ನವದೆಹಲಿ: ಭಾನುವಾರ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ 30 ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಅದರ ಬೆನ್ನಲ್ಲೇ ಇಂದು ಆ ಎಲ್ಲಾ ಸಚಿವರಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಮೋದಿ ಸಂಪುಟ 3.0 ದಲ್ಲಿ 5 ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು, ಕ್ಯಾಬಿನೆಟ್ ಮಂತ್ರಿಗಳು, ಮತ್ತು 36 ರಾಜ್ಯ ಸಚಿವರಿದ್ದಾರೆ.
27 . ಇತರ ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರು , 10 ಜನ ಪರಿಶಿಷ್ಟ ಜಾತಿಯ ಸಚಿವರು, 5 ಜನ ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಹಾಗೇ 5 ಮಂದಿ ಅಲ್ಪಸಂಖ್ಯಾತ ಮಂತ್ರಿಗಳು ಮೋದಿ ಸಂಪುಟದಲ್ಲಿದ್ದಾರೆ. 18 ಹಿರಿಯ ಸಚಿವರು ಸಚಿವಾಲಯಗಳ ಮುಖ್ಯಸ್ಥರಾಗಲಿದ್ದಾರೆ.
ಇನ್ನು ವಿಶೇಷ ಅಂದ್ರೆ ಮೋದಿ ಕ್ಯಾಬಿನೆಟ್ ನಲ್ಲಿ 43 ಮಂತ್ರಿಗಳು 3 ಅವಧಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದವರಾಗಿದ್ದಾರೆ. 39 ಜನರು ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದರಾಗಿದ್ದಾರೆ.
ಹಾಗಾದ್ರೆ ಯಾರಿಗೆ ಯಾವ ಖಾತೆ ಅನ್ನೋದನ್ನು ನೋಡೋಣ..
ಅಮಿತ್ ಶಾ: ಗೃಹ ಖಾತೆ
ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ
ನಿರ್ಮಲಾ ಸೀತಾರಾಮನ್: ಹಣಕಾಸು ಇಲಾಖೆ
ಅಶ್ವಿನಿ ವೈಷ್ಣವ್: ಮಾಹಿತಿ ಮತ್ತು ಪ್ರಸಾರ ಖಾತೆ
ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಎಸ್.ಜೈಶಂಕರ್: ವಿದೇಶಾಂಗ ವ್ಯವಹಾರಗಳ ಖಾತೆ
ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಮನಸುಖ್ ಮಾಂಡವೀಯ: ಕಾರ್ಮಿಕ ಇಲಾಖೆ
ಸರ್ಬಾನಂದ ಸೋನವಾಲ್: ಬಂದರು, ಹಡಗು ಮತ್ತು ಜಲಮಾರ್ಗ ಸಚಿವ
ಕಿರಣ್ ರಿಜಿಜು: ಸಂಸದೀಯ ವ್ಯವಹಾರಗಳ ಸಚಿವಾಲಯ
ಕೆ.ರಾಮಮೋಹನ್ ನಾಯ್ಡು: ನಾಗರಿಕ ವಿಮಾನಯಾನ ಸಚಿವಾಲಯ
ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವಾಲಯ
ಪೀಯೂಷ್ ಗೋಯಲ್: ವಾಣಿಜ್ಯ ಸಚಿವಾಲಯ
ಮನೋಹರ್ ಲಾಲ್ ಖಟ್ಟರ್: ಇಂಧನ, ವಸತಿ, ನಗರಾಭಿವೃದ್ಧಿ
ಶಿವರಾಜ್ ಸಿಂಗ್ ಚೌಹಾಣ್: ಕೃಷಿ, ಗ್ರಾಮೀಣಾಭಿವೃದ್ಧಿ
ಪ್ರಲ್ಹಾದ ಜೋಶಿ: ಆಹಾರ ಮತ್ತು ನಾಗರಿಕ ಇಲಾಖೆ
ಭೂಪೇಂದ್ರ ಯಾದವ್: ಪರಿಸರ ಇಲಾಖೆ
ಹರದೀಪ್ ಸಿಂಗ್ ಪುರಿ: ಪೆಟ್ರೋಲಿಯಂ
ಗಜೇಂದ್ರ ಸಿಂಗ್ ಶೇಖಾವತ್: ಸಂಸ್ಕೃತಿ ಮತ್ತು ಪ್ರವಾಸೋದ್ಯಮ