ಮನೆ Latest News ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಸುದ್ದಿಗೋಷ್ಟಿ

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಸುದ್ದಿಗೋಷ್ಟಿ

0

ಬೆಂಗಳೂರು; ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಸುದ್ದಿಗೋಷ್ಟಿ  ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಈ ವರ್ಷ ಕಳೆದ ಎರಡು ಮೂರು ತಿಂಗಳಿಂದ ಮುಂಗಾರು ಮಳೆ  ಆಗುತ್ತಿದೆ. ಶೇ ೩೬% ಹೆಚ್ಚಳ ಆಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮಲೆನಾಡಿನಲ್ಲಿ ಮಳೆ ಆಗಿ‌ ಬೆಳೆ ಹಾನಿ ಆಗಿದೆ. ೧ ಲಕ್ಷದಲ್ಲಿ ಹೆಕ್ಟೇರ್ ಬೆಳೆ ಹಾಕಿದ್ರು. ತೊಗರಿ ಸೇರಿದಂತೆ ಬೆಳೆ ನಾಶ ಆಗಿಲ್ಲ. ಉಸ್ತುವಾರಿ ಸಚಿವರು ಹಾನಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಇನ್ನು ಕೃಷಿ ಸಚಿವರು ಇದ್ದಾರೋ ಇಲ್ವೂ ಗೊತ್ತಿಲ್ಲ. ಕಳೆದ ತಿಂಗಳಲ್ಲಿ ಗೊಬ್ಬರ ಸಿಕ್ಕಿಲ್ಲ. ಬ್ಲಾಕ್ ನಲ್ಲಿ ರಸಗೊಬ್ಬರವನ್ನು ರೈತರು ಖರೀದಿ ಮಾಡಿದ್ದಾರೆ. ಮಳೆಯಿಂದ ರಸ್ತೆಗಳು ಹಾಳಾಗಿವೆ. ಮುಖ್ಯಮಂತ್ರಿಗಳು ಇದರ  ಬಗ್ಗೆ ಗಮನ ಇಲ್ಲ. ಸಿಎಂ ಡಿಸಿಎಂ ಪ್ರತಿ‌ ಟ್ರಾವೆಲ್ ಗೆ ಚಾಪರ್ ಹೆಲಿಕಾಪ್ಟರ್ ಖರೀದಿಗೆ ಮುಂದಾಗಿದ್ದಾರೆ. ಇದರ ಬಗ್ಗೆ ಸಿಎಂಗೆ ಒಲವು ಇದೆ. ಅದರೆ ರೈತರ ಸಂಕಷ್ಟದಲ್ಲಿ ಇದ್ದಾರೆ.ಲಕ್ಷಾಂತರ ರೂಪಾಯಿ ಸಾಲ ಮಾಡಿ ನಷ್ಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.

ರೈತರು ಕೆಲವೊಂದು ಡಿಮ್ಯಾಂಡ್ ಇಟ್ಟಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ರೈತರಿಗೆ ಬೇಡಿಕೆ ಇಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ಚರ್ಚೆ ಮಾಡ್ತಿದ್ದಾರೆ. ಕಾನೂನಿನಲ್ಲಿ ಅವಕಾಶ ಇಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವುದಿಲ್ಲ. ಮಿಲಾದ್ ಉನ್ ನಬಿ ಪ್ರತಿ ವರ್ಷ ಕಾರ್ಯಕ್ರಮ ಮಾಡುತ್ತೇವೆ . ಬೆಂಗಳೂರಿನಲ್ಲಿ ಮೂರು ಪಂಗಡಗಳು ಮಾಡುತ್ತಿದ್ದವು.  ಈ ಬಾರಿ ಎಲ್ಲರೂ ಒಟ್ಟಿಗೆ ಸೇರಿ ಮಾಡುತ್ತಿದ್ದೇವೆ. ಪೈಗಂಬರ್ ಅವರ 1500 ನೇ ವರ್ಷದ ಕಾರ್ಯಕ್ರಮ‌ ಆಗಿರುವುದರಿಂದ ಒಟ್ಟಿಗೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರೈತರಿಗೆ ಎಷ್ಟು ಗೊಬ್ಬರ ಬರಬೇಕು ಅಂತ ಕೃಷಿ ಸಚಿವರಿಗೆ ಗೊತ್ತಿಲ್ಲ. ಗೊಬ್ಬರ ಕೊರತೆ ಸಮಸ್ಯೆಯನ್ನು ಜವಾಬ್ದಾರಿ ತೆಗೆದುಕೊಳ್ಳಬೇಕು.ಕುಮಾರಸ್ವಾಮಿ ಅವ್ರುಕೇಂದ್ರ ಸಚಿವರಾಗಿ ಗಡ್ಕರಿ ಅವರನ್ನ ಭೇಟಿ ಮಾಡಿ. ಹಲವಾರು ಬಾರಿಗೆ ಸಭೆಗಳನ್ನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಂಸದರಾಗಿ ಜವಾಬ್ದಾರಿ ಇದೆ. ಕುಮಾರಣ್ಣ ಅವ್ರ ಆರೋಗ್ಯ ಬಗ್ಗೆ ಅವ್ರ ಅಭಿಮಾನಿಗಳು ಆಂತಕ ಇದೆ. ಡಯಾಲಿಸಿಸ್ ಮಾಡಿದ್ದೇವೆ,ಸ್ವಲ್ಪ ಇನ್ಫೆಕಷನ್ ಆಗಿದೆ. ಅದಕ್ಕೆ ಚಿಕಿತ್ಸೆ ನೀಡಲಾಗುತ್ತೆ.ಯಾರು ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

ರೈತರಿಗೆ ಸಮಸ್ಯೆ ಆಗಿರುವ ಬಗ್ಗೆ ನಾವು ಅಧ್ಯಯನ ಮಾಡಿದ ವರದಿಯನ್ನು ಸರ್ಕಾರಕ್ಕೆ ಕೋಡ್ತೀವಿ. ವಿರೋಧ ಪಕ್ಷವಾಗಿ ನಮಗೆ ಜವಾಬ್ದಾರಿ ಇದೆ. ನಾವು ರೈತರನ್ನ ಭೇಟಿ ಮಾಡಿ ಅಧ್ಯಯನ ಮಾಡ್ತೀವಿ. ಇಂತಹ ಪರಿಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕದ ರೈತ ಜೊತೆ ಚರ್ಚೆ ಮಾಡಿ. ಆ‌ ಭಾಗದ ರೈತರ ಸಾಲ ಮನ್ನಾ ಮಾಡಬೇಕು ಅಂತ ಒತ್ತಾಯ ಮಾಡ್ತೇನೆ. ಬೆಳೆ ನಷ್ಟದಿಂದ ರೈತರು ಸಾಲ ಮಾಡಿದ್ದಾರೆ. ಅಂತಹ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳಿದ್ದಾರೆ.

ಜೆಡಿಎಸ್ ಎರಡು ಸ್ಥಾನ ಬರುತ್ತೆ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಿಎಂ ಅವರ ಹೇಳಿಕೆ ನಾನು ಗಮನಿಸಿದ್ದೇನೆ. ಅದರ ಜೊತೆ ಡಿಸಿಎಂ ವಿಲೀನ ಮಾಡಲಿ ಎಂದು ಹೇಳಿದ್ದಾರೆ. ಸಿಎಂ ಅವ್ರು ರಾಜಕೀಯವಾಗಿ ಗುರುತಿಸಿಕೊಂಡಿದ್ದು  ಮರೆತುಬಿಟ್ಟಿದ್ದಾರೆ. ಬಹಳ ಇತಿಹಾಸ ಜನಕ್ಕೆ ಗೊತ್ತಿದೆ. ಅವ್ರ ಕೈಯಲ್ಲಿ ಬಜೆಟ್ ಮಂಡಿಸಿದ್ದು ದೇವೇಗೌಡ್ರು. ಬೇರೆಯವರು ಇಲ್ವ ಅಂತ ಕೇಳಿದ್ರು ಆ ಸಂದರ್ಭದಲ್ಲಿ  ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು ದೇವೇಗೌಡ್ರು. ಉಪಮುಖ್ಯಮಂತ್ರಿ ಮಾಡಿದ್ದಾರೆ. ನಮ್ಮ ಪಕ್ಷದ ಭವಿಷ್ಯ ಬಗ್ಗೆ ಚಿಂತೆ ಬೇಡ. ಜನ‌ ಅವರಿಗೆ ಅವಕಾಶ ಕೊಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

ಭೋವಿ ನಿಗಮದ ಅಕ್ರಮ ವಿಚಾರದ ಬಗ್ಗೆ ಮಾತನಾಡಿ ಮಾಧ್ಯಮ ನೀವು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೀರಿ. ಭೋವಿ ಅಭಿವೃದ್ಧಿ ನಿಗಮ ಮಾತ್ರವಲ್ಲ. ವಾಲ್ಮೀಕಿ ನಿಗಮದಲ್ಲಿ ಸಾವಿರಾರು ಕೋಟಿ ಅಕ್ರಮ ಆಗಿದೆ. ಭೋವಿ ನಿಗದಮ ಭೂಮಿ ಮಂಜೂರಾತಿಗೆ 5 ಲಕ್ಷ ಲಂಚ ಕೇಳಿದ್ದಾರೆ. ಅಧ್ಯಕ್ಷ ಒಬ್ಬ ಕಾಂಗ್ರೆಸ್ ಮನುಷ್ಯ..ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಯಾವ ರೀತಿ ನ್ಯಾಯ ಕೊಡುತ್ತಿದ್ದೀರಿ. ವಾಲ್ಮೀಕಿ ನಿಗಮದ ಕೇಸ್ ನಲ್ಲಿ ಸಚಿವರು ಜೈಲು ಪಾಲಾದ್ರು. ಇಡಿ ಕೂಡ ತನಿಖೆ ನಡೆಸಿದ್ದಾರೆ, ಸಿಎಂ ಅವರು ಸದನದಲ್ಲಿ ಅಕ್ರಮದ ಬಗ್ಗೆ ಒಪ್ಪಿಕೊಂಡಿದ್ದಾರೆ. ಇವರು ಹಿಂದುಳಿದ ವರ್ಗಗಳಿಗೆ ಮಾಡ್ತಿರೋ ನ್ಯಾಯ ಇದೇನಾ?. ಇವರ ಹಿಂದೆ ಇರೋದು ಯಾರು? ಸ್ಟಿಂಗ್ ಆಪರೇಷನ್ ಆಗಿದೆ. ಆದರೂ ಅವರ ಮೇಲೆ ಕ್ರಮ ಆಗಿಲ್ಲ.ಅದೇ ಸಮುದಾಯದ ನಾಯಕರು ಏನೋ ಮಾತಾಡಿದ್ರೂ ಅಂತ ವಜಾ ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.