ನವದೆಹಲಿ; ನವದೆಹಲಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಉಪಚುನಾವಣೆ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಸೋಲಿಗೆ ಸಾಕಷ್ಟು ಕಾರಣಗಳಿವೆ. ಚುನಾವಣೆ ಹಿಂದಿನ ದಿನ ಗೃಹಲಕ್ಷಿ ಹಣ ಹಾಕಿದ್ದಾರೆ. ಎರಡು ಮೂರು ತಿಂಗಳ ಹಣ ಒಟ್ಟಿಗೆ ಹಾಕಿದ್ದಾರೆ. ಈಗ ಸೋಲಿಗೆ ಕಾರಣ ಹುಡುಕುವುದಿಲ್ಲ ಎಂದಿದ್ದಾರೆ.
ರಾಜಕೀಯ ಜೀವನದಲ್ಲಿ ಅನಿರೀಕ್ಷಿತ ನಿರ್ಧಾರ ಮಾಡಿದೆ. ಎರಡು ಪಕ್ಷಗಳ ಕಾರ್ಯಕರ್ತರನ್ನು ಉಳಿಸಲು ಸ್ಪರ್ಧೆ ಅನಿರ್ವಾಯವಾಗಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ನಿರ್ಧಾರ ಮಾಡಿದ್ರು. ಮೈತ್ರಿಗೆ ಕಪ್ಪು ಚುಕ್ಕೆ ಬರದಂತೆ ಹೆಚ್ಡಿಕೆ ನಿರ್ಧಾರ ಮಾಡಿದ್ರು. ಬಿಜೆಪಿ ನಾಯಕರ ಅಭಿಪ್ರಾಯ ಪಡೆದು ಸ್ಪರ್ಧೆ ಮಾಡಲಾಯ್ತು. ಸ್ಪರ್ಧೆ ಮಾಡಬೇಕು ಎಂದು ತಾಕೀತು ಮಾಡಿದ್ರು. ಕೇವಲ 15 ದಿನಗಳು ಚುನಾವಣೆ ನಡೆಸಲು ನಮ್ಮ ಬಳಿ ಇತ್ತು ಎಂದು ನಿಖಿಲ್ ಹೇಳಿದ್ದಾರೆ.
ಆಸೆ ಆಕಾಂಕ್ಷೆಗಳನ್ನು ಹುಟ್ಟಿಸಿ ಗೆದ್ದಿದ್ದಾರೆ. ಅವರಿಗೆ ಸಮಯ ಸಿಕ್ಕಿತ್ತು, ನಾವು ಅಭ್ಯರ್ಥಿ ಆಯ್ಕೆ ವಿಳಂಬ ಆಯ್ತು. ನಮಗೆ ಜಯ ಸಿಕ್ಕದೆ ಹೋದ್ರು ಫಲ ಸಿಕ್ಕಿದೆ. ಗೃಹಲಕ್ಷಿ ಹಣವನ್ನು ಹಿಂದಿನ ಮಹಿಳೆಯರಿಗೆ ಹಾಕಿದ್ದಾರೆ. ರಾಜ್ಯದ ಖಜಾನೆ ದುಡ್ಡನ್ನು ಬಳಸಿದ್ದಾರೆ. ಇದನ್ನು ಪ್ರಶ್ನೆ ಮಾಡಲೇಬೇಕಿದೆ.. ಯಾರ ಮೇಲೂ ತಪ್ಪು ಹೊರಿಸುವ ಕೆಲಸ ಮಾಡುವುದಿಲ್ಲ. ಒಂದು ಸಮುದಾಯಕ್ಕೆ ದೇವೇಗೌಡರು ಅನೇಕ ಕೆಲಸ ಮಾಡಿದ್ರು. ನಾಗಮಂಗಲದಲ್ಲೂ ಕೋಮುಸಂಘರ್ಷ ಉಂಟಾಗಿತ್ತು.ಸಂಘರ್ಷದಲ್ಲಿ ಹಾನಿ ಉಂಟಾದ ಅಂಗಡಿ ಜನರಿಗೆ ಪರಿಹಾರ ನೀಡಿದ್ದಾರೆ. ಮುಸಲ್ಮಾನ ಸಮುದಾಯಕ್ಕೂ ಹೆಚ್ಡಿಕೆ ಹಣ ನೀಡಿದ್ದಾರೆ.ಹಲಾಲ್ ,ಹಿಜಾಬ್ ವಿಚಾರದಲ್ಲಿ ಮೊದಲು ಧ್ವನಿ ಎತ್ತಿದ್ದು ಕುಮಾರಸ್ವಾಮಿಯವ್ರು ಎಂದರು.
ಚುನಾವಣೆಯಲ್ಲಿ ನಮಗೆ ಸಂಪೂರ್ಣ ಹಿಡಿತ ಸಿಕ್ಕದೆ ಇದ್ರೂ ನಾಯಕರು ಕೆಲಸ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಚನ್ನಪಟ್ಟಣದ ಇತಿಹಾಸದಲ್ಲಿ 1200ಕೋಟಿ ಅನುದಾನ ಹೆಚ್ಡಿಕೆ ತಂದಿದ್ದಾರೆ. ನಾವು ಕೆಲಸ ಮಾಡಿದ್ದೇವೆ ಪ್ರಚಾರ ಪಡೆದಿಲ್ಲ. ಮುಂದಿನ ದಿನಗಳಲ್ಲಿ ನಮಗೊಂದು ಪಾಠ. ಜನರ ಮೆಮೊರಿ ಶಾರ್ಟ್, ನಮ್ಮ ಕೆಲಸ ವನ್ನು ಹೇಳಿಕೊಳ್ಳಬೇಕು.ಅದರಲ್ಲಿ ಹಿಂದುಳಿದಿದ್ದೇವೆ. ಕಳೆದ ಒಂದು ವಾರದಿಂದ ದೆಹಲಿಗೆ ಸುಮ್ಮನೆ ಬಂದಿಲ್ಲ. ತಂಬಾಕು ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರಕೃತಿಯ ವಿಕೋಪದಿಂದ ಕ್ವಾಲಿಟಿ ಬೆಳೆ ಬಂದಿಲ್ಲ. ಹೈಗ್ರೇಡ್ ಬೆಳೆಗೆ ಕಂಪೆನಿಗಳು ಚೆನ್ನಾಗಿ ಹಣ ನೀಡುತ್ತಿವೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದೇವೆ.ತಂಬಾಕು ಬೆಳೆಗಾರರ ನೆರವಿಗೆ ಬರುವಂತೆ ಮನವಿ ಮಾಡಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಸಿಲುಕಿ ತೊಗರಿ ಬೆಳೆ ಸರಿಯಾಗಿ ಬಂದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರದಿಂದ ರೈತರಿಗೆ ಹಣಕಾಸಿನ ನೆರವು, ಸಾಂತ್ವನ ನೀಡಿಲ್ಲ.ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು. ಇನ್ನು ಬಾಣಂತಿಯರು ,ಮಕ್ಕಳು ಸಾಯುತ್ತಿರುವ ಪ್ರಕರಣ ಹೆಚ್ಚಾಗಿದೆ. ಮೆಡಿಸಿನ್ ಕ್ವಾಲಿಟಿ ಚೆಕ್ ಆಗುತ್ತಿಲ್ಲ. ಗುಣಮಟ್ಟದ ಔಷಧಿಯನ್ನು ನಿಜವಾಗಿಯೂ ಕೊಡುತ್ತಿದ್ದೀರಾ? ಸರಕಾರ ಬೇಜಾವಬ್ದಾರಿಯಿಂದ ವರ್ತನೆ ಮಾಡುತ್ತಿದೆ. ಲೋಪವಾಗಿದ್ರೆ ರಾಜೀನಾಮೆ ನೀಡ್ತಿನಿ ಅಂತಾ ಸಚಿವರು ಹೇಳ್ತಾರೆ. ಸಿಎಂ ಐದು ಲಕ್ಷ ಪರಿಹಾರ ಘೋಷಣೆ ಮಾಡಿ ಜೀವಕ್ಕೆ ಬೆಲೆ ಕಟ್ಟುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆಯಾಗಲಿ. ಸರಕಾರ ಭ್ರಷ್ಟಾಚಾರ, ಹಗರದಲ್ಲಿ ಮುಳುಗಿದೆ ಎಂದಿದ್ದಾರೆ.