ಬೆಂಗಳೂರು; ಈಗಾಗಲೇ ಬೆಲೆ ಏರಿಕೆಯಿಂದ ಬೇಸತ್ತು ಹೋಗಿರುವ ರಾಜ್ಯದ ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪ್ರತಿ ಲೀಟರ್ ಹಾಲಿನ ದರವನ್ನು 2.10 ರೂ ಏರಿಕೆ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ.ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸಾವಿರ ಎಂಎಲ್ ಹಾಲಿನ ೨.೧೦ ಪೈಸೆ ದರ ಹೆಚ್ಚಳವಾಗಿದೆ. ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿದಿನ ರಾಜ್ಯದಲ್ಲಿ ೯೮ ಲಕ್ಷ ೧೭ಸಾವಿರ ಲೀ ಸಂಗ್ರಹವಾಗ್ತಿದೆ. ಸದ್ಯದಲ್ಲೇ ಒಂದು ಕೋಟಿ ಲೀಟರ್ ಸಂಗ್ರಹ ಗುರಿ ಮುಟ್ಟಲಿದ್ದೇವೆ ಎಂದ್ರು.
ಇನ್ನು ರಾಜ್ಯ ಈ ರೀತಿ ದಾಖಲೆ ನಿರ್ಮಿಸೋದಕ್ಕೆ ರಾಜ್ಯದ ೨೭ ಲಕ್ಷ ಹಾಲು ಉತ್ಪಾದಕರು ಕಾರಣ. ಸದ್ಯ ಶೇಖರಣೆಯಲ್ಲಿ ೩೦ ಲಕ್ಷ ಲೀಟರ್ ಹಾಲನ್ನು ಪೌಡರ್ ಗೆ ಕಳುಹಿಸುತ್ತಿದ್ದೇವೆ.ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ ಎಂದಿದ್ದಾರೆ. ೨೭ ಲಕ್ಷ ಹಾಲು ಉತ್ಪಾದಕರು ಹಾಗೂ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ಇದೆಲ್ಲಾ ಮಾಡುತ್ತಿದ್ದೇವೆ. ಇಬ್ಬರು ಕೂಡ ನಮಗೆ ಎರಡು ಕಣ್ಣು ಇದ್ದ ಹಾಗೇ. ಸದ್ಯ ಲೀಟರ್ ಗೆ ದ್ಯ ಗ್ರಾಹಕರಿಗೆ ೪೨ ರೂ ಇದೆ. ಆದರೆ ನಾಳೆಯಿಂದ 44 ರೂಪಾಯಿ ಆಗಲಿದೆ . ಆದರೆ ಪ್ರತೀ ಹಾಲಿನ ಪ್ಯಾಕೆಟ್ ನಲ್ಲೂ 50ml ಜಾಸ್ತಿ ಹಾಲು ಇರಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲೂ 550 ml ಇರಲಿದೆ ಎಂದು ಅವರು ಇದೆ ವೇಳೆ ತಿಳಿಸಿದ್ದಾರೆ.
ಪರಿಷ್ಕೃತ ಹಾಲಿನ ದರ ಹೀಗಿದೆ..
ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ