ಮನೆ Latest News ಡಿಬಿಟಿ ಬದಲಿಗೆ ಆಹಾರ ಕಿಟ್ ಕೊಡುವ ಬಗ್ಗೆ ಪ್ಲಾನ್; ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ

ಡಿಬಿಟಿ ಬದಲಿಗೆ ಆಹಾರ ಕಿಟ್ ಕೊಡುವ ಬಗ್ಗೆ ಪ್ಲಾನ್; ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ

0

 

ಬೆಂಗಳೂರು: ಇನ್ನು ಮೇಲೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣದ ಬದಲಿಗೆ ಆಹಾರ ಕಿಟ್ ವಿತರಿಸುವ ಬಗ್ಗೆ ಪ್ಲ್ಯಾನ್ ನಡೆದಿದೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.

ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿರಲಿಲ್ಲ.ಈಗ ಮುಂದೆ ಬಂದಿದ್ದಾರೆ, ಪ್ರಹ್ಲಾದ್ ಜೋಶಿಯವನ್ನ ಭೇಟಿ ಮಾಡಿದ್ದೇವೆ.ಡಿಬಿಟಿ ಮೂಲಕ ಪ್ರತಿಯೊಬ್ಬರಿಗೆ 170 ರೂ. ಕೊಡುತ್ತಿದ್ದೇವೆ.ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಬಾಕಿ‌ ಇದೆ.ಶೀಘ್ರವೇ ಹಣ ಖಾತೆಗೆ ವರ್ಗಾವಣೆ ಮಾಡಲಾಗುವುದು.ಸರ್ವರ್ ಸಮಸ್ಯೆ ಇದೆ, ಇಂದಿನಿಂದ ಆ ಸಮಸ್ಯೆ ಇರುವುದಿಲ್ಲ.ಆಹಾರ ಮೇಳ ಈ‌ ತಿಂಗಳ ಕೊನೆಯಲ್ಲಿ ಮಾಡುತ್ತೇವೆ.ಆಹಾರ ಸೌಧದ ಕಟ್ಟಡ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ ಎಂದ್ರು.

ಬೆಳೆ, ಎಣ್ಣೆಯನ್ನೊಳಗೊಂಡ ಆಹಾರ ಕಿಟ್ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಾರ್ಡ್ ಗಳ ಪರಿಷ್ಕರಣೆ ಮಾಡುತ್ತಿದ್ದೇವೆ. ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದೇವೆ.ಕಾರ್ಡ್ ಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.ಅದಾದ ಬಳಿಕ ಆಹಾರ ಕಿಟ್ ವಿತರಣೆ ಬಗ್ಗೆ ಚರ್ಚೆ ಮಾಡುತ್ತೇವೆ.ಕಳೆದ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೆವು.ಕಾರ್ಡ್ ಗಳ ಪೂರ್ಣ ಪರಿಶೀಲನೆ ಬಳಿಕ ಆಹಾರ ಕಿಟ್ ವಿತರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಕೇಂದ್ರ ಸರ್ಕಾರ ಅಕ್ಕಿ ಕೊಡಲು ಮುಂದೆ ಬಂದಿದೆ. ಡಿಬಿಟಿ ಬದಲಿಗೆ ಅಕ್ಕಿ ಕೊಡುವ ಬಗ್ಗೆ ಚರ್ಚೆ ಮಾಡ್ತೀವಿ.ಸದ್ಯಕ್ಕೆ ಡಿಬಿಟಿ ಮೂಲಕ ಜನರ ಖಾತೆಗೆ ಹಣ ವರ್ಗಾವಣೆ ಆಗಲಿದೆ.ಎಣ್ಣೆ, ಬೆಳೆ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ.ಮುಂದೆ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ.ರಾಜ್ಯ ಸರ್ಕಾರಕ್ಕೆ ಅಕ್ಕಿ ವಿತರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.ಕೇಂದ್ರ ಭರವಸೆ ಕೊಟ್ಟರೂ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಅಕ್ಕಿ ವಿತರಿಸುವುದಾಗಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.ಹೀಗಿದ್ದರೂ ರಾಜ್ಯ ಸರ್ಕಾರ  ಅಕ್ಕಿ ಖರೀದಿಗೆ ಮುಂದಾಗಿದೆ.

ಕೇಂದ್ರದಿಂದ ಅಕ್ಕಿ ಖರೀದಿ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ. ಡಿಬಿಟಿ ಮೂಲಕವೇ ಜನರಿಗೆ ಖಾತೆಗೆ ಹಣ  ವರ್ಗಾವಣೆ ಆಗಲಿದೆ.ಡಿಬಿಟಿ ಬದಲಿಗೆ ಕೇಂದ್ರ ನೀಡುವ ಅಕ್ಕಿ ಖರೀದಿ ತೀರ್ಮಾನ ಮಾಡಿಲ್ಲ.ಸದ್ಯಕ್ಕೆ ಕೇಂದ್ರ ಸರ್ಕಾರದ ಅಕ್ಕಿಯನ್ನ ಮುಂದುವರಿಸುತ್ತೇವೆ.ರಾಜ್ಯ ಕೇಂದ್ರವನ್ನ ಹೆಚ್ಚುವರಿಯಾಗಿ ಕೇಳಿದ್ದ ಅಕ್ಕಿ ಕೊಡುತ್ತಿರಲಿಲ್ಲ.ಡಿಬಿಟಿ ಬದಲಿಗೆ ಆಹಾರ ಕಿಟ್ ಕೊಡುವ ಬಗ್ಗೆ ಯೋಚನೆ ಮಾಡೋಣ.ಮುಂದಿನ ತಿಂಗಳು ಈ ಬಗ್ಗೆ ಚರ್ಚೆ ಮಾಡೋಣ ಎಂದು ಮುನಿಯಪ್ಪ ಹೇಳಿದ್ದಾರೆ.

ಎಣ್ಣೆ, ಬೇಳೆಯನ್ನೊಳಗೊಂಡ ಆಹಾರ ಕಿಟ್ ವಿತರಣೆಗೆ ಚಿಂತನೆ ಮಾಡಲಾಗಿದೆ.ಕೇಂದ್ರ ಅಕ್ಕಿ ವಿತರಣೆಗೆ ಮುಂದಾದ್ರೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.ಸದ್ಯ ಕೇಂದ್ರದಿಂದ ರಾಜ್ಯಕ್ಕೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ವಿತರಣೆಯಾಗುತ್ತಿದೆ.ಇದರ ಜೊತೆಗೆ ಮತ್ತೆ 5 ಕೆ.ಜಿ‌ ಸೇರಿಸಿ ಒಟ್ಟು 10 ಕೆ.ಜಿ ವಿತರಿಸುವುದಾಗಿ  ಕಾಂಗ್ರೆಸ್ ಘೋಷಿಸಿತ್ತು. ಇದೀಗ ಕೇಂದ್ರ 5 ಕೆ.ಜಿ ಅಕ್ಕಿ ವಿತರಿಸಿದರೆ, ರಾಜ್ಯ ಸರ್ಕಾರ ಆಹಾರ ಕಿಟ್ ವಿತರಣೆಗೆ ಚಿಂತನೆ ನಡೆಸಿದೆ.ಆಹಾರ ಕಿಟ್ ವಿತರಣೆ ಕುರಿತು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೆಚ್ಚು ಒಲವನ್ನ ಹೊಂದಿದ್ದಾರೆ. ಕಾರ್ಡ್ ಗಳ ಪರಿಷ್ಕರಣೆ ಮುಗಿದ ಬಳಿಕವೇ ಈ ಬಗ್ಗೆ ಚರ್ಚೆ ಮಾಡಲಾಗುತ್ತೆ.ಮುಂದಿನ ಕ್ಯಾಬಿನೆಟ್ ನಲ್ಲಿ ಆಹಾರ ಕಿಟ್ ವಿತರಣೆ ಬಗ್ಗೆ ಚರ್ಚೆ ಸಾಧ್ಯತೆಯಿದೆ .