ಮನೆ Latest News ನನ್ನ ಫೋನ್ ಟ್ಯಾಪಿಂಗ್ ಕೂಡ ಆಗಿದೆ; ಫೋನ್ ಟ್ಯಾಪಿಂಗ್ ಬಗ್ಗೆ ಆರ್ ಅಶೋಕ್ ಗಂಭೀರ ಆರೋಪ

ನನ್ನ ಫೋನ್ ಟ್ಯಾಪಿಂಗ್ ಕೂಡ ಆಗಿದೆ; ಫೋನ್ ಟ್ಯಾಪಿಂಗ್ ಬಗ್ಗೆ ಆರ್ ಅಶೋಕ್ ಗಂಭೀರ ಆರೋಪ

0

ಬೆಂಗಳೂರು; ಫೋನ್ ಟ್ಯಾಪಿಂಗ್ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪಿಂಗ್ ಕೂಡ ಆಗಿದೆ. ಎಲ್ಲಾ ವಿರೋಧ ಪಕ್ಷದವರ ಫೋನ್ ಟ್ಯಾಪಿಂಗ್ ಆಗುತ್ತಿದೆ. ಸಿಎಂ ಸಿದ್ಧರಾಮಯ್ಯರ ಸರ್ಕಾರ ಬಂದಾಗಿನಿಂದಲೂ ಫೋನ್ ಟ್ಯಾಪಿ ಆಗುತ್ತಿದೆ ಎಂದಿದ್ದಾರೆ.

ಫೋನ್ ಕದ್ದಾಲಿಕೆ ಮಾಡ್ತಿರುವುದು ನೂರಕ್ಕೆ ನೂರರಷ್ಟು ನಿಜ. ಇದರಲ್ಲಿ ಯಾವುದೇ ಅನುಮಾನ ಬೇಡ. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಲಿಕೆ ಆಗ್ತಿದೆ. ನನ್ನ ಮತ್ತು ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗ್ತಿದೆ.ರಾಜೇಂದ್ರ ಹಾಗೂ ರಾಜಣ್ಣ ಅವರ ಫೋನ್ ಕದ್ದಾಲಿಕೆ ಆಗಿದೆ. ಹಲವು ಶಾಸಕರ ಫೋನ್ ಕದ್ದಾಲಿಕೆ ಆಗಿದೆ .ಆಡಳಿತ ಪಕ್ಷದವರದ್ದು ಆಗಿದೆ. ವಿಪಕ್ಷದವರದ್ದು ಆಗಿದೆ.. ರಾಜಣ್ಣ ರಾಜೇಂದ್ರ ಟ್ರ್ಯಾಕ್‌ ಮಾಡೋಕೆ ಕದ್ದಾಲಿಕೆ ಮಾಡಿಸಿರುತ್ತಾರೆ. ನಾನು, ಕುಮಾರಸ್ವಾಮಿ ಅವರು ಮೊದಲಿಂದಲೂ ಆರೋಪ ಮಾಡ್ತಿದ್ವಿ . ಎರಡು ವರ್ಷಗಳಿಂದ ನಮ್ಮ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಎಂದಿದ್ದಾರೆ.

ಚೀಟಿ ಕೊಟ್ಟು ಚರ್ಚೆ ಮಾಡಿ ಅಂತ ಹೇಳಿದ್ದು ನಿಜಾ. ಸ್ಪೀಕರ್ ಹತ್ರನೂ ಆ ಸಚಿವರು ಚರ್ಚೆ ಮಾಡಿದ್ರು. ಬೇಕಾದ್ರೆ ಸದನ ವಿಡಿಯೋಗಳನ್ನ ನೋಡಿ. ಸ್ಪೀಕರ್ ಅವರೇ ಚರ್ಚೆ ಅವಕಾಶ ಕೊಟ್ರು‌. ನಮ್ಮ ಶಾಸಕರು ಸ್ಪೀಕರ್ ಪೀಠದ ಹತ್ರ ಹೋಗ್ತಿದ್ದಾಗ.. ಯುಟಿ ಖಾದರ್ ಅವರೇ ಬರಲಿ ಬಿಡಿ ಎಂತ ಮಾರ್ಷಲ್ಸ್‌ಗೆ ಹೇಳಿದ್ರು. ಅವರೇ ಬಿಟ್ಟು ಈಗ ಅವರೇ ಸಸ್ಪೆಂಡ್ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಗೋಲ್ಡ್ ಲೂಟಿ ಬಗ್ಗೆ ಕೇಂದ್ರದಿಂದ CBI ತನಿಖೆ ಮಾಡ್ತಿದೆ. ಕೇಂದ್ರ ಏಜೆನ್ಸಿ ಯಾರು ಅಂತ ನಾವು ಕೂಡ ಕಾಯುತ್ತಿದ್ದೇವೆ. ತನಿಖೆಯಿಂದ ಎಲ್ಲ ಹೊರ ಬರುತ್ತೆ. ಆದ್ರೆ ಹಾನಿಟ್ರ್ಯಾಪ್ ವಿಚಾರವನ್ನ ಯಾವುದರಿಂದ ತನಿಖೆ ಮಾಡಿಸ್ತಿರಾ ಅಂತ ಇನ್ನು ಹೇಳೇ ಇಲ್ಲ. ನೀವು ಯಾವ ತನಿಖೆ ಸಂಸ್ಥೆಯಿಂದ ಮಾಡಿಸ್ತೀವಿ ಅಂತ ಹೇಳಲಿಲ್ಲ. ಅದಕ್ಕೆ ನಾವು ಹೋರಾಟ ಮಾಡಿದ್ವಿ.ಕಾಂಗ್ರೆಸ್‌ನವರ ಮೇಲೆ ಸುಮೋಟೋ ಕೇಸ್ ದಾಖಲು ಆಗಲ್ಲ. ಬಿಜೆಪಿಯವರ ಮೇಲೆ ಆದ್ರೆ ಆಗುತ್ತೆ. ಸಿಎಂ & ಖರ್ಗೆ ನಡುವೆ ಏನ್ ಚರ್ಚೆ ಆಯ್ತು. ಅದರ ಬಗ್ಗೆ ಹೇಳಲೇ ಬೇಕು ಅವರಿಗೆ ಆಗ್ರಹ ಮಾಡ್ತೀನಿ ಎಂದಿದ್ದಾರೆ.

ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು; ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ  

ನವದೆಹಲಿ; ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಚೀಟಿ ಬರೆದು ಯಾರು ಕಳಿಸಿದರೋ ಗೊತ್ತಿಲ್ಲ.ಆದರೆ ಅದರಲ್ಲಿ ಇರೋದು ಹೇಳಿದರೆ ಕ್ರಾಂತಿ ಆಗಲಿದೆ . ಹನಿಟ್ರ್ಯಾಪ್ ಆಗ್ತಿದೆ ಎಂದು ಹೇಳ್ತಿದ್ದರು. ಸಚಿವರೇ ಬಹಿರಂಗವಾಗಿ ಹೇಳ್ತಿದ್ದಾರೆ. ಸಾರ್ವಜನಿಕವಾಗಿ ಚರ್ಚೆ ಆಗ್ತಿದೆ, ಸದನದಲ್ಲಿ ಪ್ರಶ್ನೆ ಮಾಡಿದೆ. ಇದರಿಂದ ಕಾಂಗ್ರೆಸ್ ನಲ್ಲಿ ಗಲಿಬಿಲಿಯಾಯಿತು. ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು. ಬಂದಿರುವ ಚೀಟಿಯಲ್ಲಿ ಏನಿತ್ತು ಎಂದು ಹೇಳಿದ್ರೆ ಎರಡು ಪಕ್ಷದ ನಾಯಕರು ಮನೆಗೆ ಹೋಗ್ತಾರೆ. ನಾನು ಯಾರಿಂದ ಬಳಕೆಯಾಗುವ ವ್ಯಕ್ತಿಯಲ್ಲ. ಅವರು ಕೊಟ್ಟಿದ್ದನ್ನು ಓದಲು ನಾನು ಕಾಂಗ್ರೆಸ್ ಏಜೆಂಟ್ ಅಲ್ಲ ಎಂದಿದ್ದಾರೆ.

ರಾಜ್ಯದ ಹಿತಕ್ಕಾಗಿ ಮಾತನಾಡುತ್ತಿದ್ದೇವೆ. ಎರಡು ಕಂಪನಿ ಫ್ಯಾಕ್ಟರಿ ಗಳಿದೆ.ಆ ಕಡೆ ಹಲೋ ಅಂದರೆ ಈ ಕಡೆ ಹಲೋ ಅಂತಾರೆ. ಜೈಶ್ರೀರಾಮ ಅಂದರೆ ಜೈಶ್ರೀರಾನ ಅಂತಾರೆ.. ಸುಮ್ನೆ ಏನೋ ಮಾತನಾಡಬಾರದು. ಶಾಸಕರ ಮಾನ ಹರಾಜು ಮಾಡುವ ಹಲ್ಕಾ ಕೆಲಸ ಮಾಡಬಾರದು. ಇಂತವರು ರಾಜಕೀಯದಿಂದ ಹೊರ ಹೋಗಬೇಕು, ಮುಖ್ಯಮಂತ್ರಿ ಆಗಬಾರದು. ಹೈಕೋರ್ಟ್ ಜಡ್ಜ್ ಗಳಿದೆ ಇದೆ ಅಂತಾರೆ. ರಾಜಕೀಯ ಭೇಟಿಗೆ ಬಂದಿಲ್ಲ, ಗಡ್ಕರಿ ಭೇಟಿಗೆ ಬಂದಿದ್ದೇನೆ. ರಾಜ್ಯದಲ್ಲಿ ರಾಜ್ಯಧ್ಯಕ್ಷರ ಬದಲಾವಣೆ ಯಾವಾಗ ವಿಜಯೇಂದ್ರ ಅವರನ್ನ ಕೇಳಿ . ಪಕ್ಷ ಅವಕಾಶ ಕೊಟ್ಟರೇ 134 ತರ್ತಿನಿ, ನೋ ಆಪರೇಷನ್ ಎಂದಿದ್ದಾರೆ.

ಬಿಜೆಪಿಯವ್ರು ಸಂವಿಧಾನ ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್ ನವರು ಹೇಳಿಕೊಂಡು ಬಂದಿದ್ದರು. ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದಾರೆ. ಸಂವಿಧಾನ ವಿರೋಧಿಯಾಗಿ ಮೀಸಲಾತಿ ನೀಡಿದ್ದರು ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್ ಸಂವಿಧಾನ ಬದಲಿಸಲಿದೆ ಎಂದು ಅವರ ನಾಯಕರ ಹೇಳಿಕೊಂಡಿದ್ದಾರೆ ಎಂದಿದ್ದಾರೆ.