ಮನೆ Latest News ಮುಸ್ಲಿಂ ಮತಾಂಧರು ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದಾರೆ.: ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

ಮುಸ್ಲಿಂ ಮತಾಂಧರು ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದಾರೆ.: ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು: ಮುಸ್ಲಿಂ ಮತಾಂಧರು ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಬಾಗಲಕೋಟೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ನಿನ್ನೆ ಶಿವಾಜಿ ಮಹಾರಾಜರು ಮೆರವಣಿಗೆ ಮೇಲೆ ಕಲ್ಲು ತೂರಾಟ ಆಗಿದೆ. ಮುಸ್ಲಿಂ ಮತಾಂಧರು ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಶಿವಾಜಿ ಮಹಾರಾಜರು ಹಿಂದೂ ಸಂಘಟನೆಗೆ ಕೆಲಸ ಮಾಡಿದರು. ಮರಾಠರು ಶಿವಾಜಿ ಅವರನ್ನ ದೇವರು ರೀತಿ ಕಾಣ್ತಾರೆ. ಮೆರವಣಿಗೆ ಮೇಲೆ ಮುಸ್ಲಿಂಮರು ಕಲ್ಲು ತೂರಾಟ ಮಾಡಿದ್ದಾರೆ. ಇದೊಂದು ಪೂರ್ವ ನಿಯೋಜಿತ. ಹನುಮ ಮಾಲಧಾರಿ, ಗಣೇಶ ಮಹೋತ್ಸವ ಹೀಗೆ ಅನೇಕ ಘಟನೆಗಳು ಆಗಿವೆ. ಕಾಂಗ್ರೆಸ್ ‌ಸರ್ಕಾರ ಬಂದ ಮೇಲೆ ಮುಸ್ಲಿಮ್ ಭಯೋತ್ಪಾದಕ ಭಯ ಇಲ್ಲದಂತೆ ಆಗಿದೆ. ಮುಸ್ಲಿಮರ ಮೇಲೆ ಕ್ರಮ ಮಾಡಬೇಡಿ ಅಂತ ಈ ಸರ್ಕಾರ ಹೇಳಿದೆ. ಅದಕ್ಕೆ ಅವರು ಹೀಗೆ ಮಾಡ್ತಾ ಇದ್ದಾರೆ.ಈ ಗಲಾಟೆ ಎಲ್ಲಗೆ ಬೇಕಾದ್ರು ಹೋಗಬಹುದು. ಗವಿಗಂಗಾಧರ ದೇವಾಲಯ ಕಟ್ಟಿದವರು ಶಿವಾಜಿ ತಂದೆ.ಶಿವಾಜಿ ಕರ್ನಾಟಕದವರು.ಕಾಂಗ್ರೆಸ್ ಕಿತಾಪತಿಯಿಂದ ಇಂತಹ ಗಲಾಟೆ ಆಗಿದೆ ಎಂದಿದ್ದಾರೆ.

ಸಿಎಂ ಹೇಳ್ತಾರೆ ಕಟ್ಟು ನಿಟ್ಟಿನ ಕ್ರಮ ಅಂತಾರೆ. ಇದು ಬುರುಡೆ ಕ್ರಮ. ಏನು ಕ್ರಮ ತೆಗೆದುಕೊಳ್ಳಲ್ಲ. ಅವರ ಮೇಲಿನ ಕೇಸ್ ವಾಪಸ್ ತೆಗೆದಿದ್ದಾರೆ.ಈ ಸರ್ಕಾರ ಹಿಂದುಗಳು ದ್ವೇಷಿ ಸರ್ಕಾರ. ಹಿಂದೂ ಸಮುದಾಯದ ವಿರೋಧಿಗಳು ಇವರು.ಇವರಿಂದ ಶಾಂತಿ ಸ್ಥಾಪನೆ ಆಗೊಲ್ಲ.ಸರ್ಕಾರ ಇವರ ಮೇಲೆ ಗೂಂಡಾ ಆಕ್ಟ್ ಆಗಬೇಕು. ಗೂಂಡಾ ಆಕ್ಟ್ ಹಾಕಿಲ್ಲ ಅಂದರೆ ಸರ್ಕಾರ ಶಾಮೀಲು ಆದಂತೆ. ಇದು ಹಿಂದು ದ್ರೋಹಿ ಸರ್ಕಾರ. ಮರಾಠ ಸಮಾಜ, ಹಿಂದೂ ಸಮಾಜ ಜನ ಶಾಂತಿ ಕಾಪಾಡಬೇಕು. ಇವರಿಗೆ ಪಾಕಿಸ್ತಾನ, ಬಾಂಗ್ಲಾದೇಶ ಬೆಂಬಲ ಇದೆಯಾ ಕಂಡು ಹಿಡಿಯಬೇಕು. ಶಿವಾಜಿ ಗಲಾಟೆಗೂ ಪಾಕಿಸ್ತಾನದಿಂದ ಟ್ವೀಟ್ ಮಾಡ್ತಾರೆ ಅನ್ನಿಸುತ್ತೆ. ಕೂಡಲೇ ಅವರ ಮೇಲೆ ಗೂಂಡಾ ಆಕ್ಟ್ ಹಾಕಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ,

ಸ್ನೇಹಮಯಿ ಕೃಷ್ಣ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು ಇದು‌ ದುರಾಡಳಿತ ಪರಮಾವಧಿ. ಕರ್ನಾಟಕದಲ್ಲಿ ಎಮರ್ಜೆನ್ಸಿ ಈ ಸರ್ಕಾರ ತಂದಿದೆ. ಕೋರ್ಟ್ ನಿಂದಲೇ ನ್ಯಾಯಕ್ಕಾಗಿ ಹೋರಾಟ ಮಾಡೋರನ್ನ ಬಂಧನ ಮಾಡಿದ್ದಾರೆ. ಗಾಂಧಿ ಆದರ್ಶದ ವಿರುದ್ದ ಈ ಸರ್ಕಾರ ನಡೆದುಕೊಳ್ತಿದೆ. ನ್ಯಾಯದ ಕತ್ತು ಹಿಸಿಕೋ ಕೆಲಸ ಮಾಡ್ತಿದೆ ಈ ಸರ್ಕಾರ ಎಂದಿದ್ದಾರೆ.

ಗ್ಯಾರಂಟಿ ಬಗ್ಗೆ ಸುಪ್ರೀಂಕೋರ್ಟ್ ‌ಕಿಡಿ ಕಾರಿರುವ ಬಗ್ಗೆ ಮಾತನಾಡಿದ ಅವರು ಸುಪ್ರೀಂಕೋರ್ಟ್ ಹೇಳಿಕೆ ಸ್ವಾಗತ ಮಾಡ್ತೀನಿ ‌. ಹಿಮಾಚಲ ಪ್ರದೇಶ ಪಾಪರ್ ಆಗಿ ಬಿಕ್ಷಾ ಪಾತ್ರೆ ಹಿಡಿಯುತ್ತಿದೆ. ತೆಲಂಗಾಣ ಹೀಗೆ ಆಗಿದೆ. ಕರ್ನಾಟಕದಲ್ಲಿ ಸ್ಕ್ಯಾನ್ ಮಾಡೋಕೆ ಆಗ್ತಿಲ್ಲ. ಸಾರಿಗೆ ಇಲಾಖೆ ಮುಷ್ಕರ ಆಯ್ತು. ಅವರಿಗೆ ದುಡ್ಡು ಕೊಡೋಕೆ ಆಗ್ತಿಲ್ಲ. ಗೃಹಲಕ್ಷ್ಮಿ ಹಣ ನುಂಗಿ ನೀರು ಕುಡಿದಿದ್ದೀರಾ. ಅನ್ನಭಾಗ್ಯ ಹಣ ನುಂಗಿ ನೀರು ಕುಡಿದ್ದಿದ್ದೀರಾ. ಇದು ಕಾಂಗ್ರೆಸ್ ದಿವಾಳಿ ಆಗಿರೋದಕ್ಕೆ ಸಾಕ್ಷಿ ಆಗಿದೆ. ಈ‌ ಸರ್ಕಾರದ ಮೇಲೆ ಜನ ಭರವಸೆ ‌ಕಳೆದುಕೊಂಡಿದ್ದಾರೆ. ಇದು ಸತ್ತು ಹೋಗಿರೋ ಸರ್ಕಾರ. ಮುಸ್ಲಿಂಮರ ಪರ ಸರ್ಕಾರ ಇದು.ಬಾಗಲಕೋಟೆ ಪ್ರಕರಣದ ಬಗ್ಗೆ ನಿಯೋಗ ಹೋಗೋ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.

ಮಾಧ್ಯಮಗಳಿಗೆ ನಿರ್ಬಂಧ ವಿಚಾರದ ಬಗ್ಗೆ ಮಾತನಾಡಿದ ಅವರು ಕೈ ಮುಗಿದು ಸರ್ಕಾರದ ನಿರ್ಧಾರ ವ್ಯಂಗ್ಯ ಮಾಡಿದ್ದಾರೆ. ಕ್ಷಮಿಸಿ ಬಿಡಿ ಬೀದಿಯಲ್ಲಿ ಸುದ್ದಿಗೋಷ್ಟಿ ಮಾಡಿದ್ದಕ್ಕೆ. ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಯಾವಾಗಲು ಬಂದಿಲ್ಲ. ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಸಿದ್ದರಾಮಯ್ಯರಿಂದ ಬಂದಿದೆ. ಅನಿವಾರ್ಯ ಇಲ್ಲಿ ಸುದ್ದಿಗೋಷ್ಟಿ ಮಾಡಿದ್ದೇನೆ. ಬೀದಿಯಲ್ಲಿ ಸುದ್ದಿಗೋಷ್ಟಿ ಮಾಡಲು ಕಾರಣ ಸಿದ್ದರಾಮಯ್ಯ. ಅವರಿಗೆ ಇದರ ಶಾಪ ತಟ್ಟಲಿ ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ,