ಮನೆ Latest News ಜಾತಿಗಣತಿ ವರದಿಗೆ ಅಹಿಂದ ವರ್ಗದಲ್ಲೇ ಅಪಸ್ವರ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಪರಿಷತ್ ಸದಸ್ಯ ನಾಗರಾಜ್...

ಜಾತಿಗಣತಿ ವರದಿಗೆ ಅಹಿಂದ ವರ್ಗದಲ್ಲೇ ಅಪಸ್ವರ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಪರಿಷತ್ ಸದಸ್ಯ ನಾಗರಾಜ್ ಯಾದವ್

0

ಬೆಂಗಳೂರು; ಜಾತಿಗಣತಿ ವರದಿಗೆ ಅಹಿಂದ ವರ್ಗದಲ್ಲೇ ಅಪಸ್ವರ ಕೇಳಿ ಬಂದಿದ್ದು ಸಿಎಂ ಸಿದ್ದರಾಮಯ್ಯಗೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ಪತ್ರ ಬರೆದಿದ್ದಾರೆ.

ಗೊಲ್ಲ, ಕಾಡುಗೊಲ್ಲ, ಯಾದವ ಸಮುದಾಯದ ವಿಚಾರವಾಗಿ ಆಕ್ಷೇಪ ಎತ್ತಿರುವ ಅವರು  ಸರಿಯಾದ ತಿದ್ದುಪಡಿ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಕಾಡುಗೊಲ್ಲ ಸಮುದಾಯದ ಜನಸಂಖ್ಯೆ 3,20,853 ತೋರಿಸಲಾಗಿದೆ. ಕಾಡುಗೊಲ್ಲರು ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ. ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ವಾಸ್ತವದಲ್ಲಿ ಈ ಸಂಖ್ಯೆಯು 6 ಲಕ್ಷಕ್ಕಿಂತ ಹೆಚ್ಚಾಗಿದೆ. ಮೀಸಲಾತಿ ಪ್ರಮಾಣವನ್ನು ಶೇ. 6 ರಿಂದ ಶೇ.8ಕ್ಕೆ ಏರಿಸಬೇಕು. ರಾಜ್ಯದಲ್ಲಿ ಪ್ರಸ್ತುವ ಜಾರಿಯಲ್ಲಿರುವ ಪ್ರವರ್ಗ-1 ಅಡಿ ಗೊಲ್ಲ ಸಮುದಾಯದ ಎಲ್ಲಾ ಜಾತಿ ಹಾಗೂ ಉಪಜಾತಿ ಸೇರಿದರೆ 22-24 ಲಕ್ಷ ಜನಸಂಖ್ಯೆ ಇದೆ. ಆದರೆ ಜಯಪ್ರಕಾಶ್ ಹೆಗ್ಡೆ ವರದಿಯಲ್ಲಿ 7,08,696 ಎಂದು ತೋರಿಸಲಾಗಿದೆ.ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದಿದ್ದಾರೆ.

ಸದ್ಯದ ವರದಿಯಲ್ಲಿ ಪ್ರವರ್ಗ 1B ನಲ್ಲಿ ಸಮಾರು 385 ಸೇರಿಸಲಾಗಿದೆ. ಇದರಲ್ಲಿ ಕೆಲ ಪ್ರಬಲ ಜಾತಿಗಳು ಸೇರಿದೆ ಇಂತಹ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ಗೊಲ್ಲ ಸಮುದಾಯ ಸೌಲಭ್ಯ ಪಡೆದುಕೊಳ್ಳುವುದು ಕಷ್ಟವಾಗಲಿದೆ.ಹೀಗಾಗಿ ಗೊಲ್ಲ ಉಪಜಾತಿಗಳನ್ನ ಪ್ರವರ್ಗ 1A ಗೆ ವರ್ಗಾಯಿಸಿ ಎಂದು ನಾಗರಾಜ ಯಾದವ್ ಒತ್ತಾಯಿಸಿದ್ದಾರೆ.

ಓಂ ಪ್ರಕಾಶ್ ನನ್ನ ಜೊತೆ ಕೆಲಸ ಮಾಡಿದ್ರು, ಒಳ್ಳೆಯ ವ್ಯಕ್ತಿ: ಗೃಹ ಸಚಿವ ಪರಮೇಶ್ವರ್ ಹೇಳಿಕೆ

ಬೆಂಗಳೂರು: ಓಂ ಪ್ರಕಾಶ್ ನನ್ನ ಜೊತೆ ಕೆಲಸ ಮಾಡಿದ್ರು, ಒಳ್ಳೆಯ ವ್ಯಕ್ತಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. DG ಓಂ ಪ್ರಕಾಶ್ ಮರ್ಡರ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರ ಶ್ರೀಮತಿಯವರು ಹತ್ಯೆ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ತನಿಖೆ ಮಾಡ್ತಿದ್ದಾರೆ. ಓಂ ಪ್ರಕಾಶ್ ನನ್ನ ಜೊತೆ ಕೆಲಸ ಮಾಡಿದ್ರು, ಒಳ್ಳೆಯ ವ್ಯಕ್ತಿ. ನಾನು ಗೃಹ ಸಚಿವನಾಗಿದ್ದಾಗ ನನ್ನ ಜೊತೆ ಕೆಲಸ ಮಾಡಿದ್ರು . ಘಟನೆಗೆ ಕಾರಣ ಏನು ಎಂದು ತನಿಖೆ ನಂತರ ನಿರ್ದಿಷ್ಟವಾಗಿ ಹೇಳಬಹುದು.ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ತನಿಖೆ ಆಗೋವರೆಗೂ ಏನೂ ಹೇಳಲಾಗದು. ಸಮಗ್ರ ತನಿಖೆಯ ನಂತರ ಎಲ್ಲಾ ತಿಳಿಯಲಿದೆ.ತನಿಖೆ ಆಗುವವರೆಗೆ ಏನೂ ಹೇಳಲಾಗದು .ಓಂ ಪ್ರಕಾಶ್ ರ ಪತ್ನಿಯನ್ನ ವಿಚಾರಣೆ ಮಾಡ್ತಿದ್ದಾರೆ ಎಂದರು.

ಜಾತಿ ಗಣತಿ ಮೂಲ ಪ್ರತಿ ಇಲ್ಲ ಎಂಬ ಅಶೋಕ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ವಿರೋಧ ಪಕ್ಷಗಳು ಎಲ್ಲದಕ್ಕೂ ಆರೋಪ ಮಾಡುತ್ತೇವೆ. ಪಾಸಿಟಿವ್ ಕ್ರಿಟಿಸಮ್ ಮಾಡಿ ಅಂತ ನಾವು ಹೇಳುವುದು. ಅನವಶ್ಯಕ ಆರೋಪ ಮಾಡಿದ್ರೆ ಪ್ರಯೋಜನವಿಲ್ಲ. ಮೂಲ ಪ್ರತಿ ಇಲ್ಲದೆ ಹೇಗೆ ಆಗುತ್ತೆ. ಕಮಿಷನ್ ಹತ್ರ ಮೂಲ ಪ್ರತಿ ಇರಲೇಬೇಕಲ್ಲ. ಮೂಲ ಪ್ರತಿ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ಕ್ಯಾಬಿನೆಟ್ ನಲ್ಲಿ ಚರ್ಚೆಮಾಡುವಾಗ ಈ ಬಗ್ಗೆ ಗಮನಿಸುತ್ತೇವೆ. ಗಂಭೀರವಾದ ಆರೋಪ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಉಪಸಮಿತಿ ಮಾಡಿ‌ಕಾಲ ಹರಣ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಹಿಂದೂಳಿದ ವರ್ಗಕ್ಕೆ ನ್ಯಾಯ ಒದಗಿಸಬೇಕು. ಇದಕ್ಕಾಗಿ ಹತ್ತು ಸಮಿತಿಗಳು ಆಗಿವೆ. ಈ ಬಾರಿ ಗೌಂಡ್ ನಲ್ಲಿ ಹೋಗಿ‌ ಸ್ಯಾಪಂಲ್ ಕಲೆ ಹಾಕಿದ್ದಾರೆ. ಅದಕ್ಕಾಗಿ ಈ ವರದಿಗೆ ಮಹತ್ವವಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಧ್ಯಯನ ಮಾಡಿ ವರದಿ ಕೊಟ್ಟಿದ್ದಾರೆ. ಜನಗಣತಿ ಕೂಡ ಆಗುತ್ತದೆ. ಜಾತಿ ಜನಸಂಖ್ಯೆ ತಿಳಿಯಬೇಕಾಗುತ್ತದೆ. ಇದರ ಮೇಲೆ ವಿಶ್ಲೇಷಣೆ ನಡೆಯುತ್ತಿದೆ. ವಿಶ್ಲೇಷಣೆ ಬಳಿಕ ಒಂದು ನಿರ್ಧಾರಕ್ಕೆ ಬರಬೇಕಾಗುತ್ತೆ. ಆ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಬಿನೆಟ್ ಮುಂದಕ್ಕೆ ಹಾಕಲಾಗಿದೆ.ಮುಂದೆ ಮತ್ತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರ ಮಾಡುತ್ತಾರೆ ಎಂದರು.

ರಾಹುಲ್ ಗಾಂಧಿ ಒಪ್ಪಿಗೆ ಪಡೆದು ಜಾತಿಗಣತಿ ಮಂಡನೆ ವಿಚಾರದ ಬಗ್ಗೆ ಮಾತನಾಡಿ  ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಮ್ಮ ಆಂತರಿಕ ವಿಚಾರ. ಸಮುದಾಯಗಳುನ್ನು ಮುಖ್ಯವಾಹಿನಿಗೆ ತರಬೇಕಿದೆ. ಅದಕ್ಕಾಗಿ ಸಾರ್ವಜನಿಕ ಚರ್ಚೆಯಾಗಬೇಕಿದೆ ಎಂದಿದ್ದಾರೆ