ಮೈಸೂರು: ತಮ್ಮ ವಿರುದ್ಧದ ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮೈಸೂರಿನಲ್ಲಿ ಹೆಚ್.ಡಿ ಕೆ ವಿರುದ್ದ ಸಚಿವರಿಂದ ಡಿನೋಟಿಫಿಕೇಷನ್ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮಿಸ್ಟರ್ ಕೃಷ್ಣ ಭೈರೇಗೌಡ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡಬೇಡಿ.ನೀನೇನು ಸತ್ಯ ಹರಿಶ್ಚಂದ್ರನಾ ಕಂದಾಯ ಇಲಾಖೆಯಲ್ಲಿ ಏನೇನು ಮಾಡಿದ್ಯಾ ಅಂತಾ ನನಗೆ ಗೊತ್ತಿದೆ.ನೀವು ಏನೇ ಮಾಡಿದರು ನನ್ನದು ಏನೂ ಸಿಗುವುದಿಲ್ಲ. ಕೃಷ್ಣ ಭೈರೇಗೌಡ ಫಾರಿನ್ ನಲ್ಲಿ ಓದಿದವನು ಬಹಳ ಮೇಧಾವಿ ಎಂದುಕೊಂಡಿದ್ದಾನೆ.ಆದರ ಕೃಷ್ಣ ಭೈರೇಗೌಡ ಹೆಬ್ಬೆಟ್ಟು ಎಂದುಕೊಂಡಿರಲಿಲ್ಲ.ಯಾವನೋ ಏನೋ ಬರೆದು ಕೊಟ್ಟ.ಅದನ್ನ ಇವರು ತಂದು ಓದಿದ್ದಾರೆ ಎಂದು ಕೃಷ್ಣ ಭೈರೇಗೌಡ ವಿರುದ್ಧ ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಾನು ಎಲ್ಲೂ ಕದ್ದು ಓಡಿ ಹೋಗಲ್ಲ.ನನ್ನ ರಕ್ಷಣೆ ಮಾಡಿ ಎಂದು ಯಾರ ಮುಂದೆಯೂ ಗೋಗರೆಯುವುದಿಲ್ಲ.ಗೋಗರೆಯುವ ಕೆಲಸವನ್ನ ನಾನು ಮಾಡಿಲ್ಲ.ನಾನು ಯಾವ ಹಲ್ಕಾ ಕೆಲಸಗಳನ್ನ ಮಾಡಿಲ್ಲ.ಡಿನೋಟಿಫಿಕೇಷನ್ ಆಗಿದೆ, ಅದನ್ನ ನಾನು ಮಾಡಿದ್ದೇನಾ? ಆ ಜಮೀನು ತೆಗೆದುಕೊಂಡಿರುವುದು ನನ್ನ ಪತ್ನಿಯ ಅತ್ತೆ. ನನಗೂ ಅವರಿಗೆ ಸಂಬಂಧ ಇಲ್ಲ ಎಂದು ಸಿಎಂ ರೀತಿ ಹೇಳುವುದಿಲ್ಲ. ನನ್ನ ಉಳಿಸಿ ಎಂದು ಕೈ ಕಟ್ಟುವ ಪರಿಸ್ಥಿತಿ ಬಂದರೇ ನಾನು 5 ಸೆಕೆಂಡ್ ರಾಜಕಾರಣದಲ್ಲಿ ಇರುವುದಿಲ್ಲ ಎಂದಿದ್ದಾರೆ.
2015 ರಲ್ಲೇ ಕೇಸ್ ಆಗಿತ್ತು.ಆ ನಂತರ ತನಿಖೆ ಮಾಡಿ ಬಿ ರಿಪೋರ್ಟ್ ಸಹ ಹಾಕಿದ್ದಾರೆ.ಈಗ ಅದಕ್ಕೆ ಜೀವ ಕೊಡಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ.ನಾನೇ ಆ ಫೈಲ್ ನ ನನ್ನ ಅವಧಿಯಲ್ಲಿ ರೆಜೆಕ್ಟ್ ಮಾಡಿದ್ದೇನೆ.ನನಗೂ ಯಡಿಯೂರಪ್ಪನವರಿಗು ರಾಜಕೀಯ ಸಂಘರ್ಷ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ.ಅವತ್ತು ಅವರೇಕೆ ನನಗೆ ಸಹಾಯ ಮಾಡುತ್ತಾರೆ.ಕಳೆದ ಮೂರು ತಿಂಗಳಿನಿಂದಲೂ ಈ ಸರ್ಕಾರ ನನ್ನ ವಿರುದ್ಧ ದಾಖಲೆ ಹುಡುಕಿಸುತ್ತಿದೆ. ಯಾವುದು ಸಿಗದ ಕಾರಣ ಹಳೇ ಕೇಸ್ ಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇನ್ನು ಸದ್ಯದ ಬೆಳವಣಿಗೆ ಅಸಹ್ಯ ಮೂಡಿಸಿದೆ.ಯಾರೋ ಬೀದಿಯಲ್ಲಿ ಹೋಗುವವರು ದೂರು ನೀಡಿದರು ದಾಖಲಿಸುತ್ತಿದ್ದಾರೆ. ಬೀದಿಯಲ್ಲಿ ಹೋಗುವವರು ಕೈ ಎಳೆದರು ಅಂದರು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಅಸಹ್ಯ ತರಿಸುತ್ತಿದೆ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಪ್ರಕರಣ ದಾಖಲಿಸಿದಕ್ಕೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಗುಪ್ತಚರ ಇಲಾಖೆಯ ಸಿಬ್ಬಂದಿ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.ಶೋಭಾ ಕರಂದ್ಲಾಜೆ ಪ್ರಚೋದನೆಯಿಂದ ಗಲಾಟೆ ಅಂತಾ ವರದಿ ಮಾಡಲಾಗಿದೆ.ಈ ರೀತಿ ವರದಿ ಕೊಟ್ಟವನಿಗೆ ಗಲಾಟೆ ಆಗುವುದು ಗೊತ್ತಿರಲಿಲ್ಲವಾ ? ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.