ಬೆಂಗಳೂರು; ಬಳ್ಳಾರಿ ಆಸ್ಪತ್ರೆಯಲ್ಲಿ ಪ್ರತಿಯೊಂದು ಉಪಕರಣ ಚೆಕ್ ಮಾಡಿ ಸಿಎಂಗೆ ವರದಿ ನೀಡಿದ್ದೇನೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಅವರು ಮಾತನಾಡಿದ ಅವರು ಬಾಣಂತಿಯರ ಸಾವಿನ ಬಳಿಕ ಬಳ್ಳಾರಿ ಆಸ್ಪತ್ರೆಗೆ ಹೋಗಿದ್ದೆ. ಪ್ರತಿಯೊಂದನ್ನು ಕೂಡ ನಾನು ಚೆಕ್ ಮಾಡಿದ್ದೇನೆ. ನೀರಿನ ಕ್ವಾಲಿಟಿ, ಆಪರೇಷನ್ ಥಿಯೇಟರ್ ಚೆಕ್ ಮಾಡಿದೆ.ಆಪರೇಷನ್ ಥಿಯೇಟರ್ ಉಪಕರಣಗಳನ್ನು ಸ್ವಾಬ್ ಟೆಸ್ಟ್ ಗೆ ಕಳುಹಿಸಬೇಕು. ಪ್ರತಿಯೊಂದು ಉಪಕರಣ ಚೆಕ್ ಮಾಡಿ ಸಿಎಂಗೆ ವರದಿ ನೀಡಿದ್ದೇನೆ. ಸಿಎಂ ಅವರು ಡಿಸಿಗೆ ಕಾಲ್ ಮಾಡಿ ಮಾಹಿತಿ ಪಡೆದ್ರು. ನೀರಿನ ಟ್ಯಾಂಕ್ ನಲ್ಲಿ ಹುಳುಗಳು ಓಡಾಡುತ್ತಿದ್ವು. ಇದು ಲೇಬರ್ ರೂಮ್ ಗೆ ನೇರ ಕನೆಕ್ಟ್ ಇತ್ತು. ಬ್ರಿಮ್ಸ್ ಗೆ ಹೋದಾಗ ಬಾಣಂತಿಯರನ್ನು ಕಾರಿಡಾರ್ ನಲ್ಲಿ ಮಲಗಿಸಿದ್ರು. ಬಾಣಂತಿಯರನ್ನ ಹಸುಗೂಸು ಸಮೇತ ಕಾರಿಡಾರ್ ನಲ್ಲಿ ಮಲಗಿಸಿದ್ರು. ಥಂಡಿಯಲ್ಲಿ ಮಲಗಿಸಿದ್ರು. ಪ್ರತಿಯೊಂದು ವಿಚಾರವನ್ನು ಸಿಎಂ ಹಾಗೂ ಸಿಎಸ್ ಗೆ ತಿಳಿಸಿದ್ದೇನೆ. ಪತ್ರದ ಮೂಲಕ ಮಾಹಿತಿ ನೀಡಿದ್ದೇನೆ. ಐದು ಲಕ್ಷ ರೂಪಾಯಿ ಪರಿಹಾರ ಸಾಕಾಗಲ್ಲ. ಮಕ್ಕಳ ಉನ್ನತ ಶಿಕ್ಷಣದವರೆಗೆ ಸರ್ಕಾರ ಅವರ ಜವಾಬ್ದಾರಿ ಹೊರಬೇಕು.ಮಗುವಿನ ಭವಿಷ್ಯ ಸರ್ಕಾರದ ಹೊಣೆ ಎಂದಿದ್ದಾರೆ.
ಇನ್ನು ಆರೋಗ್ಯ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ನಾನು ಉತ್ತರ ಕೊಡಲು ಆಗಲ್ಲ. ಆರೋಗ್ಯ ಸಚಿವರು ಪ್ರೊಟೊಕಾಲ್ ಮಾಡಬೇಡಿ ಅಂತ ಹೇಳಿರಲ್ಲ. ಎನ್ ಸಿಸ್ಟಮ್ ಹೇಗೆ ನಡೀತಾ ಇದೆಯಾ. ಡಿಎಚ್ ಓ ಏನ್ ಮಾಡ್ತಾ ಇದ್ದಾರೆ. ಇದನ್ನು ಸರಿಯಾಗಿ ಸಿಸ್ಟಮ್ ಗೆ ತರುವ ಕೆಲಸ ಆಗಬೇಕು. ಡ್ರಗ್ಸ್ ಸ್ಟೋರೇಜ್ ಕೂಡ ಬಹಳ ಮುಖ್ಯ. ಕಂಪನಿಯೂ ಲ್ಯಾಬ್ ಕಳುಹಿಸೋದೆ ಬೇರೆ. ನೀವು ಸ್ಟೋರೇಜ್ ಮಾಡಿದಾಗ ಯಾವಾಗ ಬೇಕಾದ್ರು ಲೋಪ ಆಗಬಹುದು. ಪ್ರೈವೇಟ್ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಜಾಸ್ತಿ ಇದೆ. ಇದು ಯಾಕೆ ಹೀಗಾಗಿದೆ ಅಂತ ಗಮನಹರಿಸಬೇಕಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದಿದ್ದಾರೆ