ಮನೆ Latest News ಡಿಕೆಶಿ ವಿರುದ್ಧ ಮತ್ತೆ ಕಿಡಿ ಕಾರಿದ ಶಾಸಕ ಮುನಿರತ್ನ

ಡಿಕೆಶಿ ವಿರುದ್ಧ ಮತ್ತೆ ಕಿಡಿ ಕಾರಿದ ಶಾಸಕ ಮುನಿರತ್ನ

0

ಬೆಂಗಳೂರು; ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಶಾಸಕ ಮುನಿರತ್ನ ಮತ್ತೆ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಕಸ ವಿಲೇವಾರಿಯಾಗದ ವಿಚಾರದ ಬಗ್ಗೆ ಮಾತನಾಡಿದ ಅವರು ೨೮ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಎಲ್ಲಿ ನೋಡಿದರು ಕಸದ ರಾಶಿಯೇ ಕಾಣಿಸ್ತಿದೆ. ಕಸದ ರಾಶಿ ತೆರವುಗೊಳಿಸೋಕೆ ಆಗದೆ, ಫ್ಲೈಓವರ್ ಕೆಳಗೆ ಮತ್ತು ಪಾರ್ಕ್ ಗಳಲ್ಲಿ ಎಲ್ಲಿ ಎಲ್ಲಿ ಜಾಗ ಸಿಗುತ್ತೆ ಅಲ್ಲಿ ಬೆಂಕಿ ಇಡೋ ಕೆಲಸ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಬೊಮ್ಮಾಯಿ ಸರ್ಕಾರದಲ್ಲಿ ಕಸದ ಸಮಸ್ಯೆ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಕಸದ ಸಮಸ್ಯೆ ಒಂದೇ ಅಲ್ಲ. ರಸ್ತೆ ಗುಂಡಿ ಸಮಸ್ಯೆ, ಗುತ್ತಿಗೆದಾರ ಆತ್ಮಹತ್ಯೆ ಇರಬಹುದು. ಗುತ್ತಿಗೆದಾರರು ಊರು ಬಿಟ್ಟು ಹೋಗಿರೋದು.ಒಂದು ಎರಡು ಅಲ್ಲ ಬೆಂಗಳೂರಿನಲ್ಲಿ ಸಮಸ್ಯೆ ಆಗ್ತಾ ಇರೋದು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆ.ಜೆ.ಚಾರ್ಜ್, ರಾಮಲಿಂಗರೆಡ್ಡಿ, ಪರಮೇಶ್ವರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದರು. ಈ ಮಟ್ಟಕ್ಕೆ ಬೆಂಗಳೂರು ಯಾವತ್ತು ಹೋಗಿರಲಿಲ್ಲ. ಎರಡು ವರ್ಷಗಳಲ್ಲಿ ಯಾರು ಸಹ ಜೀವನ ಮಾಡೋಕೆ ಆಗದ‌ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಟ್ರಾಫಿಕ್, ಹೆಬ್ಬಾಳ ಪ್ಲೈವರ್ ಇನ್ನೂರು ಮೀಟರ್ ಮಾಡೋಕೆ ಆಗಿಲ್ಲ. ಗುತ್ತಿಗೆದಾರ ಕೇಳಿದ್ರೆ ಹಣ ಇಲ್ಲ ಅಂತಾರೆ,ನಾವು ಕೆಲಸ ಮಾಡಿಲ್ಲ ಅಂತಾರೆ.ಏರ್ಪೋರ್ಟ್ ಗೆ ಹೋಗಬೇಕು ಅಂದ್ರೆ ಎರಡು ಗಂಟೆ ಆಗುತ್ತೆ. ಇದನ್ನು ಕೆಳೋರು ಯಾರು ಇಲ್ಲ. ಸರ್ಕಾರ ಇದೆ ಅಧಿಕಾರ ನಡೆಸ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ ಡಿಕೆಶಿವಕುಮಾರ್ ಬ್ರಾಂಡ್ ಬೆಂಗಳೂರು ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿದ ಮುನಿರತ್ನ ನಾವ್ಯಾರು ಬ್ರಾಂಡ್ ಬೆಂಗಳೂರು ಮಾಡಿಲ್ಲ. ಪ್ರಕೃತಿನೇ ನಮಗೆ ಬ್ರಾಂಡ್ ಬೆಂಗಳೂರು. ಪ್ರಕೃತಿ ಕೊಟ್ಟ ಬ್ರಾಂಡ್ ಬೆಂಗಳೂರಿಗೆ ನಾವು ಮೈಸೂರು ಸಂಸ್ಥಾನದವನರನ್ನ ನೆನಪು ಮಾಡಿಕೊಳ್ಳಬೇಕು. ನಮಗೆ,ಹೆಚ್ ಎ ಎಲ್ ಕೊಟ್ಟಿದ್ದಾರೆ, ಟಾಟಾ ಇನ್ಸ್ಟಿಟ್ಯೂಟ್ ಕೊಟ್ಟಿದ್ದಾರೆ. ಬಹಳಷ್ಟು ಸಂಸ್ಥೆಗಳನ್ನ ಕೊಟ್ಟಿದ್ದಾರೆ. ಇವತ್ತು ಬ್ರಾಂಡ್ ಬೆಂಗಳೂರು ಕೊಟ್ಟಿರೋದನ್ನ ಹಾಳು ಮಾಡ್ದೆ ಇದ್ರೆ ಸಾಕು. ವಿಧಾನಸೌಧವನ್ನ ಕೆಂಗಲ್ ಹನುಮಂತಯ್ಯ ಕೊಟ್ಟಿದ್ರು ಅವತ್ತೆ ಬ್ರಾಂಡ್ ಬೆಂಗಳೂರು ಆಗಿದೆ. ವಿಕಾಸಸೌಧ ಎಸ್ ಎಂ ಕೃಷ್ಣ ಕೊಟ್ಟಿದ್ರು ಅವತ್ತೆ ಬ್ರಾಂಡ್ ಬೆಂಗಳೂರು. ಇವತ್ತೇನು ಬ್ರಾಂಡ್ ಬೆಂಗಳೂರು ಅಲ್ಲ. ಇರುವ ಬ್ರಾಂಡ್ ಬೆಂಗಳೂರು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.

ಕಸದ ಶಾಶ್ವತವಾದ ಪರಿಹಾರ ಮಾಡೋಕೆ ಕೈ ಹಾಕ್ತಾ ಇಲ್ಲ. ಕಸದ ಸಮಸ್ಯೆಗಿಂದ ೪೦ ಸಾವಿರ ಕೋಟಿ ಟನಲ್ ದ್ದು ಎತ್ತಿ ಕೊಳ್ಳಬೇಕು. 15  ಸಾವಿರ ಕೋಟಿ ಎಲಿವೇಟೆಡ್ ಕಾರಿಡಾರ್ ಎತ್ತಿಕೊಳ್ಳಬೇಕು. ಬಪರ್ ಜೋನ್ 3 ಸಾವಿರ ಕೋಟಿ, ರಾಜಕಾಲುವೆಯಲ್ಲಿ  2 ಸಾವಿರ ಕೋಟಿ ಎತ್ತಿಕೊಳ್ಳಬೇಕು. ಬರಿ ಇಂಥತಹದರ‌ ಬಗ್ಗೆ ಇದೆ ಹೊರತು, ಕಸದ ಸಮಸ್ಯೆ ಬಗ್ಗೆ ,ಜನರ ಸಮಸ್ಯೆ ಕೇಳೋರೆ ಇಲ್ಲದಂತೆ ಆಗಿದೆ. ಬಸ್ ಶೆಲ್ಟರ್ಗಳಲ್ಲಿ ಅಂಗಡಿ ನಿರ್ಮಾಣ ಮಾಡ್ತಾರೆ . ನೋಟಿಸ್ ಕೊಟ್ರೆ ಬಿಬಿಎಂಪಿ ಅವರು ಕೋರ್ಟ್ನಲ್ಲಿ ತಡೆಯಾಜ್ಞೆ ಕೋಡೋಕೆ ಸಹಕರಿಸ್ತಾರೆ. ಇದು ಬ್ರಾಂಡ್ ಬೆಂಗಳೂರು. ಸಂಪೂರ್ಣವಾಗಿ ಬೆಂಗಳೂರು ಉಸ್ತುವಾರಿ ಸಚಿವರು ಜವಾಬ್ದಾರಿ ಹೊರಬೇಕು. ಬೆಂಗಳೂರು ಸಚಿವರೇ ಜವಾಬ್ದಾರಿ ನೇರ ಹೊಣೆ ಅದರಲ್ಲಿ ಏನು ಅನುಮಾನ ಇಲ್ಲ ಎಂದು ಡಿಸಿಎಂ ಡಿಕೆಶಿ ವಿರುದ್ಧ ಮುನಿರತ್ನ ಕಿಡಿಕಾರಿದ್ದಾರೆ.