ಬೆಂಗಳೂರು; ಹನಿ ಟ್ರ್ಯಾಪ್ ಪಿತಾಮಹ ನರೇಂದ್ರ ಮೋದಿ ಎಂದು ವಿಧಾನ ಪರಿಷತ್ ನಲ್ಲಿ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
RSS ಬಗ್ಗೆ ಪುಸ್ತಕ ಇದೆ. ಅಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ ಅಂತಾ ಹರಿಪ್ರಸಾದ್ ಹೇಳಿದ್ದಾರೆ. ಈ ವೇಳೆ ಯಾರಪ್ಪನ ಮನೆಯಲ್ಲೂ ನಡೆದಿಲ್ಲ ಎಂದು ಸದಸ್ಯ ಕಿಶೋರ್ ಕುಮಾರ್ ಹೇಳಿದ್ದಾರೆ. ಕಿಶೋರ್ ಕುಮಾರ್ ಪದಕ್ಕೆ ಬಿ ಕೆ ಹರಿಪ್ರಸಾದ್ ಕೋಪಗೊಂಡಿದ್ದಾರೆ. ಕಿಶೋರ್ ಕುಮಾರ್ ಗೆ ಸೂಚನೆ ನೀಡಿ ಆ ರೀತಿ ಮಾತಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಯಲ್ಲಿ RSS ಬಗ್ಗೆ ಮಾತನಾಡದಂತೆ ಹರಿಪ್ರಸಾದ್‌ಗೆ ಸಭಾಪತಿ ಎಚ್ಚರಿಸಿದ್ದಾರೆ. ಈ ವೇಳೆ ಹರಿಪ್ರಸಾದ್ ಎದ್ದು ನಿಂತು ಹನಿ ಟ್ರಾಪ್ ಪಿತಾಮಹ ನರೇಂದ್ರ ಮೋದಿ..ಸಂಜಯ್ ಜೋಶಿ ಅವರ ಹನಿಟ್ರಾಪ್ ಮಾಡಿದ್ದು ನರೇಂದ್ರ ಮೋದಿ. ಎಂದು ಪ್ರಸಾದ್.ಸದನದಲ್ಲಿ ಮೋದಿ ಹೆಸರು ಹರಿಪ್ರಸಾದ್ ಎಳೆದು ತಂದಿದ್ದಾರೆ.
ಸಚಿವ ಸಂಪುಟ ಸದಸ್ಯರು ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ ಶಾಸಕ ಸುನೀಲ್ ಕುಮಾರ್
ಬೆಂಗಳೂರು; ಸಚಿವ ಸಂಪುಟ ಸದಸ್ಯರು ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಯಾಕೆ ಎಂದು ಶಾಸಕ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಮೇಲ್ಮನೆ ಸದಸ್ಯರೊಬ್ಬರು ಕೂಡಾ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಸಿಎಂ ಉತ್ತರ ಕೊಡಬೇಕು. ಸಚಿವ ಸಂಪುಟ ಸದಸ್ಯರು ಆರೋಪ ಮಾಡಿದ್ದಾರೆ. ಯಾರು ಮಾಡಿದ್ದಾರೆ, ಏನು ಕ್ರಮ ಕೈಗೊಂಡಿದ್ದೀರಿ ಎಂದು ನೀವು ಮೊದಲು ಉತ್ತರ ಕೊಡಬೇಕು. ನಿಮ್ಮ ಸಂಪುಟ ಸದಸ್ಯರದ್ದೇ ಕೈವಾಡ ಇದ್ದರೆ ಮೊದಲು ಅವರನ್ನು ವಜಾ ಮಾಡಿ ನಂತರ ಬಜೆಟ್ ಉತ್ತರ ಕೊಡಿ. ಸಚಿವ ಸಂಪುಟ, ಸಿಎಂಗೆ ನೈತಿಕತೆ ಇಲ್ಲವೇ?. ಮೊದಲು ಇದಕ್ಕೆ ಉತ್ತರ ಕೊಡಿ, ನಂತರ ಬಜೆಟ್ ಗೆ ಬನ್ನಿ ಎಂದಿದ್ದಾರೆ.
ನಾಳೆ ನಿಮ್ಮ ಕುರ್ಚಿಗೂ ಧಕ್ಕೆ ಬರುತ್ತದೆ, ಇನ್ನೊಬ್ಬರ ಕುರ್ಚಿಗೂ ಧಕ್ಕೆ ಬರುತ್ತದೆ. ನೀವು ಇವತ್ತು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಸಿಎಂಗೆ ಶಾಸಕ ಸುನೀಲ್ ಕುಮಾರ್ ಒತ್ತಾಯ. ಮಾಡಿದ್ದಾರೆ. ಈಗಾಗಲೇ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ, ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ. ಆಗ ಸಿಎಂ ಮೊದಲು ಉತ್ತರ ಕೊಡಬೇಕು ಎಂದು ಶಾಸಕರಾದ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಮತ್ತು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಕೇಂದ್ರದ ನಾಯಕರು ಕೂಡಾ ಇದ್ದಾರೆ ಅಂತಾ ರಾಜಣ್ಣ ಹೇಳಿದ್ದಾರೆ. ಕೇಂದ್ರದ ನಾಯಕರು ಅಂದರೆ ಕಾಂಗ್ರೆಸ್ ನವರಾ ಬಿಜೆಪಿಯವರಾ?. ಸಿಎಂ ಪದವಿಗೋಸ್ಕರ, ಇನ್ನೊಂದು ಪದವಿಗೋಸ್ಕರ ಎಲ್ಲರನ್ನೂ ಧ್ವಂಸ ಮಾಡಿ ಹಾಕುತ್ತಾರೆ ಅಂದರೆ ಹೇಗೆ?. ಜಡ್ಜ್ ಗಳು ಕೂಡಾ ಇದ್ದಾರೆ ಅಂತಾ ಮಾಧ್ಯಮದಲ್ಲಿ ಬಂದಿದೆ ಎಂದು ಹೇಳಿದ್ದಾರೆ.ಆಗ ಅಶೋಕ್ ಮಾತಿಗೆ ಸಚಿವ ದಿನೇಶ್ ಗುಂಡೂರಾವ್ ವಿರೋಧ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಆಗಬೇಕು ಅಂತಾ ಕೂಡಾ ಇರಬಹುದು, ಸದನದಲ್ಲಿ ಊಹಾಪೋಹ ಮಾತಾಡುವುದು ಬೇಡ ಎಂದು ದಿನೇಶ್ ಗುಂಡೂರಾವ್.ಹೇಳಿದ್ದಾರೆ.











