ಮನೆ Latest News ನಮಗೆ ಬರಬೇಕಿರುವ ಪಾಲಲ್ಲಿ ಪದೇಪದೇ ಮೋದಿ ಮೋಸ ಮಾಡ್ತಿದ್ದಾರೆ: ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ನಮಗೆ ಬರಬೇಕಿರುವ ಪಾಲಲ್ಲಿ ಪದೇಪದೇ ಮೋದಿ ಮೋಸ ಮಾಡ್ತಿದ್ದಾರೆ: ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ನಮಗೆ ಬರಬೇಕಿರುವ ಪಾಲಲ್ಲಿ ಪದೇಪದೇ ಮೋದಿ ಮೋಸ ಮಾಡ್ತಿದ್ದಾರೆ ಎಂದು ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಪದೆಪದೇ ಹೇಳ್ತಿದ್ದೇವೆ, ಕೇಂದ್ರಕ್ಕೆ ಕನ್ನಡಿಗರ ದುಡಿಮೆ‌ ಬೇಕು, ಬೆವರು ಬೇಕು, ತೆರಿಗೆ ಬೇಕು. ಆದರೆ ನಮಗೆ ಬರಬೇಕಿರುವ ಪಾಲಲ್ಲಿ ಪದೇಪದe ಮೋದಿ ಮೋಸ ಮಾಡ್ತಿದ್ದಾರೆ.ಫೈನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಎರಡು ಬಾರಿ ಕರ್ನಾಟಕದಿಂದಲೇ ಆಯ್ಕೆ ಆಗಿರೋದು. ಅವರು ಆ ಋಣವನ್ನಾದರೂ ತೀರಿಸಬೇಕಲ್ವಾ. ಯಾಕೆ ತೆರಿಗೆ ಪಾಲು ಹೆಚ್ಚು ಬೇಕಾಗುತ್ತೆ ಎಂದರೆ, ನಾವು ಉತ್ತಮ ಮೂಲ ಸೌಕರ್ಯ ಒಗಿಸುತ್ತಿದ್ದೇವೆ. ಉದ್ಯೋಗ ಸೃಷ್ಟಿ ಮಾಡ್ತಿರೋದು, ತೆರಿಗೆ ನೀಡ್ತಿರೋದು ಕೆಲವೇ ರಾಜ್ಯಗಳು. ಬೇರೆ ರಾಜ್ಯಕ್ಕೆ ಕೊಡಬೇಡಿ ಎನ್ನಲ್ಲ, ಆದರೆ ಇಷ್ಟೊಂದು ತಾರತಮ್ಯನಾ?. ಪುಕ್ಸಟ್ಟೆ ಭಾಷಣ ಮಾಡುವ ಕೇಂದ್ರ ಸಚಿವರು ಎಲ್ಲೋದ್ರು? ಎಂದು ಪ್ರಶ್ನಿಸಿದ್ದಾರೆ.

ಜೋಷಿ ಅವರಿಗೆ ಎಲ್ಲದರಲ್ಲೂ ಒಪಿನಿಯನ್ ಇದೆ.ಸಮೀಕ್ಷೆ, ಸಿದ್ದರಾಮಯ್ಯ, ನನ್ನ ಬಗ್ಗೆ ಒಪಿನಿಯನ್ ಇದೆ . ಆದ್ರೆ ಇದರಲ್ಲಿ ಏನ್ ಒಪಿನಿಯನ್ ಇದೆ . ಜಿಎಸ್‌ಟಿ ಸುಧಾರಣೆಯಲ್ಲಿಯೂ ನಮಗೆ ನಷ್ಟ ಆಗ್ತಿದೆ. ಬಿಜೆಪಿ ಎಂಪಿಗಳನ್ನ ಆಯ್ಕೆ ಮಾಡಿರೋದು ಮೋದಿ ಮನ್‌ ಕಿ ಬಾತ್ ಕೇಳಲ್ಲ. ಸ್ವಲ್ಪವಾದರೂ ಸಾಮರ್ಥ್ಯ ತೋರಿಸಿ, ಮೋದಿ ಮುಂದೆ ಕರ್ನಾಟಕ್ಕೆ ಆದ ಅನ್ಯಾಯದ ಬಗ್ಗೆ ಮಾತಾಡಲಿ. ಯುಪಿಗೆ ಕೊಡಬೇಡಿ ಎನ್ನಲ್ಲ, ಮಧ್ಯಪ್ರದೇಶಕ್ಕೆ ಕೊಡಬಾರದು ಎನ್ನಲ್ಲ . ಆದರೆ ನಾವೇನ್ ತಪ್ಪು ಮಾಡಿದ್ದೇವೆ.ನಮಗೆ ಶಿಕ್ಷೆ ಸಿಗ್ತಿರೊದು ಚೆನ್ನಾಗಿ ಉದ್ಯೋಗ ಸೃಷ್ಟಿ ಮಾಡ್ತಿರೊದಕ್ಕೆ. ಯುಪಿಯಲ್ಲಿ ನಮ್ ದುಡ್ಡು ತಕೊಂಡು ಏನ್ ಮಾಡ್ತಿದ್ದಾರೆ . ಸ್ಕೂಲ್ ಕಾಲೇಜ್ ಕಟ್ಟಿಸುತ್ತಿದ್ದಾರಾ .ಲಕ್ಷ ದ್ವೀಪೋತ್ಸವ ಮಾಡ್ತಿದ್ದಾರೆ, ಅದಕ್ಕೆ ಬೇಕಾ ನಮ್ಮ ದುಡ್ಡು? ಎಂದು ಕೇಳಿದ್ದಾರೆ.

ಮತಾಂತರಕ್ಕೆ ಜಾತಿ ಸಮೀಕ್ಷೆ ಪ್ರೇರಣೆ ಕೊಡ್ತಿದೆ ಎಂಬ ಪ್ರಹ್ಲಾದ್ ಜೋಷಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಬಿಜೆಪಿಯಲ್ಲಿ ಜಿ.ನಾ ರಾಮು ಎನ್ನುವವರಿದ್ದಾರೆ.ಅವರೇನ್ ಹೇಳಿದ್ದಾರೆ ಎಂದರೆ  ಬಿಜೆಪಿ ನಾಯಕರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದಿದ್ದಾರೆ .ಸಮೀಕ್ಷೆಯಲ್ಲಿ ಕ್ರೈಸ್ತ ಧರ್ಮು ಉಲ್ಲೇಖ ಇದ್ದಾಗ ಬಿಜೆಪಿ ಯಾಕೆ ಇಷ್ಟು ವಿರೊಧ ಮಾಡ್ತಿದೆ ಎಂದು. ಚಿನಾ ರಾಮು ಹೇಳ್ತಾರೆ ಎಲ್ಲರ ಸತ್ಯ ಹೊರಗೆ ಬರುತ್ತೆಂದು. ಯಾರು ಯಾರು ದಲಿತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಹೊರ ಬರುತ್ತೆಂದು ವಿರೋಧ ಮಾಡಿದ್ದು.ಮೊದಲು ಬಿಜೆಪಿ ಅವರು, ಜೋಷಿ ಅವರ ಪಾರ್ಟಿಯಲ್ಲಿ ಘರ್ ವಾಪಸಿ ಮಾಡಲಿ. ಆಮೇಲೆ ಬೇರೆಯವರಿಗೆ ಉಪದೇಶ ಮಾಡಲಿ. ಮಾತಾಡೋದ್ರಲ್ಲಿ ಸೆನ್ಸ್ ಇದ್ಯೇನ್ರಿ ಇವರಿಗೆ, ಸರ್ವೇ ಮಾಡಿದ್ರೆ ಮತಾಂತರ ಆಗ್ತಾರಾ. ನಾಳೆ ನ್ಯಾಷನಲ್ ಸೆನ್ಸ‌ಸ್ ಆಗುತ್ತೆ ಆಗ ಎಲ್ಲರು ಮತಾಂತರ ಆಗ್ತಾರ?. ಇವರನ್ನ ಹೇಗೆ ಮಂತ್ರಿ ಮಾಡಿದ್ರೋ, ಹೇಗೆ ಇವರು ಎಂಪಿಯಾಗಿ ಎಲೆಕ್ಟ್ ಆಗ್ತಾರೋ .ಮೊದಲು ಚಿನಾ ರಾಮು ಅವರ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಎಷ್ಟು ಜನ, ಯಾರ್ ಯಾರು ಎಲ್ಲೆಲ್ಲಿ ಮತಾಂತರ ಆಗಿದ್ದಾರೆ. ಮತ್ತು ಅವರೆಲ್ಲರ ಘರ್ ವಾಪಸಿ ಯಾವಾಗ ಜೋಷಿ ಅವರು ಮಾಡ್ತಾರೆ. ಅದಾದ ಮೇಲೆ‌ ಉಳಿದಿದ್ದು ಮಾತಾಡೋಣ ಎಂದಿದ್ದಾರೆ.

ನಾರಾ ಲೋಕೇಶ್ ಬೆಂಗಳೂರಿನ ಹೂಡಿಕೆ‌ದಾರರಿಗೆ ಆಹ್ವಾನ‌ ನೀಡಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಆಂದ್ರಪ್ರದೇಶದಲ್ಲಿ ಏನೂ ಇಲ್ಲ.ಕರ್ನಾಟಕದ ಬಂಡವಾಳದ ವಾತಾವರಣ ಸೆಳೆಯಲು ಅವರು ಪ್ರಯತ್ನ ಮಾಡ್ತಿದ್ದಾರೆ. ಪಾಪ ಏನ್ಮಾಡೋಕಾಗುತ್ತೆ,ಅವರಿಗೆ ಅದು ಸಾಧ್ಯವಾಗ್ತಿಲ್ಲ. ಅಮರಾವತಿಗೆ ಮೋದಿ ಹೆಚ್ಚುವರಿ 10 ಸಾವಿರ ಕೋಟಿ ಅನುದಾನ ಕೊಟ್ಟರು ಆದ್ರೂ ಆಗ್ತಿಲ್ಲ. ಇದು ರಾತ್ರೋ ರಾತ್ರಿ ಆಗಲಾದರ ಕೆಲಸ. ಪ್ರತಿ ಸರಿ‌ ಏನಾದರೂ ಕಂಪ್ಲೇಂಟ್ ಮಾಡಿದಾಗ ಇಲ್ಲಿ‌ ಬನ್ನಿ ಎನ್ನೋದು .ಅವರದ್ದೇ ಎಲ್ಲಾ ಚೆನ್ನಾಗಿದೆ ನಮ್ಮದೇನು ಇಲ್ಲ ಅಂತ. ಪದೇ ಪದೇ ಕರ್ನಾಟಕಕ್ಕೆ, ಬೆಂಗಳೂರಿಗೆ ಅಪಮಾನ ಮಾಡೊದು ಸರಿಯಲ್ಲ. ನಮ್ಮೆಲ್ಲರ ಜವಾಬ್ದಾರಿ ಇದೆ,ಒಳ್ಳೆ ರೋಡ್ ಕೊಡಬೇಕು ಎನ್ನೊದಿದೆ. ಅವರು ಅವರ ಇನ್ವೆಸ್ಟ್‌ಮೆಂಟ್ ಎನ್ವಾಯರ್ ಮೆಂಟ್ ಪ್ರೋಟೆಕ್ಟ್ ಮಾಡಲು ಏನ್ಮಾಡ್ಬೇಕೋ ಮಾಡ್ತಾರೆ.

ನಾವು ಏನ್ ಮಾಡಬೇಕೋ ಮಾಡ್ತೇವೆ. ಆದರೆ ಕರ್ನಾಟಕದ ಬಗ್ಗೆ ಪದೇ ಪದೇ ಮಾತಾಡೋದು ಸರಿಯಲ್ಲ ಎಂದು ತಿಳಿಸಿದ್ದಾರ