ಬೆಂಗಳೂರು: ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಆಗಿ ಎಸ್ ಐಟಿ ಕಸ್ಟಡಿಯಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲ ಅನ್ಸುತ್ತೆ. ಇಂದು ಮುನಿರತ್ನ ಅವರ ವಿರುದ್ಧ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಇಂದು ಮುನಿರತ್ನ ಅವರ ಎಸ್ ಐಟಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಮುನಿರತ್ನಗೆ ಅಕ್ಟೋಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಇನ್ನು ವಿಚಾರಣೆ ವೇಳೆ ಮುನಿರತ್ನ ಪರ ವಕೀಲರು ಮುನಿರತ್ನ ಅವರಿಗೆ ಮನೆ ಊಟ ನೀಡಲು ಅವಕಾಶ ಕೊಡುವಂತೆ ಮನವಿ ಮಾಡಿದ್ರು. ಆಗ ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸೂಚಿಸಿದ್ದಾರೆ. ಅಲ್ಲಿ ಅನುಮತಿ ನೀಡದಿದ್ದರೆ, ಕೋರ್ಟ್ ನಲ್ಲಿ ಅರ್ಜಿ ಹಾಕಿ ಎಂದು ಹೇಳಿದ್ದಾರೆ.
ತನ್ನ ವಿರುದ್ಧ ದೂರು ನೀಡಿದ ಮಹಿಳೆ ನನಗೆ ತುಂಬಾ ಪರಿಚಿತೆ; ವಿಚಾರಣೆ ವೇಳೆ ಶಾಸಕ ಮುನಿರತ್ನ ಸ್ಫೋಟಕ ಹೇಳಿಕೆ
ಬೆಂಗಳೂರು : ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ನಿನ್ನೆ ರಾಮನಗರದ ಕಗ್ಗಲೀಪುರ ಪೊಲೀಸರಿಂದ ಅರೆಸ್ಟ್ ಆಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಹಾಗಾಗಿ ಮತ್ತೆ ಮುನಿರತ್ನ ಜೈಲು ಹಕ್ಕಿಯಾಗಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮನ್ನು ವಿಚಾರಣೆ ನಡೆಸುವ ವೇಳೆ ಶಾಸಕ ಮುನಿರತ್ನ ಹಲವು ಸ್ಫೋಟಕ ಮಾಹಿತಿಯನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಶಾಸಕ ಮುನಿರತ್ನ ಅವರು ಹನಿಟ್ರ್ಯಾಪ್ ಗಾಗಿ ಹೆಚ್ ಐವಿ ಸೋಂಕಿತರನ್ನು ಬಳಸಿಕೊಳ್ಳುತ್ತಿದ್ದರು ಎಂದು ಮಹಿಳೆ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಮುನಿರತ್ನ ತನಿಖೆ ವೇಳೆ ಉತ್ತರ ಕೊಟ್ಟಿದ್ದಾರೆ.
ದೂರು ಕೊಟ್ಟ ಮಹಿಳೆ ನನಗೆ ತುಂಬಾ ಚೆನ್ನಾಗಿ ಪರಿಚಯ. ಹನಿಟ್ರ್ಯಾಪ್ ಮಾಡೋದೆ ಆಕೆಯ ಕಾಯಕ. ನನಗೂ ಆಕೆಯೇ ನಿಮಗೆ ಯಾರ ವೀಡಿಯೋ ಬೇಕು, ನಿಮ್ಮ ಶತ್ರುಗಳು ಯಾರಿದ್ದಾರೆ ಅವರ ವೀಡಿಯೋ ಮಾಡಿ ಕೊಡುತ್ತೇನೆ ಎಂದು ಆಫರ್ ಕೊಟ್ಟಿದ್ದಳು ಎಂದು ಮುನಿರತ್ನ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ನನಗೆ ಆಗಾಗ್ಗೆ ಇಂತಹ ವೀಡಿಯೋಗಳನ್ನು ತಂದು ತೋರಿಸುತ್ತಿದ್ದಳು ಎಂದು ಮುನಿರತ್ನ ಹೇಳಿದ್ದಾರೆ. ಆದರೆ ನಾನು ಆಕೆಯಿಂದ ಯಾವುದೇ ಹನಿಟ್ರ್ಯಾಪ್ ವೀಡಿಯೋಗಳನ್ನು ಮಾಡಿಸಿಲ್ಲ. ಆಕೆ ನನ್ನ ಮೇಲೆ ಮಾಡಿರುವ ಆರೋಪಗಳು ಎಲ್ಲಾ ಸುಳ್ಳು ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆ.