ಮನೆ ಪ್ರಸ್ತುತ ವಿದ್ಯಮಾನ ಬೆಂಗಳೂರಿನಲ್ಲಿ ಮರ್ಡರ್ ಮೈಸೂರಿನಲ್ಲಿ ಅರೆಸ್ಟ್!; ಹೇಗಿತ್ತು ನಟ ದರ್ಶನ್ ಬಂಧನ ಪ್ರಕ್ರಿಯೆ?

ಬೆಂಗಳೂರಿನಲ್ಲಿ ಮರ್ಡರ್ ಮೈಸೂರಿನಲ್ಲಿ ಅರೆಸ್ಟ್!; ಹೇಗಿತ್ತು ನಟ ದರ್ಶನ್ ಬಂಧನ ಪ್ರಕ್ರಿಯೆ?

0

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು ಮೈಸೂರಿನಲ್ಲಿ. ಇಂದು ಬೆಳಗ್ಗೆ ಮೈಸೂರಿನ ಕುವೆಂಪು ನಗರದ ಗೋಲ್ಡ್ ಜಿಮ್ ನಲ್ಲಿ ವರ್ಕೌಟ್ ಮುಗಿಸಿ ಹೊರ ಬಂದಿದ್ದ ದರ್ಶನ್ ರನ್ನು ನೇರವಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇಂದು ಬೆಳಗ್ಗೆ 6.30 ಕ್ಕೆ ಜಿಮ್‌ಗೆ ತೆರಳಿದ್ದ ದರ್ಶನ್, 8.30ರ ವೇಳೆಗೆ ವರ್ಕೌಟ್ ಮುಗಿಸಿ ತಾವು ಉಳಿದುಕೊಂಡಿದ್ದ ಹೋಟೆಲ್ ಬಳಿ ಬರುತ್ತಿದ್ದಂತೆಯೇ ಪೊಲೀಸರ ವಶಕ್ಕೊಳಗಾಗಿದ್ದಾರೆ.

ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಲ್ಲಿ ದರ್ಶನ್ ಅಭಿನಯದ ಡೇವಿಲ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದ ವತಿಯಿಂದಲೇ ದರ್ಶನ್ ಗೆ ರ‌್ಯಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು.‌ ಜೂನ್ 9 ರಿಂದಲೇ ದರ್ಶನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.

ತಮ್ಮ ಕೆಎ 01 ಎಂವೈ 7999 ನೋಂದಣಿ ಸಂಖ್ಯೆಯ ರೇಂಜ್ ರೋವರ್ ಡಿಫೆಂಡರ್ ಕಾರಿನಲ್ಲಿ ರ‌್ಯಾಡಿಸನ್ ಬ್ಲ್ಯೂ ಹೋಟೆಲ್ ಗೆ ದರ್ಶನ್ ಬಂದಿದ್ದು, ಕಾರು ಇನ್ನೂ ಹೋಟೆಲ್ ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲ್ಪಟ್ಟಿದೆ. ಅರೆಸ್ಟ್ ಮಾಡಿದ ಬಳಿಕ ಪೊಲೀಸರು ತಮ್ಮ ಜೀಪ್ ನಲ್ಲೇ ದರ್ಶನ್ ರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಈ ಮಧ್ಯೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ದರ್ಶನ್ ಕರೆಯ ಹಿನ್ನೆಲೆಯಲ್ಲಿ ಹತ್ಯೆಗೊಳಗಾದ ರೇಣುಕಾಸ್ವಾಮಿಯನ್ನು ರಘು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಹೇಳಲಾಗಿದೆ