರ್ಚೆ ಆಗುತ್ತೆ. ಮೊನ್ನೆ ಚರ್ಚೆ ಆಗಿಲ್ಲಾ, ಅಪೂರ್ಣ ಅಗಿದೆ. ದಾರಿ ತೋರಿಸಲೇಬೇಕು. ಇಲ್ಲಾ ಅಂದ್ರೆ ಅವನವಶ್ಯಕವಾಗಿ ಗೊಂದಲ ಇದೆ ರಾಜ್ಯದಲ್ಲಿ. ಸರ್ಕಾರ ಎಲ್ಲರ ಪರವಾಗಿದೆ. ಕ್ಯಾಬಿನೆಟ್ ನಲ್ಲಿ ದಾರಿ ಹುಡುಕುವ ಪ್ರಯತ್ನ ಮಾಡ್ತಿವಿ ಎಂದು ತಿಳಿಸಿದ್ದಾರೆ.











