ಬೆಂಗಳೂರು; ಸೌದಿ ಅರೇಬಿಯಾ, ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ನಂದಿನಿ ತುಪ್ಪ ರಫ್ತು ಆಗುತ್ತಿದ್ದು, ರಫ್ತು ಮಾಡುವ ವಾಹನಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸದ ಬಳಿ ಚಾಲನೆ ನೀಡಿದರು. ಈ ವೇಳೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೆಎಂಎಫ್ ಎಂಡಿ ಶಿವಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸೌದಿಅರೇಬಿಯಾ, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳಿಗೆ ನಂದಿನಿ ತುಪ್ಪ ರಫ್ತು ಮಾಡ್ತಿದ್ದೇವೆ. ತುಪ್ಪದ ಬೇಡಿಕೆ ಜಾಸ್ತಿ ಆಗ್ತಿದೆ, ವಿದೇಶಗಳಲ್ಲಿ ಕೆಎಂಎಫ್ ನ ತುಪ್ಪಕ್ಕೆ ಬೇಡಿಕೆ ಇದೆ. ಕುಮಾರ ಅಂತ ನಮ್ಮ ಜಿಲ್ಲೆಯವರು ಅಮೇರಿಕಾದಲ್ಲಿದ್ದಾರೆ. ಇದರ ಏಜೆನ್ಸಿ ತೆಗೆದುಕೊಂಡು ಮಾಡ್ತಿದ್ದಾರೆ.ನಂದಿನಿ, ಕೆಎಂಎಫ್ ಹಾಗೂ ಏಜೆನ್ಸಿಯವರಿಗೂ ಒಳ್ಳೆಯದಾಗಲಿ ಎಂದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ ನಂದಿನಿ ಹಾಲು, ತುಪ್ಪ, ಐಸ್ ಕ್ರೀಂ, ಹಿಸಿ ತಿನಿಸಿಗಡ ಬೇಡಿಕೆ ಬಂದಿದೆ. ದುಬೈನಲ್ಲೂ ನಂದಿನಿ ಐಸ್ ಕ್ರೀಂಗೆ ಬೇಡಿಕೆ ಇದೆ. ಕರ್ನಾಟಕದವರೇ ಅಮೇರಿಕಾ, ಆಸ್ಟ್ರೇಲಿಯಾದಲ್ಲಿ ಏಜೆನ್ಸಿ ಮಾಡಿದ್ದಾರೆ. ಹೊರ ರಾಷ್ಟಗಳ ನಂದಿನಿ ತುಪ್ಪಕ್ಕೆ ಬೇಡಿಕೆ ಇದೆ. ನಕಲಿ ತುಪ್ಪಗಳಿಗೆ ಕಡಿವಾಣ ಹಾಕಲಾಗುತ್ತೆ. ದೂರು ಬಂದರೆ ಕ್ರಮ ತೆಗೆದುಕೊಳ್ತೀವಿ ಎಂದರು. ಕಾಂಗ್ರೆಸ್ ನಲ್ಲಿ ಗೊಂದಲ, ಬೆಳವಣಿಗೆ ವಿಚಾರದ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ. ಮುಖ್ಯಮಂತ್ರಿ ಹೇಳಿದ್ದಾರಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಅಂತಾ. ನಾವೆಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಬೇಕಲ್ವಾ .ಬೆಂಬಲ ಕೊಡಿ ಅಂತ ನಮ್ಮನ್ನ ಯಾರೂ ಕೇಳಿಲ್ಲ. ಒಕ್ಕಲಿಗ ಶಾಸಕರೂ, ನಾಯಕರು ಯಾರೂ ಬೆಂಬಲ ಕೇಳಿಲ್ಲ.ಒಂದು ವೇಳೆ ಬೆಂಬಲ ಕೇಳಿದ್ರೂ ನಾನು ಹೇಳೋಕೆ ಆಗುತ್ತಾ?. ತೆರೆ ಎಳೆಯಿರಿ ಅಂತ ಎಐಸಿಸಿ ಅಧ್ಯಕ್ಷರಿಗೆ ಹೇಳಿದ್ದೇವೆ. ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.ಸಚಿವ ಸ್ಥಾನ ತ್ಯಾಗಕ್ಕೆ ಸಿದ್ದನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಚಿವ ಸ್ಥಾನ ಇದ್ರೆ ಮಾಡ್ತೀವಿ, ಬೇಡ ಅಂದ್ರೆ ಎಂಎಲ್ಎ ಕೆಲಸ ಮಾಡ್ತೀವಿ. ಸದ್ಯಕ್ಕೆ ಅವೆಲ್ಲ ಏನೂ ಇಲ್ಲನಡೀ ಗುರುವೇ ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ ಹೊರ ದೇಶಗಳಿಗೆ ತುಪ್ಪ ರಫ್ತು ಮಾಡುವ ಕಾರ್ಯಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ನಂದಿನಿ ತನ್ನ ಮಾರುಕಟ್ಟೆಯನ್ನು ವಿಶ್ಯದಾದ್ಯಂತ ವಿಸ್ತರಿಸಿಕೊಂಡಿದೆ. ಈಸ್ಟ್ ಅಂಡ್ ಎಂಟರ್ ಪ್ರೈಸಸ್ ಎಂಬವರು ರಫ್ತು ತೆಗೆದುಕೊಂಡು ತುಪ್ಪ ಮಾರಾಟ ಡಿಮ್ಯಾಂಡ್ ಕೊಟ್ಟಿದ್ದರು. 13 ಮೆಟ್ರಿಕ್ ಟನ್ ತುಪ್ಪ ರಫ್ತು ಮಾಡಲು ಕ್ರಮ ತೆಗೆದುಕೊಂಡಿದ್ದೇವೆ. ಸೌಧಿ ಅರೇಬಿಯಾದಿಂದ ಕೊಚ್ಚಿನ್ ಮೂಲಕ ಹಡಗಿನ ಮೂಲಕ ಹೋಗುತ್ತೆ . ಆಸ್ಟ್ರೇಲಿಯಾ ಮತ್ತು ಅಮೇರಿಕಾ ದೇಶಕ್ಕೆ ಚೆನೈ ಬಂದರಿನ ಮೂಲಕ ಹೋಗುತ್ತೆ ಎಂದರು. ನಂದಿನಿ ಹಾಲಿನ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿ ಸರ್ಕಾರ ಹಾಗೂ ಕೆಎಂಎಫ್ ಮುಂದೆ ನಂದಿನ ಹಾಲಿನ ದರ ಏರಿಕೆಯ ಪ್ರಸ್ತಾವನೆ ಇಲ್ಲ. ಕಳೆದ ಏ.1ರಿಂದು 4 ರೂ. ದರ ಏರಿಸಿ ರೈತರಿಗೆ ಕೊಟ್ಟಿದ್ದೇವೆ. ನಿರಂತರವಾಗಿ ಒಂದು ಕೋಟಿ ಲೀಟರ್ ಹಾಲಿ ಸರಬರಾಜು ಮಾಡ್ತಿದ್ದೇವೆ. ಎಲ್ಲಾ 16 ಹಾಲು ಒಕ್ಕೂಟಗಳೂ ನೇರವಾಗಿ 4 ರೂ. ರೈತರಿಗೆ ಕೊಡ್ತಾ ಇದ್ದಾವೆ. ಹೀಗಾಗಿ ಸದ್ಯ ಹಾಲಿನ ದರ ಏರಿಕೆ ಪ್ರಸ್ತಾಪ ಈಗ ಇಲ್ಲ ಎಂದರು.











