ಮನೆ Latest News ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವುದಿಲ್ಲ: ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ

ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವುದಿಲ್ಲ: ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ

0

ಬೆಂಗಳೂರು; ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವುದಿಲ್ಲ  ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ ನೀಡಿದ್ದಾರೆ. ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವುದಿಲ್ಲ. ಶೇ.೬೬ ಬಿಪಿಎಲ್ ಕಾರ್ಡ್ ಇದೆ. ಮಾನದಂಡಗಳ ಅನ್ವಯ ಪರಿಶೀಳಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿಷ್ಕರಿಸಲಾಗಿದೆ. ಅನರ್ಹ ಇರಬಹುದು ಎಂಬ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್ ಕಾರ್ಡ್ ರದ್ದಾದರೆ ಸರ್ಕಾರ ಎಲ್ಲಾ ಸವಲತ್ತು ಬಂದಾಗುತ್ತೆ. ಕೇವಲ ಅನ್ನಮಾತ್ರವಲ್ಲ ,ಮೆಡಿಕಲ್ ಸೌಲಭ್ಯವೂ ಸಿಗಲ್ಲ. ಬಡವರನ್ನ ನಿರ್ಗತಿಕರನ್ನಾಗಿ ಮಾಡಲು ಹೊರಟಿದ್ದಾರೆ ಎಂದರು.

ಬಿಪಿಎಲ್ ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ ಗಳನ್ನು ಎಪಿಎಲ್ ಗೆ ಸೇರಿಸಲಾಗಿದೆ.ಬಿಪಿಎಲ್ ಗೆ ಅರ್ಹರಿದ್ದೂ ಕೂಡ ಎಪಿಎಲ್ ಗೆ ಸೇರಿಸಿದ್ದರೆ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ. ೯೮,೪೭೩ ಇನ್ಕಂ ಟ್ಯಾಕ್ಸ್, ೪೦೩೬ ಸರ್ಕಾರಿ ನೌಕರರು .ಒಟ್ಟೂ ೧,೦೨,೫೦೯ ಕಾರ್ಡ್ ಅನರ್ಹ ಮಾಡಲಾಗಿದೆ. ಇಷ್ಟು ಕಾರ್ಡ್ ಗಳಿ ಮಾತ್ರ ಪರಿಷ್ಕರಣೆ ಮಾಡಲಾಗಿದೆ.  ಇದರಲ್ಲಿ ಸಿಎಂ ಸೂಚನೆ ಬಳಿಕ ೧,೦೨,೫೦೯ ಕಾರ್ಡ್ ಗಳು ಮಾತ್ರ ರದ್ದಾಗಿದೆ. ಉಳಿದ ಎಲ್ಲ ಕಾರ್ಡ್ ಗಳು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ ಮಾಡಲಾಗಿದೆ ಎಂದರು.

ಬಿಪಿಎಲ್ ಎಪಿಎಲ್ ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ. ಯಾರಿಗೆ ಬಿಪಿಎಲ್ ಕಾರ್ಡ್ ರದ್ದತಿ ಆಗಿದೆ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿ ಲಾಗಿನ್ ಆಗಿ ಕಾರ್ಡ್ ಮರು ಹಂಚಿಕೆ ಮಾಡುತ್ತೇವೆ. ಕೆಲವು ಲೋಪ ದೋಷಗಳಾಗಿದ್ದು ಗಮನಕ್ಕೆ ಬಂದಿದೆ ಎಂದು ತಾನೇ ಗೊಂದಲದ ಹೊಣೆ ಹೊತ್ತಿದ್ದಾರೆ ಮುನಿಯಪ್ಪ. ಅಧಿಕಾರಿಗಳ ತಪ್ಪಿಲ್ಲ, ಎಲ್ಲ ಗೊಂದಲದ ಹೊಣೆ ನಾನೇ ಹೊರುತ್ತೇನೆ ಎಂದು ಮುನಿಯಪ್ಪ ಹೇಳಿದ್ದಾರೆ.

ಬಿಪಿಎಲ್‌ ಮಾನದಂಡದ ಪ್ರಕಾರ ಕ್ರಮ ಆಗಿದೆ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಂಗಳೂರು; ಬಿಪಿಎಲ್ ಕಾರ್ಡನ್ನ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು, ಬಿಪಿಎಲ್‌ ಮಾನದಂಡದ ಪ್ರಕಾರ ಕ್ರಮ ಆಗಿದೆ ಎಂದಿದ್ದಾರೆ.

ಬಿಪಿಎಲ್ ಮಾನದಂಡ ಕೇಂದ್ರ ಸರ್ಕಾರದ ‌ಮಾನದಂಡವಾಗಿದೆ‌‌. ಅರ್ಹರಿಗೆ ನ್ಯಾಯ ಸಿಗಬೇಕಲ್ವಾ ?. ಅರ್ಹರಿಗೆ ಅವಕಾಶ ಕೊಡುವ ಕೆಲಸ ಮಾಡಲಾಗಿದೆ. ಬಡವರ ದುಡ್ಡು ಬಡವರಿಗೆ ಹೋಗಲಿದೆ. ಕೇಂದ್ರ ಸರ್ಕಾರ ಮಾನದಂಡ‌ ಬದಲಾವಣೆ ಮಾಡಿದರೆ ಮಾಡಲಿ.ಅದನ್ನು ಅನುಸರಿಸುತ್ತೇವೆ ಎಂದಿದ್ದಾರೆ.

ಬಿಜೆಪಿಯವರು ಯಾವತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ?; ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು; ಬಿಜೆಪಿಯವರು ಯಾವತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ? ಎಂದು  ಸಿಎಂ ಸಿದ್ದರಾಮಯ್ಯ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ. ತೆರಿಗೆ ಕಟ್ಟದವರ ಬಿಪಿಎಲ್ ಕಾರ್ಡ್ ಸಹ ರದ್ದು ಆರೋಪ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಬಡವರಿಗೆ ಕೊಡಬೇಕು, ಕೊಡ್ತಿದ್ದೀವಿ, ಕೊಡುತ್ತೇವೆ. ಬಿಜೆಪಿಯವರು ಯಾವತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ? ಎಂದು ಕೇಳಿದ್ದಾರೆ.

ಅರ್ಹರಿಗೆ ಕೊಡುತ್ತೇವೆ, ಕೊಡ್ತಾ ಇದ್ದೀವಿ . ಅನರ್ಹರ ಕಾರ್ಡ್ ಮಾತ್ರ ರದ್ದು ಮಾಡಲಾಗಿದೆ. ನೀವೇ ಗೊಂದಲ ಮಾಡುತ್ತಿದ್ದೀರಿ ಅಂತ ಮಾಧ್ಯಮಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಅನರ್ಹ ಕಾರ್ಡ್ ಗಳು ಮಾತ್ರ ರದ್ದಾಗುತ್ತೆ. ಅರ್ಹರಿಗೆ ತಪ್ಪಿಸೊಲ್ಲಾ, ಬಡವರಿಗೆ ಕೊಡಬೇಕು. ನಾವು ಬಡವರಿಗೆ ಸಹಾಯ ಮಾಡಬೇಕು. ಅನ್ನಭಾಗ್ಯವನ್ನ ಬಿಜೆಪಿಯವರು ಕೊಟ್ಟಿದ್ದಾರಾ? ಜೆಡಿಎಸ್ ಮಾಡಿದ್ರಾ? ನಾನು ಸಿಎಂ ಅಗಿದ್ದಾಗ ಮಾಡಿದ್ದು. ಅದು. 2017 ರಲ್ಲಿ 1 ರೂಪಾಯಿ ಅಕ್ಕಿ ಕೊಡ್ತಿದ್ವು. ಇದನ್ನ ಗುಜರಾತ್ ಮಧ್ಯಪ್ರದೇಶ್ ಬಿಹಾರ್ ಹರಿಯಾಣದಲ್ಲಿ ಮಾಡಿದ್ರಾ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳನ್ನು ಪ್ರಶ್ನೆ ಮಾಡಿದ್ದಾರೆ.

ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್ ಗಳಿಗೆ ಯಾವುದೇ ತೊಂದರೆ ಇಲ್ಲ; ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬಾಗಲಕೋಟೆ; ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್ ಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆಯೇ? ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್ ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ. ಆದಾಯ ತೆರಿಗೆ ಪಾವತಿಸುವವರ ಬಳಿ, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್ ಇರಬೇಕ? ಅರ್ಹರ ಯಾವ ಕಾರ್ಡ್ ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಾಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು.

ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಆರೋಪ ಸಾಬೀತಾಗಿಲ್ಲ. ಕೆಲವೊಮ್ಮೆ ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳು ಬಿಡುಗಡೆ ಆಗುತ್ತಾರೆ. ಹಾಗಂತ ಕೊಲೆಯೇ ಆಗಿಲ್ಲ ಅಂದರೆ ಅದರಲ್ಲಿ ಅರ್ಥ ಇಲ್ಲ. ಕೊಲೆ ನಡೆದಿರುತ್ತದೆ ಆದರೆ ಸಾಕ್ಷಿಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೆ. ಇದೂ ಹಾಗೆಯೇ  ಎಂದಿದ್ದಾರೆ.