ಬೆಂಗಳೂರು; ಸಮೀಕ್ಷೆ ಬಗ್ಗೆ ಸ್ಪಷ್ಟವಾದ ತೀರ್ಮಾನಗಳು ಇನ್ನೂ ಆಗಿಲ್ಲ,ಪ್ರತಿ ಮನೆಗೋಗಿ ಸಮೀಕ್ಷೆ ಮಾಡಿ ವರದಿಯನ್ನು ಕೊಡಲಿ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ
ವಿಕಾಸಸೌಧದಲ್ಲಿ ಡಿಸಿಎಂ ಡಿಕೆಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗ ನಾಯಕರ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಭೆಯಲ್ಲಿ ಕಾಂತರಾಜು ವರದಿಯನ್ನ ಚರ್ಚೆ ಮಾಡೋಕೆ ಅದರ ನಮಗೆ ಅಂಕಿ ಅಂಶಗಳ ನೀಡಲು ನಮ್ಮ ಕಮಿನಿಟಿಗೆ ಯಾವ ರೀತಿ ಬಿಂಬಿಸುವ ನಮ್ಮ ಸಭೆ ಕರೆದಿಬಹುದು ಎಂದಿದ್ದಾರೆ.
ಜಾತಿ ಗಣತಿ ವರದಿಗೆ ಒಕ್ಕಲಿಗ ಸಮುದಾಯ ಒಪ್ಪಿಗೆ ಇದ್ಯಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ಲಿ ಒಕ್ಕಲಿಗರು, ಲಿಂಗಾಯತರು, ಮುಸ್ಲಿಮರ, ಎಸ್ಸಿ, ಎಸ್ಟಿಗಳು ಪ್ರಶ್ನೆ ಬರೋದಿಲ್ಲ ಇಲ್ಲಿ.ನಮ್ಮ ರಾಜ್ಯದಲ್ಲಿ ವಾಸ ಮಾಡುತ್ತಿರುವ ಅಂತ ಜನಸಂಖ್ಯೆ .ಯಾವ ಜಾತಿ ಎಷ್ಟು ಸಂಖ್ಯೆ ಇದೆ ತೀರ್ಮಾನ ಆಗಬೇಕು ಅಂತ ಉದ್ದೇಶ . ನಾವೇನ್ ಹೇಳ್ತೀವಿ ಅಂದ್ರೆ ಸಮೀಕ್ಷೆ ಬಗ್ಗೆ ಸ್ಪಷ್ಟವಾದ ತೀರ್ಮಾನಗಳು ಇನ್ನೂ ಆಗಿಲ್ಲ. ಪ್ರತಿ ಮನೆಗೋಗಿ ಸಮೀಕ್ಷೆ ಮಾಡಿ ವರದಿಯನ್ನು ಕೊಡಲಿ.ನಾವು ಈ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತಿವೆ ಎಂದಿದ್ದಾರೆ.
ಜಾತಿಗಣತಿ ವರದಿಯನ್ನು ವಿರೋಧಿಸಿ ಕುಮಾರಸ್ವಾಮಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿಯವರು ಮಂತ್ರಿಗಳಾಗಿ ಈ ರೀತಿ ಸ್ಟೇಟ್ಮೆಂಟ್ ಕೊಡಬಾರದು. ಅವರು ಹೇಳಬೇಕು ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು ಅಂತ. ಹೋರಾಟ ಮಾಡ್ತೀವಿ ಅಂದ್ರೆ ಅರ್ಥ ಏನು? .ಅದು ಅದನ್ನು ಅಕ್ಸೆಪ್ಟ್ ಮಾಡ್ತೀವಿ ಅಂತ ಸರ್ಕಾರ ಹೇಳಿದ್ದೀಯಾ?.ಸಂಬಂಧಪಟ್ಟ ಜಾತಿ ಮಂತ್ರಿಗಳಿಗೆ ವರದಿಯನ್ನು ಕೊಟ್ಟಿದ್ದಾರೆ .ಅದರ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ ತಪ್ಪಿದೆ ಅಂದ್ರೆ ಅದನ್ನ ಸರಿಪಡಿಸು ಅಂತ ಕೆಲಸವನ್ನು ಮಾಡಬೇಕು. ಜಯಪ್ರಕಾಶ್ ಹೆಗಡೆ ಅವರು ಅಭಿಪ್ರಾಯವನ್ನು ಹೇಳಿದ್ದಾರೆ. ಯಾವ ರೀತಿ ಮಾಡಿದ್ದಾರೆ ಅಂತ ಹೇಳಿ ನಾವು ತಿಳ್ಕೋತಿವಿ. ಮೀಟಿಂಗ್ ಅಲ್ಲಿ ವೈಜ್ಞಾನಿಕ ಅಂದ್ರೆ ಯಾವ ರೀತಿ.ಅವೈಜ್ಞಾನಿಕ ಅಂತ ಹೇಳ್ತಾ ಇದ್ದಾರೆ ಅದರ ಬಗ್ಗೆ ಚರ್ಚೆ ಮಾಡ್ತೀವಿ.ಅದಕ್ಕೆ ನಾವು ಮೀಟಿಂಗ್ ಕರೆದಿರುವುದು ಅಲ್ಲಿ ಚರ್ಚೆ ಮಾಡ್ತೀವಿ.ವೈಜ್ಞಾನಿಕ ಆಗಿದೆ ಅನ್ನೋದ್ರರ ಬಗ್ಗೆ ಮೀಟಿಂಗ್ ನಲ್ಲಿ ಚರ್ಚೆ ಮಾಡಿ ತಿಳ್ಕೋತಿವಿ ಎಂದಿದ್ದಾರೆ.
ಪೆನ್ನು ಪೇಪರ್ ಕೇಳಿದ್ರು ಈಗ ಸಿದ್ದರಾಮಯ್ಯನವರು ಕುತಂತ್ರಕ್ಕೆ ಡಿಕೆಶಿ ಬಲಿಯಾದ್ರು ಎಂಬ ಹೆಚ್ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಪಾಪ ಕುಮಾರಸ್ವಾಮಿಯವರಿಗೆ ಕಣ್ಣು ಬಿಟ್ರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾಣಿಸ್ತಾರೆ.ನಿದ್ದೆಯಲ್ಲೂ ಕೂಡ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾಣ್ತಾರೆ.ಅವರು ಮೊಸರಲ್ಲಿ ಕಲ್ಲು ಹುಡುಕೋ ಬುದ್ದಿ ಬಿಡಬೇಕು.ಅಭಿಪ್ರಾಯ ಇದ್ದರೆ ಹೇಳಬೇಕು.ಡಿಕೆ ಶಿವಕುಮಾರ್ ಅವರಿಗೆ ಒಕ್ಕಲಿಗರು ಹೆಚ್ಚು ಬೆಂಬಲ ಕೊಟ್ಟಿಲ್ಲ.ಜಾಸ್ತಿ ಬೆಂಬಲ ಕೊಟ್ಟಿರೋವಂತದ್ದು ಕುಮಾರಸ್ವಾಮಿ ಅವರಿಗೆ .ಅದರ ಬಗ್ಗೆ ಕುಮಾರಸ್ವಾಮಿ ಅವರು ಆಲೋಚನೆ ಮಾಡ್ಲಿ.ಈ ಜನಕ್ಕೆ ಏನ್ ನ್ಯಾಯ ಕೊಟ್ಟಿದ್ದೀರಿ ಅಂತ.ಇತರ ಸಿಲ್ಲಿ ಹೇಳಿಕೆಗಳನ್ನು ಕೊಟ್ಟುಕೊಂಡು ರಾಜಕಾರಣ ಬೆಳೆ ಬೇಯಿಸಿಕೊಳ್ಳುವುದನ್ನು ಕುಮಾರಸ್ವಾಮಿ ಬಿಡಬೇಕೆಂದು ವಾಗ್ದಾಳಿ ನಡೆಸಿದ್ದಾರೆ.
ವರದಿ ಕೇಳಿದ ಮೇಲೆ ಒಪ್ಪೋದೋ ಬಿಡೋದು ತೀರ್ಮಾನ ಮಾಡ್ತೀವಿ.ಅದಕ್ಕೆ ಮೀಟಿಂಗ್ ಕರೆದಿರುವುದು .ಅಲ್ಲಿ ಸಾಧಕ ಬಾಧಕ ತಿಳ್ಕೊಂಡು ಆಮೇಲೆ ತೀರ್ಮಾನ ಮಾಡ್ತೀವಿ.ಅದರಲ್ಲಿ ಎಷ್ಟು ಜನ ಇದೆ, ಎಷ್ಟು ಸಂಖ್ಯೆಯಲ್ಲಿದ್ದಾರೆ ಅನ್ನೋದು ತಿಳಿದುಕೊಳ್ಳಬೇಕಾಗಿರೋದು ಮುಖ್ಯ.ಯಾಕೆ ವಿರೋಧ ಮಾಡಬೇಕು.ಸಂಪೂರ್ಣವಾಗಿ ಕೆಳಹಂತಕ್ಕೆ ಹೋಗಿ ಸಮೀಕ್ಷೆ ಮಾಡಬೇಕು ಎಂದು ನಾವು ಸರ್ಕಾರವನ್ನು ಒತ್ತಾಯ ಮಾಡ್ತೀವಿ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.