ಬೆಂಗಳೂರು; ನಿನ್ನೆ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆ ಬಗ್ಗೆ ಸಚಿವ ಕೆ ಹೆಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯಕ್ಕೆ ನಾವೆಲ್ಲರೂ ಬದ್ದರಾಗಿದ್ದೀವಿ. ನಾಗಮೋಹನ್ ದಾಸ್ ಅವರ ದತ್ತಾಂಶ ಸರ್ಕಾರ ಒದಗಿಸಬೇಕು. ನಾವು ಸೇರಿದ್ದರ ಮೂಲ ಉದ್ದೇಶ ಅಭಿವೃದ್ಧಿ. ಸ್ಥಳೀಯ ಚುನಾವಣೆ ಕುರಿತು ಚರ್ಚೆ ಆಗಿದೆ.ಎಲೆಕ್ಷನ್ ಗೆ ನಾವೆಲ್ಲರೂ ತಯಾರಗಬೇಕು ಎಂದು ಹೇಳಿದ್ದೇವೆ ಎಂದರು.
ಅಕ್ಕಿ ಪೂರೈಕೆ ವಿಚಾರದ ಬಗ್ಗೆ ಮಾತನಾಡಿದ ಅವರು,ಅಕ್ಕಿ ಇದೆ, ಕೇಂದ್ರ ಸರ್ಕಾರವೂ ಅಕ್ಕಿ ಕೋಡೋಕೆ ಸಿದ್ಧವಿದೆ.ನಾವು ನಿರ್ಣಯ ಮಾಡಿದಂತೆ ಹಣ ಒದಗಿಸಿದ್ದೇವೆ.ಏಪ್ರಿಲ್ ನಿಂದ ೧೦ ಕೆಜಿ ಅಕ್ಕಿ ಒದಗಿಸುತ್ತೇವೆ.ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು.ನಾವು ಏನೂ ಮಾತಾಡೋದಿಲ್ಲ.ಮುಖ್ಯಮಂತ್ರಿ ಬದಲಾವಣೆ ವಿಷ್ಯ ನಮ್ಮ ಮುಂದೆ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ನಿನ್ನೆ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ವಿಚಾರ ಬಗ್ಗೆ ಚರ್ಚೆ ಆಗಿದೆ; ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆ
ಬೆಂಗಳೂರು; ನಿನ್ನ ಮಹದೇವಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ವಿಚಾರ ಬಗ್ಗೆ ಚರ್ಚೆ ಆಗಿದೆ ಎಂದು ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ.
ಬೆಂಗಳೂರನಲ್ಲಿ ನಿನ್ನೆ ಮಹದೇವಪ್ಪ ನಿವಾಸದಲ್ಲಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಮುದಾಯದ ಹಲವಾರು ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಆಗಿದೆ. ಎಸ್ ಇಪಿ ಟಿಎಸ್ಪಿ ವಿಚಾರದ ಕುರಿತು ಕ್ರಾಸ್ ಚೆಕ್ ಮಾಡಬೇಕು. ಒಳಮೀಸಲಾತಿ ತರುವ ಬಗ್ಗೆ ಬದ್ದರಾಗಬೇಕು. ಸಮುದಾಯದ ಒಟ್ಟು ಅಭಿವೃದ್ಧಿ ಯಾವ ರೀತಿ ಆಗಬೇಕು ಎಂದು ಚರ್ಚೆ ಆಗಿದೆ. ಒಳಮೀಸಲಾತಿ ಆಗಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದಿದ್ದಾರೆ.
ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ ಎಂಬ ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನ ನಾನು ಹೇಗೆ ಹೇಳಲಿ. ಯಾರು ಆಗಬಾರದು ಅಂತ ಇದೆ, ಎಲ್ಲರಿಗೂ ಆಗಬೇಕು ಎಂದು ಇದೆ. ನಾನು ಸಿಎಂ, ಅಧ್ಯಕ್ಷ ಆಗಬೇಕೆಂದು ಅಂದುಕೊಂಡಿರ್ತಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನಿಮ್ಮ ಹತ್ತಿರವೇ ಕೇಳುತ್ತಿದ್ದೇವೆ. ಎಲ್ಲವೂ ಹೈಕಮಾಂಡ್ ನಿರ್ಧಾರ. ತುಮಕೂರು ಭಾಗದ ಸಚಿವ ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ ಅವರು ಇವೆಲ್ಲವೂ ರಾಜಕಾರಣ ನಡೀತಾ ನೇ ಇರುತ್ತೆ. ಇದು ದುರ್ದೈವ. ಇದೊಂದು ಉದ್ಯೋಗ ಆಗಿದೆ .ಇದು ಸರಿ ಇಲ್ಲ ಎಂದಿದ್ದಾರೆ.