ಮನೆ Latest News ಮುನಿರತ್ನ ವಿರುದ್ಧ ಡಿ ಕೆ ಶಿವಕುಮಾರ್ ಚೆಂಗ್ಲು ಎಂಬ ಪದ ಬಳಕೆ ವಿಚಾರ; :...

ಮುನಿರತ್ನ ವಿರುದ್ಧ ಡಿ ಕೆ ಶಿವಕುಮಾರ್ ಚೆಂಗ್ಲು ಎಂಬ ಪದ ಬಳಕೆ ವಿಚಾರ; : ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಿರುಗೇಟು

0

ಬೆಂಗಳೂರು: ಮುನಿರತ್ನ ವಿರುದ್ಧ ಡಿ ಕೆ ಶಿವಕುಮಾರ್  ಚೆಂಗ್ಲು ಎಂಬ ಪದ ಬಳಕೆ ವಿಚಾರಕ್ಕೆ ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮುನಿರತ್ನ ಬಗ್ಗೆ ಅವನು ಯಾವನೋ ಒಬ್ಬ ಚೆಂಗ್ಲು ಎಂಬ ಪದ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜರಾಜೇಶ್ವರಿ ಕೃಪೆಯಿಂದ ನಾನೊಬ್ಬ ಶಾಸಕ. ನಾನು‌ ರಾಜ್ಯಪಾಲರಿಗೆ ದೂರು ಕೊಟ್ಟಿದ್ದು ರಾಜಕಾಲುವೆ ವಿಚಾರದಲ್ಲಿ 300-400 ಕೋಟಿ ಭ್ರಷ್ಟಾಚಾರದ ಬಗ್ಗೆ ನಾನು ಕೊಟ್ಟಿರುವ ದೂರು ಸತ್ಯಕ್ಕೆ ದೂರ ಅಂತಾ ಮಾತ್ರ ಹೇಳಲಿ. ಅದು ಬಿಟ್ಟು ಚೆಂಗ್ಲು ಎಂದು ಹೇಳಿದ್ದಾರೆ. ನಾನು‌ ಕೊಟ್ಟಿರುವ ದೂರಿಗೆ ಈಗಲೂ ಬದ್ಧನಾಗಿದ್ದೇನೆ. ಬೆಂಗಳೂರು ನಗರ ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ರಾಜ ಕಾಲುವೆಗಳ ತಡೆಗೋಡೆ ಪುನರ್ ನಿರ್ಮಾಣ ಮಾಡಲು ಪ್ರಕೃತಿ ವಿಕೋಪದ ಹೆಸರಿನಲ್ಲಿ ಸಾಲ ತಂದಿದ್ದಾರೆ.ವಿಶ್ವ ಬ್ಯಾಂಕ್ ಗೆ ಸುಳ್ಳು ಹೇಳಿ ಸಾಲ ತಂದಿದ್ದಾರೆ. ಟೆಂಡರ್ ತೆರೆಯುವ ಮೊದಲೇ ನಾನು ದೂರು ಕೊಟ್ಟಿದ್ದೆ.ನಾನು ದೂರಿನಲ್ಲಿ ಯಾವ ಹೆಸರು ಹೇಳಿದ್ದೆನೋ ಅವರು ಮಾತ್ರ ಟೆಂಡರ್ ನಲ್ಲಿ ಭಾಗವಹಿಸಿದ್ದಾರೆ ಎಂದರು.

ಮಹದೇವಪುರದ ಕಾಮಗಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಟೆಂಡರ್ ಆಗಿದೆ.ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಬಿಎಸ್ ಆರ್ ಕನ್ ಸ್ಟ್ರಕ್ಷನ್ ಕಂಪನಿಗೆ ಟೆಂಡರ್ ಆಗಿದೆ. ಗುತ್ತಿಗೆದಾರರಿಂದ ಜಾಸ್ತಿ ಪರ್ಸಂಟೇಜ್ ಕೇಳಿದಾಗ ಈ ವಿಷಯ ಹೊರಗೆ ಬಂದಿದೆ. ಅದನ್ನು ನಾನು ರಾಜ್ಯಪಾಲರ ಗಮನಕ್ಕೆ ತಂದಿದ್ದೇನೆ. ಚೆಂಗ್ಲು ಎನ್ನಲು ನಾನೇನು ತಪ್ಪು ಮಾಡಿದ್ದೇನೆ?.ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತನಾಗಿ ನಾನು ಇದ್ದೇನೆ ಎಂದು ವಾಗ್ದಾಳಿ ನಡೆಸಿದ್ರು.

ನಿಜವಾದ ಚೆಂಗ್ಲು ಯಾರು ಅಂದರೆ ಅದು ಡಿ.ಕೆ. ಶಿವಕುಮಾರ್. ಯಾಕೆಂದರೆ ಅವರಲ್ಲಿ ಥಟ್ ಥಟ್ ಅಂತಾ ಬದಲಾವಣೆ ಆಗುತ್ತದೆ. ಕಾಂಗ್ರೆಸ್ ನಲ್ಲಿ ಡಿಸಿಎಂ, ಅಮಿತ್ ಷಾ ಜೊತೆ ಭೇಟಿ ಮಾಡುವುದು, ಪ್ರಯಾಗ್ ರಾಜ್ ಗೆ ಹೋಗುವುದು, ವಿಭೂತಿ ಬಳಿದುಕೊಳ್ಳುವುದು ಮಾಡುತ್ತಾರೆ. ಪ್ರಧಾನಿ ಬಂದಾಗ ಡಿ.ಕೆ. ಶಿವಕುಮಾರ್ ಬೊಕೆ ಹಿಡಿದುಕೊಂಡು ಸಾಲಿನಲ್ಲಿ ಕಾರ್ಯಕರ್ತರ ರೀತಿ ನಿಲ್ಲುತ್ತಾರೆ. ಇವರ ಎರಡು ವರ್ಷದ ಸಾಧನೆ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಿ. ಮೊನ್ನೆ ಆರ್ ಆರ್ ನಗರದಲ್ಲಿ ತೇಪೆ ಹಾಕುವ ಕೆಲಸಕ್ಕೆ ಡಿಸಿಎಂ ಬಂದು ಗುದ್ದಲಿ ಪೂಜೆ ಮಾಡಿದ್ದಾರೆ. ಕೌನ್ಸಿಲರ್ ಆಗುವ ಆಸೆಯಿಂದ ಕೆಲವರು ಫ್ಲೆಕ್ಸ್ ‌ಕಟ್ಟಿ ಕಟ್ಟಿ ಸುಸ್ತಾಗಿದ್ದಾರೆ. ಆರ್ ಆರ್ ನಗರದಲ್ಲಿ ಈಗ ಶೋಲೆ ಸಿನಿಮಾದ ರೀತಿ 70 ಎಂ ಎಂ ಫ್ಲೆಕ್ಸ್ ಓಡುತ್ತಿದೆ. ಒಬ್ಬರು ಗಬ್ಬರ್ ಸಿಂಗ್, ಒಬ್ಬರು ಅಮಿತಾಭ್ ಬಚ್ಚನ್ ತರ ಇದ್ದಾರೆ. ಇನ್ನೊಬ್ಬರು ಹೇಮಾ ಮಾಲಿನಿ ತರಹವೇ ಕಾಣುತ್ತಾರೆ ಎಂದರು.

ನಿಂತು ಹೋಗಿರುವ ಕಾಮಗಾರಿ ಗಮನ ಹರಿಸಿ ಎಂದರೆ ಟನಲ್ ಮಾಡುತ್ತಾರಂತೆ. ಗುಂಡಿ ಮುಚ್ಚಲು ದುಡ್ಡಿಲ್ಲ, ಟನಲ್ ರೋಡ್ ಗೆ ಒಂದು ಲಕ್ಷ ಕೋಟಿ. ರಾಜಕಾಲುವೆಗೆ ಸಂಬಂಧ ಪಟ್ಟಂತೆ ದಾಖಲೆ ಸಂಗ್ರಹ ಮಾಡುತ್ತಿದ್ದೇನೆ. ದಾಖಲೆ ಸಿಕ್ಕಿದ ಕೂಡಲೇ ರಾಜ್ಯಪಾಲರಿಗೆ ಕೊಟ್ಟು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳುತ್ತೇನೆ. ಬೆಂಗಳೂರು ನಗರದ ದುಡ್ಡು ಆಂಧ್ರ ಗುತ್ತಿಗೆದಾರರಿಗೆ ಹೋಗಲು ಬಿಡುವ ಪ್ರಶ್ನೆಯೇ ಇಲ್ಲ.ನಿಮ್ಮ ಹಣದ ವ್ಯಾಮೋಹಕ್ಕೆ ಪರ ರಾಜ್ಯದ ಗುತ್ತಿಗೆದಾರರನ್ನು ಕರೆ ತಂದು ಬೆಳೆಸುವ ಕೆಲಸ ಬೇಡ ಎಂದು ಆಕ್ರೋಶ ಹೊರ ಹಾಕಿದ್ರು.

ಜಾವಾ, ಲ್ಯಾಂಬ್ರೆಟ್ಟಾ ಸ್ಕೂಟರ್ ಇದ್ದಾಗ 21 ನೇ ವಯಸ್ಸಿನಿಂದ ನನ್ನ ಮತ್ತು ಡಿ.ಕೆ. ಶಿವಕುಮಾರ್ ಸ್ನೇಹ ಇದೆ. ಸಿಎಂ ಆಗಲು ಬಯಸುವವರು ಸಣ್ಣತನ ಬಿಡಲಿ. ನನಗೆ ಮಾಡಿದ ಪಾಪ ಕೃತ್ಯ ಇನ್ಯಾರಿಗೂ ಮಾಡುವುದು ಬೇಡ. ಡಿ.ಕೆ. ಶಿವಕುಮಾರ್ ಅವರೇ ನಿಮಗೂ ಕುಟುಂಬ ಇದೆ. ನಿಮ್ಮ ಕುಟುಂಬ ಕರೆದುಕೊಂಡು ಬನ್ನಿ, ನಾನೂ ಕರೆದುಕೊಂಡು ಬರುತ್ತೇನೆ. ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಮಾಣ ಮಾಡೋಣ.ನನ್ನ ತೇಜೋವಧೆ ಮಾಡಿ ನೀವು ಏನು ಸಾಧಿಸುತ್ತೀರಿ. ಇಂದು ನನಗೆ ಮಾಡಿದ್ದನ್ನು ನಾಳೆ ನಿಮ್ಮ ಕುಟುಂಬಕ್ಕೆ ಮಾಡುತ್ತಾರೆ ಅನ್ನೋದು ಮರೆಯಬೇಡಿ.ನಾಳೆ ನೀವು ಮರೆಯಾದ ದಿನದ ಬಳಿಕ ಆದರೂ ಯಾರಾದರೂ ಹೇಳಿಯೇ ಹೇಳುತ್ತಾರೆ. ಯಾಕೆ ಬೇಕು ಈ ರೀತಿ ದ್ವೇಷ?. ಈಗಾಗಲೇ ನಿಮಗೆ 64 ವರ್ಷ ಆಗಿದೆ. ಅರ್ಧ ಕಿಡ್ನಿ ಈಗಾಗಲೇ ಹೋಗಿರುತ್ತದೆ, ನನಗೂ ಹೋಗಿರುತ್ತದೆ. ಮಾತ್ರೆ ತಿನ್ನದೇ ನೀವೂ ಬದುಕಲ್ಲ, ನಾನೂ ಬದುಕಲ್ಲ. ಯಾಕೆ ಬೇಕು ಇದೆಲ್ಲಾ ನಿಮಗೆ?ಡಿ.ಕೆ. ಶಿವಕುಮಾರ್ ಗೆ ಬರೆದಿರುವ ಹಣೆ ಬರಹ ಬಿಲ್ ಗೇಟ್ಸ್, ಬಿಲ್ ಕ್ಲಿಂಟನ್, ಅಂಬಾನಿ, ಅದಾನಿ ಅವರಿಗೂ ಬರೆದಿಲ್ಲ. ನೀವು ಅತ್ಯಾಚಾರ ಕೇಸ್ ಹಾಕಿಸಲು ಎಲ್ಲೆಲ್ಲಿ ಹೋಗಿದ್ದೀರಿ, ಯಾರ್ಯಾರನ್ನು ಭೇಟಿ ಮಾಡಿದ್ದೀರಿ ಅಂತಾ ಗೊತ್ತಿದೆ ಎಂದ್ರು.

ಡಿ.ಕೆ.‌ ಶಿವಕುಮಾರ್ ಅವರೇ 40 ವರ್ಷದ ರಾಜಕಾರಣ ಅಂತೆ. 40 ಜನ ಶಾಸಕರು ಇಲ್ಲ ನಿಮ್ಮ ಜೊತೆ .ನನ್ನ ಪ್ರಕರಣದಲ್ಲಿ ರಾಜ್ಯಾಧ್ಯಕ್ಷರು, ಪಕ್ಷ, ಅಶೋಕ್ ಅವರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದ್ದಾರೆ ಎಂದ ಅವರು ಮುನಿರತ್ನ ಬಗ್ಗೆ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸೋಮಶೇಖರ್ ನನ್ನ ಆತ್ಮೀಯ ಸ್ನೇಹಿತರು. ಸೋಮಶೇಖರ್ ಮೋದಿಗಿಂತ ಚಿಕ್ಕವರು, ಅಮಿತ್ ಷಾ ಗಿಂತ ದೊಡ್ಡವರು. ಅವರ ಬಗ್ಗೆ ನಾನು ಏನೂ ಮಾತಾಡಲ್ಲ ಎಂದರು.