ತಿರುಪತಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿರುವ ಕರ್ನಾಟಕದ ಭಕ್ತರಿಗೆ ಅಗತ್ಯ ನೆರವು ನೀಡಲು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಸೂಚನೆ ನೀಡಿದ್ದಾರೆ.
ಕಾಲ್ತುಳಿತದ ಬಗ್ಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅಲ್ಲಿನ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ.ಅಲ್ಲಿನ ಕರ್ನಾಟಕ ರಾಜ್ಯದ ಎಂಡೋಮೆಂಟ್ ಆಫೀಸರ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಭವನದ ಛತ್ರದಲ್ಲಿ ಭಕ್ತಾದಿಗಳಿಗೆ ಸ್ನಾನ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲು ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.ಅಲ್ಲಿ ತಕ್ಷಣಕ್ಕೆ ಬೇಕಾಗುವ ಅಗತ್ಯ ಕ್ರಮಕ್ಕೆ ಸ್ಪಂದಿಸುವಂತೆ ಸ್ಥಳೀಯ ಆಫೀಸರ್ ಗೆ ರಾಮಲಿಂಗರೆಡ್ಡಿ ಸೂಚನೆ ಕೊಟಿದ್ದಾರೆ. ಭಕ್ತರಿಗೆ ಅಗತ್ಯ ಸಹಾಯ ಮಾಡಲು ಎಲ್ಲಾ ಕ್ರಮಗಳನ್ನು ಮುಜರಾಯಿ ಇಲಾಖೆಯಿಂದ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಇಲ್ಲಿಯ ತನಕ ಕರ್ನಾಟಕದ ಯಾವ ಭಕ್ತಾದಿಗಳಿಗೂ ತೊಂದರೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಕರ್ನಾಟಕದ ಯಾವ ಭಕ್ತಾದಿಗೂ ತೊಂದರೆ ಆಗಿಲ್ಲ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.