ಬೆಂಗಳೂರು; ನನ್ನ ಹಾಗೂ ಮೋದಿ ಸಂಬಂಧ ಯಾವತ್ತೂ ಬದಲಾಗಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಜೆಡಿಎಸ್ ಮೈತ್ರಿ ಯಾವುದೇ ಕಾರಣಕ್ಕೂ ಆತಂಕ ಆಗಲ್ಲ. ಮೈತ್ರಿ ಮುಂದುವರೆಯುತ್ತೆ . ಜಿಪಂ, ತಾಪಂ ಚುನಾವಣೆ, ಅಸ್ಸೆಂಬ್ಲಿ ಚುನಾವಣೆಯಲ್ಲಿ ಮೈತ್ರಿಗೆ ಆತಂಕವಿಲ್ಲ. ಮೋದಿ ಹಾಗೂ ನನ್ನ ಸಂಬಂಧ ಚೆನ್ನಾಗಿದೆ. ಯಾರಿಂದಲೂ ಬದಲಾವಣೆ ಮಾಡಲು ಆಗಲ್ಲ.
10 ವರ್ಷದಿಂದ ಇರುವ ಸಂಬಂಧ ನಮ್ಮದು. ನಾನು ಪಕ್ಷದ ಸಂಘಟನೆ ಮಾಡ್ತಿದ್ದೇನೆ ಎಂದಿದ್ದಾರೆ.ಕುಮಾರಸ್ವಾಮಿ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡ್ತಿಲ್ಲ. ಸ್ವಲ್ಪ ಆರೋಗ್ಯ ಸುಧಾರಿಸಿಕೊಳ್ಳಬೇಕಿತ್ತು.ಈಗ ಕುಮಾರಸ್ವಾಮಿ ಆರೋಗ್ಯ ಸಂಪೂರ್ಣ ಚೇತರಿಕೆ ಆಗಿದೆ. ವಿದೇಶದಿಂದ ಬಂದ ಡಾಕ್ಟರ್ ಪರೀಕ್ಷಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಎಷ್ಟು ಬೇಕಾದರು ರಾಜಕೀಯದಲ್ಲಿ ಹೋರಾಡಲು ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೆಲ ದಿನಗಳ ಬಳಿಕ ಹೆಚ್ಡಿಕೆ ಪ್ರವಾಸ ಆರಂಭಿಸಲಿದ್ದಾರೆ. ನಿಖಿಲ್ ಚನ್ನಪಟ್ಟಣದಲ್ಲಿ ಸೋತ ಮೇಲೆ, ಚುರುಕಾಗಿ ಎಲ್ಲೆಡೆ ಓಡಾಡ್ತಿದಾರೆ.ಮೂರುಬಾರಿ ಸೋತಿದ್ದರು, ಅನುಭವಿ ರಾಜಕಾರಣಿ ರೀತಿ ನಿಖಿಲ್ ಕೆಲಸ ಮಾಡ್ತಿದ್ದಾರೆ. ನನಗೆ ಮಂಡಿನೋವು ಬಿಟ್ಟರೆ ಬೇರೆ ಏನು ತೊಂದರೆ ಇಲ್ಲ ಎಂದು ಹೇಳಿದ್ದಾರೆ
ಬಿಬಿಎಂಪಿ ಚುನಾವಣೆಯಲ್ಲಿ ನಾವು ಕನಿಷ್ಟ್ 50-60 ಸ್ಥಾನ ಗೆಲ್ಲಬೇಕು. ಅದಕ್ಕಾಗಿ ಸಭೆ ನಡೆಸಲು ತೀರ್ಮಾನ ಮಾಡಿದ್ದೆ. ಮಹಿಳಾ ವಿಭಾಗದಲ್ಲಿ ಉತ್ತಮ ಕೆಲಸ ಮಾಡ್ತಿದಾರೆ. ನನ್ನ ಆರೋಗ್ಯ ಹದಗೆಟ್ಟಾಗ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. 50 ಸಾವಿರ ಜನರನ್ನ ಸೇರಿಸುವ ಶಕ್ತಿ ಇದೆ, ಅರಮನೆ ಮೈದಾನದಲ್ಲಿ ಸಮಾವೇಶ ಮಾಡ್ತೇವೆ. ಹೆಣ್ಣುಮಕ್ಕಳಿಗೆ ಚುನಾವಣೆಗೆ ಸ್ಪರ್ಧಿಸುವ ಶಕ್ತಿಇದೆ ಅನ್ನೋದನ್ನ ಪ್ರೂವ್ ಮಾಡಬೇಕಿದೆ. ನಿಖಿಲ್ ಹೋದಾಗ ಜನ ಸೇರ್ತಾರೆ. ಆದ್ರೆ ನಮ್ಮ ಶಕ್ತಿ ಪ್ರದರ್ಶನ ಆಗೋದು ಚುನಾವಣೆ ಬಂದಾ. ಬೆಂಗಳೂರು ಸಿಟಿಯಲ್ಲಿ 50 ಸೀಟ್ ಆದ್ರು ಗೆಲ್ತೆನೆ ಎಂಬ ಸಂಕಲ್ಪ ಇದೆ ಎಂದು ತಿಳಿಸಿದ್ದಾರೆ.
ಸಿಎಂ ಉ.ಕ ಭಾಗದಲ್ಲಿ ವೈಮಾನಿಕ ಸಮೀಕ್ಷೆ ಮಾಡಿದಾಗ 6 ಜಿಲ್ಲೆಗಳ ಬೆಳೆಗಳ ನಾಶ ಆಗಿದ್ದು ಗೊತ್ತಾಗಿದೆ.ರೈತರು ಘಟನೆಯಿಂದ ಸತ್ತೋಗಿದ್ದಾರೆ.ಜಾನುವಾರು ತೇಲಿಹೋಗಿವೆ. ಎಕರೆಗೆ ಎಷ್ಟು ಪರಿಹಾರ ಎಂದು ಘೋಷಣೆ ಮಾಡಿದೆ ಸರ್ಕಾರ. ಆದ್ರೆ ಫೀಲ್ಡ್ ಗೆ ಹೋಗಿ ನೋಡಿ, ಸ್ಪಂದಿಸುವ ರೀತಿ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡ್ತಾರೆ ಎಂದು ಭಾವಿಸ್ತೇನೆ. 48 ಗಂಟೆಯೊಳಗೆ ಉಸ್ತುವಾರಿ ಸಚಿವರು ಏನ್ ಮಾಡಿದ್ದಾರೆ.ಇಲ್ಲಿ ಕುಳಿತು ಮಾತಾಡಲು ಆಗಲ್ಲ. ಸ್ಥಳಕ್ಕೆ ಹೋಗಬೇಕು.ರೈತರಿಗೆ ಪರಿಹಾರ ಕೊಟ್ಟಿದಾರೊ ಇಲ್ವೊ ಅನ್ನೋದನ್ನ ನೋಡಿ ಮಾತಾಡಬೇಕು. ಮೂರ್ನಾಲ್ಕು ದಿನ ಆದ ಮೇಲೆ ಗುಲ್ಬರ್ಗಕ್ಕೆ ನಾನೇ ವಿಮಾನದಲ್ಲಿ ಹೋಗ್ತಿನಿ. ವಾಸ್ತವಾಂಶ ತಿಳಿಸ್ತೇನೆ. ಸರ್ಕಾರ ಏನ್ ಮಾಡಿದೆ ಮಾಡಿಲ್ಲ ಅನ್ನೋದನ್ನ ಆಮೇಲೆ ಹೇಳ್ತೇನೆ. ಯಾವುದೇ ಆತಂಕ ಇಲ್ಲದೆ ಹೇಳ್ತೇನೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಭೀಮಾ ನದಿಯಲ್ಲಿ ನೀರು ಬಂದಿದೆ. ಅನೇಕ ಹಳ್ಳಿ, ರಸ್ತೆ ಸೇತುವೆ ಮನೆಗಳು ಡ್ಯಾಮೇಜ್ ಆಗಿದೆ. ಮೊದಲ ಬಾರಿಗೆ ಇಂತಹ ಭೀಕರ ನೋವು ತರುವಂತ ಅತಿವೃಷ್ಟಿ. ಜಿಲ್ಲಾಧಿಕಾರಿಗಳು, ಸಚಿವರುಗಳಿಗೆ ನಿರ್ದೇಶನ ಸರ್ಕಾರ ಕೊಡಬೇಕು. ನಾಲ್ಕಾರು ಕಡೆ ವೀಕ್ಷಣೆ ಮಾಡ್ತೇನೆ. ಪರಿಹಾರ ಕಾರ್ಯ ಏನಾಗಿದೆ ಎಲ್ಲ ತಿಳಿದುಕೊಳ್ತೇನೆ .
ಆ ಬಳಿಕ ಕೇಂದ್ರಕ್ಕೆ (ಪಿಎಂ) ನಾನು ಪತ್ರ ಬರೆಯುತ್ತೇನೆ. ಕುಮಾರಸ್ವಾಮಿ ಈಗಾಗಲೆ ಪತ್ರ ಬರೆದಿದ್ದಾರೆ. 24 ಗಂಟೆಯೊಳಗೆ ಏನಾಯಿತು ಎಂದು ಹೇಳೋದು ಕಷ್ಟ. ದೇಶದಲ್ಲಿ ಸಾಕಷ್ಟು ಸಮಸ್ಯೆ ಇದೆ. ಪಿಎಂ ಬಿಡುವಿಲ್ಲದ ಕಾರ್ಯಕ್ರಮದಲ್ಲಿದ್ದಾರೆ. ಡೆಲ್ಲಿಗೆ ಹೋಗಿ ಪಿಎಂ ಭೇಟಿ ಮಾಡಿ, ಪರಿಹಾರಕ್ಕೆ ಒತ್ತಾಯ ಮಾಡ್ತೇನೆ . ರಾಜಕೀಯ ಬೆರೆಸಲ್ಲ. ಕಾಂಗ್ರೆಸ್ ಶಾಸಕರು ಗ್ಯಾರಂಟಿ ಕಾರ್ಯಕ್ರಮವನ್ನ ಅನುಷ್ಟಾನಕ್ಕೆ ತರಲಿಕ್ಕೆ ಹೋಗಿ ರಾಜ್ಯ ಬರಡಾಗಿದೆ.
ಹಣಕಾಸಿನ ಸ್ಥಿತಿ ಹದಗೆಟ್ಟಿದೆ, ಈ ಮಾತನ್ನ ಶಾಸಕರೇ ಹೇಳ್ತಾರೆ. ಅವರಲ್ಲೇ ಗೊಂದಲ ಇದೆ. ದುಡ್ಡಿಲ್ಲ, ದುಡ್ಡಿದೆ ದುಡ್ಡಿಲ್ಲ ದುಡ್ಡಿದೆ. ಅತಿವೃಷ್ಟಿಯಾದಾಗ ತನ್ನ ಸಂಪನ್ಮೂಲದಿಂದ ಸಂಕಷ್ಟಕ್ಕೀಡಾದವರಿಗೆ ಶಕ್ತಿ ಮೀರಿ ಸಹಾಯ ಮಾಡಬೇಕಿತ್ತು. ಆದ್ರೆ ಅವರಲ್ಲೇ ಗೊಂದಲಇದೆ. ಹೆಚ್ಚು ಮಾತಾಡದೆ, ವಾಸ್ತವಾಂಶ ತಿಳಿದು ಮಾತಾಡ್ತೇನೆ ಎಂದಿದ್ದಾರೆ.
ಬಿಡದಿ ಟೌನ್ ಶಿಫ್ ವಿಚಾರದ ಬಗ್ಗೆ ಮಾತನಾಡಿದ ಅವರು ಬೇರೊಬ್ಬರ ಹೆಸರು ಇಟ್ಟು ಚರ್ಚೆ ಮಾಡೋದು ಬೇಡ.ಆ ವಿಷಯದಲ್ಲಿ ಯಾವುದೇ ರೀತಿ ಮಾತಾಡಲು ಹೋಗಲ್ಲ.ಮೂರು ತಿಂಗಳಿಂದ ಮಾಧ್ಯಮದವರು ಕಾಯ್ತಿದ್ದಾರೆ. ಅಂದು ಮಾತಾಡಿಲ್ಲ, ಈಗಲು ಮಾತಾಡಲ್ಲ ನಾನು. ಇದರ ಹಿಂದೆ ಯಾವ ಶಕ್ತಿ ಇದೆ. ಆ ಬಗ್ಗೆ ಚರ್ಚೆ ಬೇಡ .ಜೆಡಿಎಸ್ ಸಣ್ಣ ರಾಜಕೀಯ ಪಕ್ಷ .ಅದನ್ನ ಉಳಿಸಿ, ಬೆಳೆಸಲು ಶಕ್ತಿ ಮೀರಿ ಪ್ರಯತ್ನ ಮಾಡ್ತೇನೆ .ನಾನು ಯಾರ ಹೆಸರೂ ಹೇಳದೆ ಮಾತಾಡ್ತಿನಿ. ನಿಖಿಲ್ ಹೆಸರು ತೆಗೆದು ಮಾತಾಡಿದ್ದಾರೆ. ಪ್ರಶ್ನೆ ನಿಖಿಲ್ ಅವರಿಗೆ ಕೇಳಿ ಬಿಡದಿ ಟೌನ್ ಶಿಫ್ ಸಭೆ ಮಾಡಿದ್ರು. ಅದರಿಂದ ಏನಾಯ್ತು.ಅವರ ಕೈಯಲ್ಲಿ ಸರ್ಕಾರ ಇದೆ. ನಾವ್ ಏನೆ ಹೇಳಿದ್ರು.ತಿರಸ್ಕಾರ ಮನೋಭಾವದಿಂದ ನೋಡುವ ಸ್ಥಿತಿ ಇದೆ.ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು.ಅಲ್ಲಿವರೆಗೂ ನೀವು ಕಾಯಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಹೇಳಿದ್ದಾರೆ.











