ಬೆಂಗಳೂರು:ನಾನು ಹೋದಷ್ಟು ಫಾರಿನ್ ಟ್ರಿಪ್ ಯಾರೂ ಹೋಗಲ್ಲ ಎಂದೂ ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಶಾಸಕರ ವಿದೇಶ ಪ್ರವಾಸ ಕುರಿತು ಮಾತನಾಡಿದ ಅವರು ನಾನು ಜೊತೆಯಲ್ಲಿ ಕರಕೊಂಡೂ ಹೋಗಲ್ಲ ಬಂದ ಮೇಲೂ ಹೇಳಲ್ಲ. That’s my style. ಖಾಸಗಿ ಬದುಕಲ್ಲಿ ಯಾರಾದರೂ ಶಾಸಕರು ಸ್ವಂತ ಖರ್ಚಲ್ಲಿ ಹೊರಗೆ ಹೋದರೆ ಅದು ಸರಿಯೇ ಇಲ್ಲ ಎನ್ನುವುದು ಅವಹೇಳನ ಮಾಡುವ ಪದ್ದತಿ ಯಾಕೆ ಬರ್ತಾ ಇದೆಯೇನೋ?. ರಾಜಕೀಯ ಅರ್ಥವನ್ನು ಯಾವ ಯಾವ ರೀತಿ ಅರ್ಥೈಸ್ತೀರೋ. ಪಾಲಿಟಿಕ್ಸ್ ಪ್ರತಿಯೊಂದರಲ್ಲೂ ಇದ್ದೇ ಇರುತ್ತದೆ.ಸದುದ್ದೇಶದಿಂದ ಮಾಡುವ ವಿದೇಶ ಪ್ರವಾಸಕ್ಕೆ ಹೋಗಿ ಬರಲಿ. ಅದನ್ನು ತಪ್ಪು ಎನ್ನುವುದು ಸರಿಯಲ್ಲ. ವಿದೇಶದಲ್ಲಿ ನಮಗೆ ಒಳ್ಳೆಯದಾಗುವ ಕೆಲವು ಸಂಗತಿಗಳು ಇರುತ್ತವೆ. ಅದನ್ನು ತಿಳಿದುಕೊಂಡು ಬಂದು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದೇ ಅಲ್ವಾ?. ಯಾವ ಯಾವ ಪ್ರಪಂಚದ ದೇಶಗಳಲ್ಲಿ ರೈತರಿಗೆ ಅನುಕೂಲ ಆಗುವ ಪದ್ದತಿ ಇರುತ್ತದೆಯೋ ಅದು ಕಲಿತು ಬರಲಿ.ಯಾಕೆ ಪ್ರವಾಸನ್ನು ತಡೆಯುತ್ತಾರೋ ಅದು ಸರಿಯಲ್ಲ. ಅದಕ್ಕೆ ಕಠಿಣ ಪದ ಬಳಸಿದರೆ ಅದು ತಪ್ಪಾಗುತ್ತದೆ ಎಂದಿದ್ದಾರೆ.
ರಾಜಕಾರಣದಲ್ಲಿ ಎಲ್ಲರೂ ಒಂದೇ ತರಹ ಇರುತ್ತಾರಾ?. ಸಿದ್ದರಾಮಯ್ಯ ಆರು ತಿಂಗಳು ಅವರ ಹತ್ರ ಹೋಗಿಲ್ಲ ಅಂದ್ರೆ ಯಾಕೆ ಬಂದಿಲ್ಲ ಅಂತ ಕೇಳಲ್ಲ. ದಿನಾ ಸಿದ್ದರಾಮಯ್ಯ ಹತ್ರ ಹೋದ್ರೆ ಯಾಕಯ್ಯ ಬಂದೆ ಅಂತ ಕೇಳಲ್ಲ. ನಾವೆಲ್ಲ ಸಿದ್ದರಾಮಯ್ಯ ಬಣ ಅಲ್ವಾ? ನಾವೆಲ್ಲ ಯಾಕೆ ಫಾರಿನ್ ಹೋಗ್ತಾ ಇಲ್ಲಾ?. ಅಲ್ಲೆಲ್ಲ ಭೈಠಕ್ ಸೇರ್ತಾರೆ ಕೆಲವರು ಭೈಠಕ್ ಅಂದ್ರೆ ದೇಶದ ಬಗ್ಗೆ ಚಿಂತನೆ ಮಾಡುವುದು ಎಂದಿದ್ದಾರೆ.
ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗತ್ತೆ ಅಂತ ಅಂದುಕೊಂಡರೆ ಸುಳ್ಳು. ಮಹತ್ವದ ಬದಲಾವಣೆ ಆಗತ್ತೆ ಅಂತ ಅಂದುಕೊಂಡರೆ ಅದು ಸುಳ್ಳು. ಬಜೆಟ್ ಮಂಡಿಸ್ತಾ ಇಲ್ವಾ ಸಿದ್ದರಾಮಯ್ಯ?. ಯಥಾಸ್ಥಿತಿ ಅಂತಲೇ ಅರ್ಥ.ಎಂದ ಅವರು ಕೆ.ಎನ್.ರಾಜಣ್ಣ ಪುತ್ರಿ ರಶ್ಮಿ ರಾಜಣ್ಣ ರಾಜಕೀಯಕ್ಕೆ ಎಂಟ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ನಿಲ್ಲಿಸ್ತೇನೆ ಎಂದಿದ್ದಾರೆ. ನಿಲ್ತಿ ಏನಮ್ಮ ಎಂದು ಮತ್ತೆ ನಗುತ್ತ ಮಗಳನ್ನು ರಾಜಣ್ಣ ಕೇಳಿದ್ದಾರೆ.











