ಬೆಂಗಳೂರು; ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಮುನಿರತ್ನ ಅವರು ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದಾರೆ.
ಡಿಸ್ಚಾಜ್೯ ಬಳಿಕ ಮಾತನಾಡಿದ ಶಾಸಕ ಮುನಿರತ್ನ ಸದ್ಯ ನನ್ನ ಆರೋಗ್ಯ ಸ್ಥಿರವಾಗಿದೆ. ಇಂಜೆಕ್ಷನ್ ಮೆಡಿಸಿನ್ ಕೊಟ್ಟಿದ್ದಾರೆ. ಪ್ರೆಸ್ ಮೀಟ್ ಮಾಡುತ್ತೇನೆ. ಆಗಲೇ ಮಾತಾನಾಡುತ್ತೇನೆ. ಪ್ರಕರಣದಲ್ಲಿ ಪೊಲೀಸರು ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಎಲ್ಲವನ್ನ ಮಧ್ಯಾಹ್ನ ಮಾತಾನಾಡುತ್ತೇನೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.
ಇನ್ನು ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ನಿನ್ನೆ ಒಬ್ಬ ಶಾಸಕರು ಕಾರ್ಯಕ್ರಮ ಮಾಡುತ್ತಿದ್ದಾರೆ. ಆ ವೇಳೆ ಮೊಟ್ಟೆಯಿಂದ ಹಲ್ಲೆ ಮಾಡಿದ್ದಾರೆ. ಮೊಟ್ಟೆದಲ್ಲಿ ಆ್ಯಸಿಡ್ ಹಾಕಿ ಹಲ್ಲೆ ಮಾಡಿದ್ದಾರೆ. ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ ಇದೆ ಅನ್ಸುತ್ತೆ ಎಂದಿದ್ದಾರೆ.
ಮುನಿರತ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ.ಗೃಹ ಖಾತೆ ಯಾಕೆ ಪರಮೇಶ್ವರ್ ಇಟ್ಕೊಂಡಿದ್ದಾರೆ ಗೊತ್ತಿಲ್ಲ. ಮುಂದೆ ರಾಜ್ಯದ ಜನ ಸರಿಯಾದ ಪಾಠ ಕಲಿಸುತ್ತಾರೆ.ಈ ವಿಚಾರವನ್ನು ಡೈವರ್ಟ್ ಮಾಡಿದ್ರೆ ತನಿಖೆಯಲ್ಲಿ ಹೊರಬರುತ್ತದೆ. ಆದ್ರೆ ಅದಕ್ಕು ಮುನ್ನ ಕಾಮೆಂಟ್ ಬೇಡ . ಪೊಲೀಸರು ಎಲ್ಲಾ ತನಿಖೆ ಮಾಡಲಿ. ಅದಕ್ಕೆ ಸಾಕ್ಷ್ಯಾಧಾರ ಬೇಕಲ್ಲ. ಪೊಲೀಸರೇ ನಮಗೆ ಕಾಪಾಡಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರ ಮೇಲೆ ನಂಬಿಕೆ ಇದೆ. ಸರ್ಕಾರದ ಕೈ ಗೊಂಬೆ ಎಂಬ ಮುನಿರತ್ನ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಪದೇ ಪದೇ ನಮ್ಮ ಶಾಸಕರ ಮೇಲೆ ದಾಳಿ ಆಗ್ತಿದೆ. ನಾವು ಹೋರಾಟ ಕೈಗೊಳ್ಳುತ್ತೇವೆ ಎಂದಿದ್ದಾರೆ.
ತಲೆಗೆ ಮೊಟ್ಟೆ ಬಿದಿದ್ದಕ್ಕೆ ಮುನಿರತ್ನ ಕೆಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದ್ಯಾಕೆ?; ಶಾಸಕ ಮುನಿರತ್ನ ವಿರುದ್ದ ಲಗ್ಗೆರೆ ನಾರಾಯಣಸ್ವಾಮಿ ವಾಗ್ದಾಳಿ
ಬೆಂಗಳೂರು; ತಲೆಗೆ ಮೊಟ್ಟೆ ಬಿದಿದ್ದಕ್ಕೆ ಮುನಿರತ್ನ ಕೆಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದ್ಯಾಕೆ? ಎಂದು ಶಾಸಕ ಮುನಿರತ್ನ ವಿರುದ್ದ ಲಗ್ಗೆರೆ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಮುನಿರತ್ನ ವಿರುದ್ದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಲಗ್ಗೆರೆ ನಾರಾಯಣಸ್ವಾಮಿ ಮೊಟ್ಟೆ ಹೊಡೆದಿದ್ದಾರೆ ಎಂದು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಅಶೋಕ್, ಸಿಟಿ ರವಿ ಹಾಗೂ ಕುಮಾರಸ್ವಾಮಿ ಒಕ್ಕಲಿಗ ಅಲ್ಲವಾ? ರೇವಣ್ಣ ಅವರೇ ನಿಮ್ಮ ಮಕ್ಕಳನ್ನ ಜೈಲಿಂದ ಬಿಡಿಸಿ.ಆ ಮೇಲೆ ಮುನಿರತ್ನ ಪರ ಮಾತಾಡಿ ಎಂದು ತಿರುಗೇಟು ಕೊಟ್ಟಿದ್ದಾರೆ.
ರೇಪಿಸ್ಟ್ ಪರ ಮಾತಾಡ್ತಾರೆ. ಸಿ ಟಿ ರವಿ ಅವರು ನಿತ್ಯ ಸುಮಂಗಲಿ ಅಂತಾರೆ. ಇವತ್ತು ಮೊಟ್ಟೆ ಪ್ರಸಂಗ ಆಗ್ತಿದೆ. ಯಾವತ್ತು ರಾಜೀನಾಮೆ ನೀಡುತ್ತೀಯಾ ಮುನಿರತ್ನ? ನಿನ್ನ ಕೆಟ್ಟ ಕಾಲ ಬಂದಿದೆ ಮುನಿರತ್ನ ಎಂದು ಎಚ್ಚರಿಸಿದ್ದಾರೆ. ನನ್ನನ್ನು ಕೊಲೆ ಮಾಡೋಕೆ ಬರ್ತಾರೆ ಅಂತ ಮುನಿರತ್ನ ಹೇಳಿದ್ದಾರೆ. ಪೊಲೀಸರು ಹೇಳಿದ್ದಾರೆ ಎಂದಿ ಹೇಳ್ತಾರೆ, ಆದ್ರೆ ಯಾವ ಪೊಲೀಸ್ ಅಧಿಕಾರಿ ಹೇಳಿದ್ದಾರೆ? ಯಾರು ಹೀಗೆ ಹೇಳಿದ್ದಾರೆ ಎಂದು ಅವರು ಬಹಿರಂಗ ಮಾಡಬೇಕು..ಸತ್ಯ ಆಚೆ ಬರುತ್ತದೆ. ವಿಜಯೇಂದ್ರ ಅವರಿಗೆ ಸಂತ್ರಸ್ತ ಹೆಣ್ಮಗುವಿನ ಜೊತೆ ಮಾತನಾಡಲು ಸಮಯ ಇರ್ಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುನಿರತ್ನ ಅವರು ಹೇಳುತ್ತಾರೆ ಆ್ಯಸಿಡ್ ದಾಳಿ ಆಗಿದೆ ಅಂತಾ. ಆ್ಯಸಿಡ್ ದಾಳಿ ಆಗಿದ್ರೆ ಗಾಯ ಆಗಿರೋದು. ಆದ್ರೆ ಈಗ ಏನೂ ಆಗಿಲ್ಲ. ಮೊಟ್ಟೆಯಲ್ಲಿ ಆ್ಯಸಿಡ್ ಹೇಗೆ ಬರುತ್ತದೆ?.ದಲಿತ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಕಾರಿನ ಗಾಜು ಹೊಡೆದಿದ್ದಾರೆ. ಆ್ಯಸಿಡ್ ಹೊಡೆದಿದ್ದಾರೆ ಅಂತಾರೆ ಆ್ಯಸಿಡ್ ಹೊಡೆದಿದ್ರೆ ಜನ ಉಳಿಯುತ್ತಿದ್ರಾ?. ಅಕ್ಕ ಪಕ್ಕದವರ ಕೈಕಾಲುಗಳು ಸಹ ಸುಟ್ಟು ಹೋಗ ಬೇಕಿತ್ತು .ಅವರೇ ಮೊಟ್ಟೆ ಹೊಡೆಸಿಕೊಂಡು ನಮ್ಮ ತಲೆಗೆ ಕಟ್ಟುತ್ತಿದ್ದಾರೆ ಎಂದಿದ್ದಾರೆ.
ಮುನಿರತ್ನ ಆಂಟಿ ಪ್ರೀತ್ಸೆ ಸಿನಿಮಾದ ಪ್ರೋಡ್ಯೂಸರ್ ..ನಿನ್ನೆ ಮೊಟ್ಟೆ ಕಾರ್ಯಕ್ರಮದ ಡ್ರೈರೆಕ್ಟರ್ , ಪ್ರೋಡ್ಯೂಸರ್.. ಆ್ಯಕ್ಟರ್ ಸಹ ನಮ್ಮ ಶಾಸಕ ಮುನಿರತ್ನ ಅವರು ಎಂದು ಲೇವಡಿ ಮಾಡಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಿ ವಿರೋಧವನ್ನು ವ್ಯಕ್ತಪಡಿಸೋದಕ್ಕೆ ನಮ್ಮ ಜನಾಂಗದ ಮಹಿಳೆಯರು ಹೋಗಿದ್ರು. ಆದ್ರೆ ಅವರನ್ನು ಪೊಲೀಸರು ವಾಪಸ್ ಕಳಿಸಿದ್ರು. ಅದಾದ ನಂತರ ಮುನಿರತ್ನ ಕಾರ್ಯಕ್ರಮ ಮುಗಿಸಿ ನಡೆದು ಹೋಗುವಾಗ ಅವರ ತಲೆಗೆ ಮೊಟ್ಟೆ ಬಿದ್ದಿರೋದು. ಆ್ಯಸಿಡ್ ಅಂತ ಹೇಳಿದ ಕೂಡಲೇ ಮೊಟ್ಟೆ ಬೀಳುತ್ತೆ. ಅವರ ತಲೆಗೆ ಮೊಟ್ಟೆ ಬಿದ್ದಿದ್ದು ಮುಂಭಾಗದಲ್ಲಿ . ಆದ್ರೆ ಅವ್ರು ಹೇಳ್ತಾರೆ ನನ್ನ ತಲೆ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಅಂತಾ.ಹಾಗಾಗಿ ಸಿಟಿ ಸ್ಕ್ಯಾನ್ ಮಾಡಿಸ ಬೇಕು ಅಂತಾರೆ . ತಲೆಗೆ ಮೊಟ್ಟೆ ಬಿದಿದ್ದಕ್ಕೆ ಮುನಿರತ್ನ ಕೆಸಿ ಜನರಲ್ ಹೆರಿಗೆ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗ್ತಾರೆ .ಆ್ಯಸಿಡ್ ದಾಳಿ ಆಗಿದ್ರೆ ಮುನಿರತ್ನ ಜೊತೆಗೆ ಸಾಕಷ್ಟು ಜನ ಇದ್ರು.ಪೊಲೀಸ್ ಅಧಿಕಾರಿಗಳು ಇದ್ರೂ ಅವರಿಗೆ ಯಾರಿಗೂ ಏನು ಆಗಿಲ್ಲ . ಮುನಿರತ್ನ ಅಮಾಯಕರ ಕೊಲೆಗೆ ಪ್ರಯತ್ನ ಪಟ್ಟು ಅವರ ಮೇಲೆ ಯಾಕೆ ಯಾವುದೇ ಕ್ರಮ ಆಗಿಲ್ಲ. ಬಹಳಷ್ಟು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಸಾಕ್ಷಿ ಸಮೇತವಾಗಿ ಇದ್ರೂ ಯಾಕೆ ಈ ಸಮರ್ಥನೆ ಮಾಡಿಕೊಳ್ತಾ ಇದ್ದಾರೆ .ನಮ್ಮ ಜನಾಂಗದ ಮಹಿಳೆಯರ ಬಗ್ಗೆ, ತಾಯಂದಿರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ.ನಾವು ನೇರವಾಗಿ ಹೋರಾಟ ಮಾಡುತ್ತೇವೆ .ಮೊಟ್ಟೆ ಹೊಡೆಯ ಬೇಕಿಲ್ಲ. ನಮ್ಮ ತಾಯಂದಿರ ಬಗ್ಗೆ ಮಾತನಾಡಿದ್ರೆ ಸುಮ್ನೆ ಬಿಟ್ಟಬಿಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅನುಕಂಪ ಕ್ರಿಯೆಟ್ ಮಾಡಿಕೊಳ್ಳೋದಕ್ಕೆ ಅವರೆ ಮೊಟ್ಟೆ ಹೊಡೆಸಿಕೊಂಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಅವನನ್ನು ಕ್ಷೇತ್ರಕ್ಕೆ ಕಾಲಿಡೋದಕ್ಕೆ ಬಿಡೋದಿಲ್ಲ.ನಮ್ಮ ಒಕ್ಕಲಿಗ ಜನಾಂಗದ ಮಹಿಳೆಯರ ಬಗ್ಗೆ ಮಾತನಾಡಿದ್ದಾನೆ ನಮ್ಮ ಹೋರಾಟ ನಿರಂತರವಾಗಿ ಇರುತ್ತೆ. ಇಷ್ಟಾದ್ರೂ ನಮ್ಮ ಬಿಜೆಪಿ ನಾಯಕರು ವಹಿಸಿಕೊಳ್ಳೋದಕ್ಕೆ ಸಿಡಿಗಳೇ ಕಾರಣ. ಅವರೆಲ್ಲರ ಸಿಡಿಗಳನ್ನು ಮುನಿರತ್ನ ಇಟ್ಟುಕೊಂಡು ಅವರನ್ನು ಎದುರಿಸುತ್ತಾ ಇದ್ದಾನೆ . ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ ಸ್ವಾಮಿಯ ವಿಡಿಯೋ ಇದೆ ಅಂತ ತೋರಿಸೋದಕ್ಕೆ ಬಂದ .ನಾನು ನೋಡಲಿಲ್ಲ ಥೂ ಅಸಹ್ಯ ನಾನು ನೋಡೋದಿಲ್ಲ ಅಂದೇ ಎಂದಿದ್ದಾರೆ.